ಸತೀಶ್ ಜಾರಕಿಹೊಳಿ ‘ಮೌನ ಸಾಧಕ’

ರಾಜಕೀಯ ಪಟದಲ್ಲಿ ಲಕ್ಷ್ಮಣ ರೇಖೆ ಮೀರಿ ಹಾಯ್ದು ಹೋಗುವವರ ನಡುವೆ, ಇಂಥ ನಿಷ್ಕಲ್ಮಷ ವ್ಯಕ್ತಿತ್ವಗಳು ವಿರಳ.
ಸತೀಶ್ ಜಾರಕಿಹೊಳಿ – ನಿಜಕ್ಕೂ ಈ ಕಾಲದ ‘ಮೌನ ಸಾಧಕ’
.

ಸಿಂಪ್ಲಿಸಿಟಿಯ ಸಂಕೇತ: ಸಾದಾ ಸೀದಾ ಹೊಟೇಲ್‌ ತಿಂಡಿಯಲ್ಲಿ ತೃಪ್ತಿ ಕಾಣುವ ಸಚಿವ ಸತೀಶ ಜಾರಕಿಹೊಳಿ

ಇಂದು ಸಚಿವ ಸತೀಶ್ ಜಾರಕಿಹೊಳಿ ಅವರ ಜನ್ಮ ದಿನ. ಈ ಹಿನ್ನೆಲೆಯಲ್ಲಿ ಅವರ ನಿತ್ಯದ ಸಿಂಪಲ್ ನಡೆಯನ್ನು ತೆರೆದಿಡುವ ಸಣ್ಣ ಪ್ರಯತ್ನ.

ಇ ಬೆಳಗಾವಿ ವಿಶೇಷ


ಬೆಳಗಾವಿ

ಇಂದಿನ ವರ್ಣರಂಜಿತ ರಾಜಕಾರಣದಲ್ಲಿ ಸರಳ ಬದುಕು ಬದುಕುವ ನಾಯಕರು ವಿಶಿಷ್ಟ ಸಾನ್ನಿಧ್ಯವನ್ನು ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ ಜಾರಕಿಹೊಳಿ ಅವರು ಅಂತಹ ‘ಸಿಂಪಲ್ ಮ್ಯಾನ್’ ಎಂದು ಹೆಸರು ಪಡೆದವರು.
ಇವರ ದೈನಂದಿನ ನಡೆ, ಭಾಷೆ, ಭೋಜನ, ವರ್ತನೆ—ಎಲ್ಲವೂ ಜನಸಾಮಾನ್ಯರ ಮನ ಗೆಲ್ಲುವಂತಹದು.

ಇತ್ತೀಚೆಗಷ್ಟೇ ಅವರು ಬೆಳಗಾವಿಯ ಸಿಂಪಲ್ ಹೊಟೇಲ್‌ನಲ್ಲಿ ಕುಳಿತುಕೊಂಡು ಅಲ್ಪೋಪಹಾರ ಸೇವನೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತು.
ಅವರ ಈ ಸ್ವಭಾವ ಜನರ ಮನಸ್ಸಿನಲ್ಲಿ ಉಳಿಯುತ್ತದೆ‌ ಗಮನಿಸಬೇಕಾದ ಸಂಗತಿ ಎಂದರೆ, ಇವರಿಗೆ ಯಾರೇ ಕರೆ ಮಾಡಿದರೂ ಅವರೇ ಅದನ್ನು ಸ್ವೀಕರಿಸುತ್ತಾರೆ. ಉಳಿದವರಂತೆ ಪಿಎ ಗಳ ಕಡೆಗೆ ಕೊಟ್ಡು ಬ್ಯುಜಿ ಎಂದು ತೋರಿಸಿಕೊಳ್ಳುವುದಿಲ್ಲ.

ಗಮನಿಸಬೇಕಾದ ಸಂಗತಿ ಎಂದರೆ , ಸಿಎಂ ಸಿದ್ಧರಾಮಯ್ಯ ಬಳಗದಲ್ಲಿ ಗುರುತಿಸಿಕೊಂಡಿರುವ ಸತೀಶ್ ಎಂದಿಗೂ ಅಧಿಕಾರಿಗಳ ಮೇಲೆ ದರ್ಪ ತೋರಿದವರಲ್ಲ. ಅಷ್ಟೇ ಏಕೆ ತಾವು ವಹಿಸಿಕೊಂಡ PWD ಇಲಾಖೆಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸವನ್ನು ಸಚಿವ ಸತೀಶ್ ಜಾರಕಿಹೊಳಿ ಮಾಡಿದ್ದಾರೆ.
ಅದೇ ಕಾರಣದಿಂದ ಅವರ ಇಲಾಖೆ ಇದುವರೆಗೆ ಯಾವುದೇ ವಿವಾದಕ್ಕೆ ಥಳಕು ಹಾಕಿಕೊಂಡಿಲ್ಲ.

