ಸ್ಥಾಯಿ ಸಮಿತಿಯ ಕಾರ್ಯಕ್ಷಮತೆಗೆ ತೊಂದರೆ
ನಡೆಯದ ಸಭೆಗೆ ಸದಸ್ಯರ ಅಸಮಾಧಾನ.
ಸಭೆ ಬಹಿಷ್ಕರಿಸಿದ ಸದಸ್ಯರು
ಬೆಳಗಾವಿ: ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಕೆಲ ಅಧಿಕಾರಿಗಳು ಸಭೆಗಳಿಗೆ ನಿರಂತರವಾಗಿ ಗೈರಾಗುತ್ತಿರುವುದು ಸದಸ್ಯರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಕಳೆದ ದಿನ ನಡೆದ ಸಭೆಯಲ್ಲಿಯೂ ಅಧಿಕಾರಿಗಳ ಹಾಜರಾತಿ ಕಾಣಿಸದೇ ಇದ್ದ ಪರಿಣಾಮ, ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದರು. ಈ ಹಿಂದೆ ಅಧ್ಯಕ್ಷೆ ರೇಷ್ಮಾ ಕಾಮಕರ ಅವರ ಸೂಚನೆಯಂತೆ ಗೈರಾದವರಿಗೆ ನೋಟಿಸ್ ನೀಡುವಂತೆ ಆದೇಶ ಮಾಡಲಾಗಿತ್ತು..
ಆದರೆ ನೋಟಿಸ್‌ಗೆ ಕೊಡಬೇಕಾದ ಅಧಿಕಾರಿಗಳೇ ಇಂದು ಗೈರಾಗಿದ್ದು, ಇದು ಸಭೆಯ ಗೌರವವನ್ನೇ ಕುಗ್ಗಿಸಿರುವಂತಾಗಿದೆ.
ಸಭೆಗಳ ಮೂಲಕ ಹಣಕಾಸು ಖಾತೆಯ ಪರಿಶೀಲನೆ ಮತ್ತು ಮಹತ್ವದ ನಿರ್ಧಾರಗಳು ನಡೆಯಬೇಕಿರುವಾಗ, ಅಧಿಕಾರಿಗಳ ಈ ರೀತಿಯ ನಿರ್ಲಕ್ಷ್ಯವು ಸಮಿತಿಯ ಉದ್ದೇಶವನ್ನೇ ವಿಫಲಗೊಳಿಸುತ್ತಿದೆ ಎಂದು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.