ಹಾಲು-ಅಲ್ಕೋಹಾಲ್ ಸರ್ಕಾರ: ಬೆಲೆ ಏರಿಕೆ ಬಹುಮಾನ, ಜನರಿಗೆ ನಿರಂತರ ದಂಡ!
ಬೆಳಗಾವಿ,
ರಾಜ್ಯ ಸರ್ಕಾರದ ಎರಡು ವರ್ಷದ “ಸಾಧನೆ” ಸಮಾವೇಶದ ಬೆನ್ನಲ್ಲೇ, ಬೆಳಗಾವಿಯಲ್ಲಿ ಬಿಜೆಪಿ ನಾಯಕರು “ಸಂಪಾದನೆ” ಸಮಾವೇಶವೊಂದನ್ನು ಮಾಡಿ, ಕಸಿದುಕೊಂಡ ಸಾಧನೆಗಳ ಪಟ್ಟಿಯನ್ನು ಬಿಚ್ಚಿದ್ದಾರೆ.
ಹಾಲು, ಅಲ್ಕೋಹಾಲ್ – ಎಲ್ಲವೂ ಗರಿಷ್ಠ ಮಟ್ಟಕ್ಕೆ!

ಅತ್ತ ಹಾಲು ದರ ಏರಿಕೆ, ಇತ್ತ ಲಿಕ್ಕರ್ ದರವೂ ಮೇಲೇರ್ತಾ ಇದೆ. ಇದು , ಪೆಗ್-ಪೆಗ್ ಬಜೆಟ್!” ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ವ್ಯಂಗ್ಯವಾಡಿದರು.
“ಕುಡಿಯುವ ನೀರಿಗೆ ಬಜೆಟ್ ಇಲ್ಲ, ಆದರೆ ಕುಡಿದು ನಲಿಯುವವರಿಗೆ ದರದ ಉಡುಗೊರೆ ಇದೆ. ಇದು ಜನವಿರೋಧಿ ಸರ್ಕಾರ ಎಂದು ಕಟುವಾಗಿ ಚಾಟಿ ಬೀಸಿದರು.
ಕೊಡು – ಕಿತ್ತುಕೋ!
“ಒಂದು ಕೊಟ್ಟು, ಮೂರನ್ನು ಕಿತ್ತುಕೊಳ್ಳುವುದು ಈ ಸರ್ಕಾರದ ನೂತನ ಪರಂಪರೆ!” ಎಂದು ಅವರು ಹರಿಹಾಯ್ದರು.

ಅಭಯ ಪಾಟೀಲ್ ರು ಮಾತನಾಡಿ
“ರೈತರ ಪಂಪ್ ಸೆಟ್ ಗೆ ಹೆಚ್ಚಿನ ದರ ಮಾಡಿದ್ದಾರೆ. ಶೇ 55 ರಷ್ಟು ನೀರಿನ ದರ ಹೆಚ್ಚು ಮಾಡಿದ್ದಾರೆ . ಸ್ಟ್ಯಾಂಪ್ ಡ್ಯುಟಿ ಹೆಚ್ಚಳ ಮಾಡಿದ್ದಾರೆಂದರು.
ಮರಣ ಪ್ರಮಾಣ ಪತ್ರ ನೀಡಲು ಸಹ ದರ ಏರಿಕೆ ಮಾಡಿದ ಸರ್ಕಾರ , ಟ್ಯಾಕ್ಸ್ ಹೆಚ್ಚು ಮಾಡುವ ಸಾಧನೆ ಮಾಡಿದೆ ಎಂದರು.

ಸಂಜಯ ಪಾಟೀಲ್‌ರು ಇದು‘ATM’ ಸರ್ಕಾರ ಎಂದರು.
“ಇದು ಸಾಧನೆ ಸಮಾವೇಶ ಅಲ್ಲ – ಸಂಪಾದನೆ ಸಮಾವೇಶ!”
“ಕಾಂಗ್ರೆಸ್ ಸರ್ಕಾರ ಎಟಿಎಂ ಯಂತ್ರದಂತೆ ನಡೆದುಕೊಳ್ಳ್ತಾ ಇದೆ. ಜನ ಎಟಿಎಂ ಗೆ ಹೋಗಿ ಖಾಲಿ ಕೈಯಿಂದ ಹೊರ ಬರುತ್ತಿದ್ದಾರೆ!” ಎಂದರು.
ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡಿ, “ಇದು ಆಡಳಿತವಲ್ಲ, ಉಪದ್ರವ” ಎಂದು ಘೋಷಿಸಿದರು.