
ಸೀಟ್ ಬಿಟ್ಟು, ಸಿಗ್ನಲ್ ಕೊಟ್ಟರು..!
30 ವರ್ಷಗಳ ಸಹಕಾರಿ ಸೇವೆಗೆ ಕಟ್ಟಿದ ಮುಕುಟವನ್ನು ಇಟ್ಟು, ರಾಜಕೀಯ ಗುರುತರ ನಿರ್ಧಾರಕ್ಕೆ ಕೈಹಾಕಿದ ಅಂಕಲಗಿ – ಇದು ನಿಷ್ಠೆಯ ನೀತಿ ಬ್ಯಾಂಕಿಂಗ್ ವಲಯದ ‘ಲೀಜೆಂಡ್’ ಈಗ ರಾಜಕೀಯ ಚದುರಂಗದಲ್ಲಿ ಚಾಲಿ! ಗ್ರಾಮೀಣ ಬೆಂಬಲದ ‘ಕಿಂಗ್ಮೇಕರ್’ ಆಗಲು ತಯಾರಿ. ಬೆಳಗಾವಿ: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನುಭವಿ ನಾಯಕರಾಗಿ, ರಾಜಕೀಯದಲ್ಲಿ ಬಾಲಚಂದ್ರ ಜಾರಕಿಹೊಳಿಯ ವಿಶ್ವಾಸ ಪಾತ್ರರಾಗಿ ಕಾರ್ಯನಿರ್ವಹಿಸಿದ ಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಜೇಂದ್ರ ಅಂಕಲಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡುವ ಅಪರೂಪದ ನಿರ್ಧಾರಕ್ಕೆ ಬಂದಿದ್ದಾರೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿನಿಧಿಯಾಗಿ…