ಬೆಳಗಾವಿ. ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದ ಪವಿತ್ರ ಗ್ರಂಥ ಕುರಾನ ಸುಟ್ಟ ಪ್ರಕರಣದ ಹಿನ್ನೆಲೆಯಲ್ಲಿ ನಾಳೆ ದಿ.16 ರಂದು ಬೆಳಗಾವಿ ಬಙದ್ ಗೆ ಕರೆ ನೀಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟರ್..
ಕಳೆದ ಕೆಲ ದಿನಗಳ ಹಿಂದೆ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿನ ಕುರಾನನ್ನು ಕಿಡಿಗೇಡಿಗಳು ಜಮೀನಿನಲ್ಲಿ ದಹನ ಮಾಡಿದ್ದರು.
ಈ ಬಗ್ಗೆ ಪ್ರತಿಭಟನೆ ನಡೆಸಿದ ಸಮಾಜ ಬಾಂಧವರು ಆರೋಪಿಗಳ ಬಂಧನಕ್ಕೆ ಮೂರು ದಿನದ ಗಡುವು ನೀಡಿದ್ದರು.

ಆದರೆ ಪೊಲೀಸರು ಇದುವರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದ್ದರ ಹಿನ್ನೆಲೆಯಲ್ಲಿ ನಾಳೆ ದಿ. 16 ರಂದು ಬಂದ್ ಗೆ ಕರೆ ನೀಡಲಾಗಿದೆ ಎಂದು ಗೊತ್ತಾಗಿದೆ.
ಘಟನೆ ನಡೆದ ನಂತರ ಶಾಸಕ ಆಸೀಫ್ ಶೇಠ ಮತ್ತು ಸಚಿವೆ ಹೆಬ್ಬಾಳ್ಳರ್ ಶಾಂತಿ ಸಮಿತಿ ಸಭೆ ನಡೆಸಿದ್ದರು. ಆದರೆ ಈಗ ಆರೋಪಿಗಳ ಪತ್ತೆಯಾಗದೇ ಇರುವುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ.