ಸರ್ಕಾರದ ವಿರುದ್ಧ ಶಾಸಕ ಅಭಯ ಪಾಟೀಲ ಮ್ಯಾಚ್
ಬೆಳಗಾವಿಗರ ಚಿತ್ತ ಬೆಂಗಳೂರಿನ UD ಯತ್ತ ಚಿತ್ತ.
ನಾಳೆ ಮಧ್ಯಾಹ್ನ 3 ಕ್ಕೆ ಅಂತಿಮ ಹಂತ ತಲುಪಿದ ಮ್ಯಾಚ್.
ಮ್ಯಾಚ್ ಗೆಲ್ಲಲು ಕೊನೆಯ ಕಸರತ್ತು ರೆಡಿ.
ಗೆದ್ದೆ ಗೆಲ್ಲಬೇಕು ಮತ್ತೇ ಮೇಯರ್ ಕಪ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲ ರೆಡಿ.
ಎದುರಾಳಿ ಸಿದ್ಧತೆ ಬಗ್ಗೆ ಇನ್ನೂ ನಿಗೂಢ.
ಹೋರಾಟದ ನೆಲ, ಲೈನ್‌ಅಪ್, ಮತ್ತು ರಾಜಕೀಯ ತಂತ್ರ ನೋಡಿದರೆ – ಇದು ಸರ್ಕಾರ ಮತ್ತು ಶಾಸಕರ ನಡುವಿನ ಪ್ರೆಸ್ಟೀಜ್ ಮ್ಯಾಚ್. ಈ ದ್ವಂದ್ವ ಬೆಳಗಾವಿಗೆ ಹಳೆಯ ಕಾಲದ ರಾಜಕೀಯ ಜಟಾಪಟಿಯ ನೆನಪು ಬರುತ್ತಿದೆ.
ಬೆಳಗಾವಿ.
ಅಂದಹಾಗೆ ಇದು ಮತ್ತೊಂದು RCB ಪಂದ್ಯವಲ್ಲ, ಆದರೆ ಉದ್ವೇಗ, ಕುತೂಹಲ, ಮತ್ತು ತೀವ್ರ ರಾಜಕೀಯ ತಾಪಮಾನದಲ್ಲಿ ಒಂದೆರಡು ರನ್‌ಗಳ ತಾರತಮ್ಯದಷ್ಟು ತೂಕದ ‘ಮ್ಯಾಚ್’!
ಬೌಲರ್‌ಗಳು, ಬ್ಯಾಟ್ಸ್‌ಮನ್‌ಗಳಿಲ್ಲ, ಆದರೆ ಸರ್ಕಾರದ ತಂಡದೊಂದಿಗೆ ಯುದ್ಧಕ್ಕೆ ನಿಂತವರು ಮತ್ತು ಬೆಳಗಾವಿ ದಕ್ಷಿಣದ ಕ್ಷೇತ್ರದ ಭರ್ಜರಿ ಆಟಗಾರ, ಸೋಲಿಲ್ಲದ ಸರದಾರ ಎಂದು ಕರೆಯಿಸಿಕೊಳ್ಳುವ ಬಿಜೆಪಿ ಶಾಸಕ ಅಭಯ ಪಾಟೀಲರು.

ಬೆಳಗಾವಿ ಮಹಾನಗರ ಪಾಲಿಕೆಯ
ಮೇಯರ್ ಮಂಗೇಶ್ ಪವಾರ ಮತ್ತು ನಗರಸೇವಕ ಜಯಂತ ಜಾಧವ ಅವರನ್ನು ‘ತಿನಿಸು ಕಟ್ಟೆ’ ವಿವಾದದಲ್ಲಿ ಬೆಳಗಾವಿ ಪ್ರಾದಶಿಕ ಆಯುಕ್ತರು ಸದಸ್ಯತ್ವ ರದ್ದು ಮಾಡಿದ್ದರು.

ನಂತರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಯವರ ಕೋರ್ಟನಲ್ಲಿ ವಿಚಾರಣೆ ನಡೆದಾಗ ನಿರೀಕ್ಷೆಯಂತೆ ಆರ್ ಸಿ ಆದೇಶ ಎತ್ತಿ ಹಿಡಿದು ತೀರ್ಪು ಬಂದಿತು. ಆದರೆ ಅಭಯ ಪಾಟೀಲರ ನೇತೃತ್ವದ ವಕೀಲರ ತಂಡ ತಡಮಾಡದೇ ಬೆಂಗಳೂರು ಕೋರ್ಟ್ ನಲ್ಲಿ ದಾವಾ ದಾಖಲು ಮಾಡಿತು.
ಇಲ್ಲಿ ಅಭಯ ಪಾಟೀಲರ ನೇತೃತ್ವದ ಗುಂಪಿಗೆ ಜಯ ಸಿಕ್ಕಿತು.ಅಷ್ಟೆ ಅಲ್ಲ ಅಮಾನತ್ ಗೊಂಡ ಇಬ್ಬರೂ ಸದಸ್ಯರಿಗೆ ಎಲ್ಲ ಹಕ್ಕು ನೀಡಿತು.

ಹೀಗಾಗಿ ಮೇಯರ್ ಚುನಾವಣೆಯಲ್ಲಿ ಮಂಗೇಶ್ ಪವಾರ್ ಗೆ ಮೇಯರ್ ಆಗುವ ಅದೃಷ್ಟ ಸಿಕ್ಕಿತು. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಅಮಾನತ್ ಮಾಡಿದವರಿಂದಲೇ ಮೇಯರ ಪ್ರಮಾಣ ಪತ್ರವನ್ನು ಕೊಡಿಸುವ ಮೂಲಕ ದೊಡ್ಡ ಮಟ್ಟದ ಟಕ್ಜರ್ ಕೊಡುವ ಕೆಲಸವನ್ನು ಅಭಯ ಪಾಟೀಲ ಮಾಡಿದರು.

ಈಗ ಅದರ ಅಂತಿಮ ಹಂತದ ವಿಚಾರಣೆ ನಾಳೆ ಅದೇ ಯುಡಿ ಸೆಕ್ರೆಟರಿ ಕೋರ್ಟನಲ್ಲಿ ನಡೆಯಲಿದೆ.
ನಾಳೆ ನಡೆಯುವ ಈ ವಿಚಾರಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಇಲ್ಲಿ ಯುಡಿ ಸೆಕ್ರೆಟರಿ ಕೊಡುವ ಆದೇಶವು ಮತ್ತೊಂದು ರೀತಿಯ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಗಳಿವೆ.
ಈ ಪ್ರಕರಣವನ್ನು ಶುದ್ಧ ಕಾನೂನು ತಾಕೀತಿನಂತೆ ನೋಡಲು ಸಾಧ್ಯವಿಲ್ಲ. ಇದು ಈಗ ಸರ್ಕಾರ ಹಾಗೂ ಅಭಯ ಪಾಟೀಲರ ನಡುವಿನ ರಾಜಕೀಯ ಹೋರಾಟದ ರೂಪವನ್ನೇ ಧರಿಸಿದೆ.
ಈ ಹಿಂದೆ ಕೂಡ ಬಿಜೆಪಿ ಹಿಡಿತದಲ್ಲಿರುವ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಕಸರತ್ತುನಡೆಸಿತ್ತು. ಆಗ ಆಭಯ ಪಾಟೀಲರೇ ರಾಜ್ಯಪಾಲರಿಗೆ ದೂರೊಂದನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಈಗ ಈ ವಿಚಾರಣೆ ಅಂತಿಮ ಹಂತ ತಲುಪಿದೆ. ನಾಳೆಯ ಯುಡಿ ಸೆಕ್ರೆಟರಿ ನ್ಯಾಯಾಲಯದ ತೀರ್ಪು ಯಾರ ಕೈಗೆ ಗೆಲುವಿನ ಕಪ್ ಕೊಡುವುದು ಎನ್ನುವುದನ್ನು ಕಾದು ನೋಡಬೇಕು

ಬೆಂಗಳೂರಿನತ್ತ ಬೆಳಗಾವಿಗರ ಚಿತ್ತ
ನಗರದೆಲ್ಲೆಡೆ ಕೇಳಿ ಬರುತ್ತಿರುವ ಒಂದೇ ಮಾತು ಎಂದರೆ,
“ಇದೆಲ್ಲಾ ಸರಕಾರದ ಆಟವೋ? ಇಲ್ಲವೋ…? ನಾಳೆ ಗೊತ್ತಾಗುತ್ತೆ!”