Headlines

ಕರ್ನಲ್ ಸೋಫಿಯಾ ಮಾವನವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸನ್ಮಾನ

ಕರ್ನಲ್ ಸೋಫಿಯಾ ಮಾವನವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸನ್ಮಾನ
ಗೋಕಾಕ:

ಗೋಕಾಕನಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಮಾವ ಗೌಸಸಾಬ್ ಬಾಗೇವಾಡಿ ಅವರನ್ನು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಕರ್ನಲ್ ಸೋಫಿಯಾ ಖುರೇಷಿ ಅವರು ಗೋಕಾಕ ಕ್ಷೇತ್ರದ ಸೊಸೆ ಎಂಬುವುದೇ ದೊಡ್ಡ ಹೆಮ್ಮೆ. ಅವರು ಕೇವಲ ಸೊಸೆ ಮಾತ್ರವಲ್ಲ, ಈ ಭಾಗದ ಮಗಳು ಹೌದು. ಅವರ ಸಾಧನೆಯನ್ನು ಇಡೀ ದೇಶವೇ ಹೆಮ್ಮೆಪಡುವಂತಾಗಿದೆ. ಗೋಕಾಕ ಹೆಸರನ್ನು ಇಡೀ ದೇಶಕ್ಕೆ ವಿಸ್ತರಿಸುವ ಮೂಲಕ ಅವರು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಈ ಭಾಗದ ಸೊಸೆ ಸೋಫಿಯಾ ಖುರೇಷಿ ಅವರು ಆಪರೇಷನ್ ಸಿಂಧೂರ್ ನಡೆಸಿ ಇಡೀ ಪ್ರಪಂಚವೇ ಇತ್ತ ನೋಡುವಂತೆ ಮಾಡಿದ್ದಾರೆ. ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಅವರು ಸೇರಿದಂತೆ ದೇಶದ ಯೋಧರಿಗೆ ಮತ್ತಷ್ಟು ಶಕ್ತಿ ನೀಡಲೆಂದು

ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ. ನಮ್ಮ ಭಾರತದ ಎಲ್ಲ ಯೋಧರಿಗೆ ಶಕ್ತಿ ತುಂಬೋಣ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ನ್ಯಾಯವಾದಿ ಎ. ಎಸ್. ಪರಪ್ಪನವರ್, ದೂರವಾಣಿ ಸಲಹಾ ಸಮಿತಿ ಸದಸ್ಯ ಪ್ರಧಾನಿ ಕಳಸನ್ನವರ, ಮಹಾದೇವ ತಾಂಬಡಿ, ರಮೇಶ ಬಿಲಕುಂದಿ, ಜಂಬೂ ಚಿಕ್ಕೋಡಿ, ಶಾಸಕರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!