ಸಾಹುಕಾರ ಆದ್ರೂ ಸಿಂಪಲ್ ..!
ರಾಜ್ಯದ ಎಲ್ಲೇ ಹೋದರೂ ಜಾರಕಿಹೊಳಿ ಕುಟುಂಬದವರನ್ನು ಪ್ರೀತಿಯಿಂದ ಜನ‌ ಸಾಹುಕಾರ ಎಂದೇ ಕರೆಯುತ್ತಾರೆ.
ಆದರೆ ಅವರು ಎಂದಿಗೂ ಯಾರ ಮುಂದೆಯೂ ಸಾಹುಕಾರಿಕೆ ದರ್ಪ ತೋರಿಸಿದವರಲ್ಲ. ಪ್ರತಿಯೊಬ್ಬರನ್ನು ಅತ್ಯಂತ ಗೌರವದಿಂದ ಮಾತನಾಡಿಸುವ ಪರಿಪಾಠವನ್ನು ಬೆಳೆಸಿಕೊಂಡು ಬಂದವರು. (E belagavi)

SATISH JARKIHOLI ಎಷ್ಟು ಸಿಂಪಲ್ ಎನ್ನುವುದನ್ನು ಹೇಳುತ್ತ ಹೋದರೆ ಅದಕ್ಕೆ ಕೊನೆ ಎಂಬುದೇ ಇರಲ್ಲ. ಸುತ್ತಲೂ ಜನರ ನಡುವೆ ಕುಳಿತು ಬಿಸಿಬಿಸಿ ಇಡ್ಲಿ-ವಡೆ ತಿನ್ನುವ ದೃಶ್ಯ ರಾಜಕಾರಣದಲ್ಲಿ ಅಪರೂಪ.

ಅಪರೂಪದ ರಾಜಕಾರಣಿ

ಅಧಿಕಾರದ ಹಾದಿಯಲ್ಲಿ ಎತ್ತರಕ್ಕೇರಿದ ಮೇಲೆ ಹಲವರು ‘ವಿ.ಐ.ಪಿ.’ ಆಗಿ ಬದಲಾಗುತ್ತಾರೆ. ಇನ್ನೂ ಕೆಕವರಿಗೆ ನೆಲವೇ ಕಾಣಲ್ಲ. ಆದರೆ ಸತೀಶ ಜಾರಕಿಹೊಳಿ ಮಾತ್ರ ತಮ್ಮ ಮೂಲ ಜೀವಿತವನ್ನು ಮರೆಯದ ಅಪರೂಪದ ರಾಜಕಾರಣಿ ಎನಿಸಿಕೊಂಡಿದ್ದಾರೆ.

ಛತ್ರಿ ಹಿಡಿಯೋಕೆ ಪಿಎ ಬೇಕಾಗಿಲ್ಲ. ..

ಇನ್ನೆಡೆ, ಕೆಲ ಸಚಿವರು ಮಳೆ ಬಂದ್ರೆ ತಮ್ಮ ಪಿಎ ಎಲ್ಲಿ ಎಂದು ಹುಡುಕುತ್ತಾರೆ. ಏಕೆಂದರೆ ಪಿಎ ಅವರನ್ನು ಛತ್ರಿಯ ಅಡಿಯಲ್ಲಿ ನಿಲ್ಲಿಸಬೇಕು. ಈ ಹೈಟೆಕ್‌ ಸಂಸ್ಕೃತಿಗೆ ಬೇರೆಯದೇ ಹಾದಿಯಲ್ಲಿ ಸಾಗುವವರು ಸತೀಶ ಜಾರಕಿಹೊಳಿ. ಇವರಿಗೆ ಮಳೆ ಬಿದ್ದರೆ ತಾವೇ ಛತ್ರಿ ಹಿಡಿದುಕೊಳ್ಳುತ್ತಾರೆ.(E belagavi)
ಸತೀಶ ಜಾರಕಿಹೊಳಿ ಅವರ ದಿನಚರಿಯಲ್ಲಿ ಇನ್ನೊಂದು ವಿಶೇಷ ಅಂಶವಿದೆ. ಅವರು ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿದಾಗ, ಅಲ್ಲಿ ಪಿಎನ‌ ಕಾರುಗಳಿಲ್ಲದೆ ನಡೆದು ಕೊಂಡು ಗ್ರಾಮಸ್ಥರ ಮನೆಯೊಳಗಡೆ ಹೋಗುತ್ತಾರೆ. ಅಲ್ಲಿ ಹೊಲದಲ್ಲಿ ಬೆಳೆದ ಎಳನೀರು, ಜೋಳದ ರೋಟಿ ಸೇವನೆ ಮಾಡುವ ‘ಗ್ರಾಮ ಸಿಂಪ್ಲಿಸಿಟಿ’ ಅವರ ವಿಶಿಷ್ಟ ಗುಣ.

ಹೈಟೆಕ್ ಸಚಿವರ ನಡುವೆ ಸಿಂಪಲ್ ಸಚಿವರ ಮನ್ನಣೆ

ಇಂದಿನ ರಾಜಕೀಯದಲ್ಲಿ ಲುಂಗಿ ಬದಲು ಬ್ರಾಂಡೆಡ್ ಜೀನ್ಸ್, ಶರ್ಟ್ ಬದಲು ಸ್ಯಾವನ್ ಟೈ, ಊಟದ ಬದಲು ಫೈವ್ ಸ್ಟಾರ್ ಡೈನಿಂಗ್ ಕಲ್ಚರ್… ಹೀಗಿರುವಾಗ ಈ ಸಿಂಪಲ್ ಮ್ಯಾನ್ ಇಮೇಜ್ ಜನರನ್ನು ಆಕರ್ಷಿಸುತ್ತದೆ. ಈ ಶೈಲಿ ಜನಸಾಮಾನ್ಯರ ಹೃದಯದಲ್ಲಿ ಸಚಿವನೊಬ್ಬನಿಗೆ ಪ್ರಾಮಾಣಿಕತೆಯ ಪರಿಕಲ್ಪನೆಯನ್ನು ನೀಡುತ್ತದೆ. (E belagavi)

ಸತೀಶ ಜಾರಕಿಹೊಳಿ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆ ಮಾಡುವವರಲ್ಲ. ಆದರೆ ಅವರ ಕಾಮಗಾರಿ ಮಾತ್ರ ಎಲ್ಲಿ ನೋಡಿದರೂ ಮಾತನಾಡುತ್ತದೆ.

Leave a Reply

Your email address will not be published. Required fields are marked *

error: Content is protected !!