ಹೊರಗೆ ಹಂಗಿಲ್ಲ, ಒಳಗೆ ಹೋರಾಟವಿದೆ – ಹೊಸ ತಲೆಮಾರಿಗೆ ಪಾಠ ಹೇಳುವ ನಾಯಕರು
ಇ ಬೆಳಗಾವಿ ವಿಶೇಷ
ರಾಜ್ಯ ರಾಜಕೀಯವೇ ಬೇರೆ. ಅದರಲ್ಲಿ ಬೆಳಗಾವಿ ರಾಜಕೀಯವೇ ಬೇರೆ. ಇಲ್ಲಿ ಪಕ್ಷಕ್ಕಿಂತ ಸಹಕಾರಿ ರಾಜಕಾರಣ ಹೆಚ್ಚು. ಅದು ಎಲ್ಲಕ್ಜೂ ಅಡ್ಜೆಸ್ಟ್ ಆಗುತ್ತದೆ.
ಆದರೆ ಅದೇ ಬೆಳಗಾವಿ ಜಿಲ್ಲೆಯ ಇಬ್ಬರು ರಾಜಕಾರಣಿಗಳಲ್ಲಿ ಮಾತ್ರ ರಾಜೀಎನ್ನುವ ಮಾತೇ ಬಂದಿಲ್ಲ. ಆದರೆ ಇವರಿಬ್ಬರ ನಡುವೆ ರಾಜಕಾರಣ ತಿಕ್ಕಾಟ ಆರಂಭವಾಗಿದ್ದು ಎಲ್ಲಿ ಎನ್ನುವುದು ಇನ್ನೂ ನಿಗೂಢ..!
ಅದೇನೇ ಇರಲಿ. ಅದು ಅವರವರ ವೈಯಕ್ತಿಕ. ಆದರೆ ಅವರಿಬ್ಬರ ಕಾರ್ಯವೈಖರಿಯನ್ನು ರಾಜಕಾರಣವನ್ನು ಪಕ್ಕಕ್ಕಿಟ್ಡು ನೋಡಿದರೆ ವಾವ್ ಎನ್ನದೇ ಗತಿಯಿಲ್ಲ.
ಇಬ್ಬರೂ ನಾಯಕರು ತಮ್ಮ ತಮ್ಮ ಕ್ಷೇತ್ರದಲ್ಲಿ ತಮ್ಮದೇ ಆದ ನಡೆ ನುಡಿಯಿಂದ ಹೆಸರು ಮಾಡಿದವರು.
ಅವರಿಬ್ಬರ ಕಾರ್ಯವೈಖರಿಯನ್ನು ಜನರ ಮುಂದೆ ತೆರೆದಿಡುವ ಸಣ್ಣ ಪ್ರಯತ್ನ.
ಮತ್ತೊಂದು ಕಂತಿನಲ್ಲಿ ಪ್ರತ್ಯೇಕ ವಾಗಿ ಅವರ ಕಾರ್ಯವೈಖರಿ ಬಗ್ಗೆ ವಿವರಿಸಲಾಗುವುದು.
ಅಪರೂಪದಲ್ಲಿ ಅಪರೂಪ
ಇಂದು ರಾಜಕೀಯವು ಬಹುಪಾಲು ಭಾಷಣಗಳ ಹಿರಿಮೆಯಾಗಿ ಉಳಿದಿದೆಯೇನೋ ಎಂಬ ಅನುಮಾನ ಬಹುಮಟ್ಟಿಗೆ ನಿಜವಾಗುತ್ತಿದೆ. ಅಧಿಕಾರದ ಕುರ್ಚಿ ಎತ್ತಿದ ಮೇಲೆ ಹಲವರು ನೆಲದ ಸ್ಪರ್ಷವನ್ನು ಮರೆತವರು. ಆದರೆ, ಇಂತಹ ಕಾಲದಲ್ಲಿ ಕೂಡ ಸತೀಶ್ ಜಾರಕಿಹೊಳಿ ಮತ್ತು ಅಭಯ ಪಾಟೀಲ ಎಂಬ ಎರಡು ಹೆಸರುಗಳು ರಾಜಕೀಯಕ್ಕೆ ನೈಜ ತಳಹದಿಯ ಚಿತ್ತರೂಪವನ್ನು ನೀಡುತ್ತಿವೆ.
🛎️ ಸಚಿವರ ನಡೆ ತೀರಾ ಸರಳ – ಸಾಹುಕಾರ ಎಂದೇ ಹೆಸರಾದರೂ ಸಿಂಪಲ್ ಮ್ಯಾನ್ ಎಂದು ಹೆಸರಾದವರು.
