
ವಚನ ಬೆಳಕಲ್ಲಿ ಮಿಂಚಿದ ಬೆಳಗಾವಿ!
ಜಗಜ್ಯೋತಿ ಬಸವೇಶ್ವರ ಉತ್ಸವ ಮೆರವಣಿಗೆಯ ಶ್ರದ್ಧಾ ಶಕ್ತಿ ಪ್ರದರ್ಶನE belagavi spl: ಬೆಳಗಾವಿ: ತತ್ವ, ಭಕ್ತಿ, ಶ್ರದ್ಧಾ, ಹಾಗೂ ಸಂಸ್ಕೃತಿಯ ವೈಭವಭರಿತ ಜಗಜ್ಯೋತಿ ಬಸವೇಶ್ವರ ಜಯಂತಿಯ ಅದ್ದೂರಿ ಮೆರವಣಿಗೆಗೆ ಭಾನುವಾರ ಬೆಳಗಾವಿ ನಗರ ಸಾಕ್ಷಿಯಾಯಿತು. ಜಗಜ್ಯೋತಿ ಬಸವೇಶ್ವರ ಜಯಂತಿಯ ಅಂಗವಾಗಿ ನಡೆದ ಶೋಭಾ ಮೆರವಣಿಗೆಯು ಬಸವ ತತ್ತ್ವದ ಪ್ರತಿಧ್ವನಿಯಾಗಿ, ಭಕ್ತಿಯ ಜವಾಬ್ದಾರಿಯಾಗಿ, ಸಮಾಜದ ಒಗ್ಗಟ್ಟಿನ ಸಂಕೇತವಾಗಿ ಮೈಮೇಲಿಟ್ಟಿತ್ತು. ಮೆರವಣಿಗೆ, ನಗರದ ಕೇಂದ್ರವಾದ ಚೆನ್ನಮ್ಮ ವೃತ್ತದಲ್ಲಿ ಹರಗುರು ಚರಮೂರ್ತಿಗಳು ಹಾಗೂ ಲಿಂಗಾಯತ ಮುಖಂಡರ ಸಮೂಹದೊಂದಿಗೆ ಶ್ರದ್ಧಾ ಸಂಭ್ರಮದ ವಾತಾವರಣದಲ್ಲಿ…