ಸತೀಶ್ ಜಾರಕಿಹೊಳಿ – ಶತಮಾನ ಬದಲಿಸುವ ಪ್ರಾಜೆಕ್ಟುಗಳನ್ನು ಜಾರಿಗೆ ತರುವ ಅಧಿಕಾರದ ಭಾರವಿದೆ ಅವರ ಮೇಲೆ. ಆದರೆ ಅವರ ನಡೆ-ನಡವಳಿಕೆ ನೋಡಿ ಯಾರಾದರೂ “ಸಚಿವ” ಎಂದು ಗುರುತಿಸುವುದು ಕಷ್ಟ. ಸದಾ ದಕ್ಷತೆಯಿಂದ ಕೆಲಸ ಮಾಡುವ ಅವರು, 5 ಸ್ಟಾರ್ ಹೋಟೆಲ್ ಬದಲು ಸರಳ ದಾರಿ ಹೊಟೇಲ್‌ನಲ್ಲಿ ಕಾಫಿ ಕುಡಿಯುವಷ್ಟು ಆತ್ಮೀಯತೆಯ ವ್ಯಕ್ತಿ. ಚಾಪ್ಲಿನನಂತೆ ಮೌನದಿಂದ ಜನಮನ ಗೆಲ್ಲುವ ಈ ನಾಯಕ, ಛತ್ರಿಯ ತಳದಲ್ಲಿ ನಿಂತು ಪಿಎ ಕರೆದಾಡಿಸೋ ಲೋಕಕ್ಕೆ ವಿರೋಧಿಯಾಗಿ, ಜನಜೀವನದಲ್ಲಿ ಮೆರೆಹೊಮ್ಮುವ ಶ್ರಮಜೀವಿ.
🚴 ಶಾಸಕರಾದರೂ ಪಕ್ಷದ ಧ್ವಜವನ್ನೇ ಹಚ್ಚುವ ಅಭಯ ಪಾಟೀಲ –
ಕಾರ್ಯಕರ್ತರೊಂದಿಗೆ ಸದಾ ಬೆರೆಯುವ ಮತ್ತು ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಶ್ರಮ ಜೀವಿ.
ಅಭಯ ಪಾಟೀಲರ ಶಕ್ತಿ ಕೇವಲ ಭಾಷಣದಲ್ಲಿ ಮಾತ್ರವಲ್ಲ, ಬಡಾವಣೆಗೆ ತಲುಪುವ ಅವರ ಸೈಕಲ್ ಫೇರಿ. ಅದೇ ಅವರ ವಿಶೇಷ ರಾಜಕೀಯ ಕಾರ್ಯಕರ್ತರ ಮನೋಭಾವಕ್ಕೆ ಬೆಲೆಕೊಡುವ, ಸ್ವತಃ ಅಭಯ ಪಾಟೀಲರು ರಾತ್ರಿ 12 ಗಂಟೆಯವರೆಗೂ ನಿಂತು ಬಿಜೆಪಿ ಧ್ವಜ ಹಚ್ಚುವ ಶಾಸಕರು ಇವರು.
ಅಭಯ ಪಾಟೀಲರನ್ನು ನೋಡಿ ರಾಜಕೀಯದ ಹೊಸ ತಲೆಮಾರು ಕಲಿಯಬೇಕಾದದ್ದು ಏನೆಂದರೆ:
“ಪಕ್ಷದ ಪರವಾಗಿ ಮಾತಾಡೋದು ಸುಲಭ, ಆದರೆ ಪಕ್ಷದ ಧ್ವಜ ಹಚ್ಚೋದು ಶ್ರಮ. ನಾನು ಎರಡನ್ನೂ ಮಾಡುತ್ತೇನೆ.”
*ಅಭಯ ಪಾಟೀಲ ಅವರು ಬಿಜೆಪಿ ಹಿತಚಿಂತಕ. . ಕಾರ್ಯಕರ್ತರ ಜೊತೆ ಪಕ್ಷದ ಧ್ವಜ ಹಚ್ಚುವವರು.ಸೈಕಲ್ ಏರಿ ಜನರ ಮನೆ ಬಾಗಿಲಿಗೆ ಹೋಗುವವರು ಇದು ನೈಜ ರಾಜಕೀಯದ ಶುದ್ಧತೆ – ಇವತ್ತು ಇದನ್ನು ಇವತ್ತು ಹೆಚ್ಚಿನವರು ಮರೆತಿದ್ದಾರೆ.*