:ಕರ್ನಾಟಕದ ವಿಸ್ತಾರದಲ್ಲಿ ಅತಿದೊಡ್ಡ ಮತ್ತು ಆಡಳಿತಾತ್ಮಕವಾಗಿ ಅತ್ಯಂತ ಬೃಹತ್ ಜಿಲ್ಲೆ ಎನಿಸಿಕೊಂಡಿರುವ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವ ವಿಚಾರ ಮತ್ತೆ ರಾಜ್ಯ ರಾಜಕೀಯ ವಲಯದಲ್ಲಿ ಚಚರ್ೆಗೆ ಗ್ರಾಸವಾಗಿದೆ. ಆದರೆ ಈ ಬಾರಿ ಗಡಿವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇರುವ ಸಂದರ್ಭದಲ್ಲಿ ಈ ವಿಭಜನೆ ವಿಷಯ ಯಾವ ದಿಕ್ಕಿಗೆ ಹೋಗಬಹುದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ ಕರ್ನಾಟಕ ಮಹಾರಾಷ್ಟ್ರ ಗಡಿ ವಿಷಯ ತಾರಕಕ್ಕೇರಿದ್ದ ಸಂದರ್ಭದಲ್ಲಿಯೇ ಕರ್ನಾಟಕ ಸರ್ಕಾರ ರಚಿಸಿದ್ದ ನಾಲ್ಕು ಆಯೋಗಳೂ ಜಿಲ್ಲೆ ವಿಭಜನೆ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದವು,
ಆದರೆ ಜೆ.ಎಚ್.ಪಟೇಲರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕನ್ನಡ ಸಂಘಟನೆಗಳ ಮನವಿಯನ್ನು ಪುರಸ್ಕರಿಸಿ ಅಧಿವೇಶನದಲ್ಲಿಯೇ ಬೆಳಗಾವಿ ಜಿಲ್ಲೆ ವಿಭಜನೆಯನ್ನು ತಳ್ಳಿ ಹಾಕಿದ್ದರು.
ಆದರೆ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಿಲ್ಲೆ ವಿಭಜನೆ ಬಗ್ಗೆ ಪ್ರಸ್ತಾಪ ಮಾಡಿದ್ದರು, ಆದರೆ ಈಗ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಜನಗಣತಿ ಸುತ್ತೋಲೆ ಉಲ್ಲೇಖಿಸಿ ಜಿಲ್ಲೆ ವಿಭಜನೆ ಬಗ್ಗೆ ಪ್ರಸ್ತಾಪಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿ ನಡೆದಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಗಡಿ ವಿವಾದ ಈಗ ಮುಗಿದ ಅಧ್ಯಾಯ. ಹೀಗಾಗಿ ಜಿಲ್ಲೆ ವಿಭಜನೆ ಮಾಡಿದರೆ ಏನೂ ಆಗಲ್ಲ ಎಂದು ಅವರು ಸ್ಪಷ್ಟಮಾತುಗಳಲ್ಲಿ ಹೇಳಿದ್ದಾರೆ, ಇದರ ಜೊತಗೆ ಗೋಕಾಕನ್ನೇ ಜಿಲ್ಲೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದರು.
ಯಾವ ಜಿಲ್ಲೆಗೆ ಯಾರು ವಿರೋಧ? ಆದರೆ ಸಮಗ್ರ ಬೆಳಗಾವಿ ಜಿಲ್ಲೆಯನ್ನು ಗಮನಿಸಿದಾಗ ಯಾವುದನ್ನು ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವ ವಿಷಯ ಬಂದಾಗ ಒಮ್ಮತದ ಅಭಿಪ್ರಾಯ ಮೂಡಿ ಬರುವುದಿಲ್ಲ ಎನ್ನುವುದು ಸ್ಪಷ್ಟ.
ಗಮನಿಸಬೇಕಾದ ಸಂಗತಿ ಎಂದರೆ ಸಕರ್ಾರ ನೇಮಿಸಿದ ನಾಲ್ಕು ಕಮಿಟಿಯಲ್ಲಿ ಮೂರು ಚಿಕ್ಕೊಡಿ ಜಿಲ್ಲೆ ಮಾಡಿ ಗೋಕಾಕ ಅಥವಾ ಬೈಲಹೊಂಗಲವನ್ನು ಕೇಂದ್ರ ಸ್ಥಾನ ಮಾಡಬೇಕು ಎಂದು ಹೇಳಿವೆ. ಇನ್ನೊಂದು ಕಮಿಟಿ ಎರಡು ಜಿಲ್ಲೆ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಧ್ಯ ಬೆಳಗಾವಿ ಅಖಂಡ ಜಿಲ್ಲೆಯಲ್ಲಿ ಚಿಕ್ಕೋಡಿ ಜಿಲ್ಲೆಯಾದರೆ ಗೋಕಾಕದವರು ವಿರೋಧ ಮಾಡುತ್ತಾರೆ. ಬೈಲಹೊಂಗಲ ಜಿಲ್ಲೆಯಾದರೆ ಚಿಕ್ಕೋಡಿ, ಗೋಕಾಕದವರು ವಿರೋಧ ವ್ಯಕ್ತಪಡಿಸುತ್ತಾರೆ. ಗೋಕಾಕ ಜಿಲ್ಲೆಯಾದೃ ಉಳಿದವರು ವಿರೋಧ ಮಾಡುತ್ತಾರೆ.
ಕಮಿಟಿಗಳು ಹೇಳಿದ್ದೇನು? ಬೆಳಗಾವಿ ಜಿಲ್ಲೆ ವಿಭಜನೆ ಸಂಬಂಧ ಸಕರ್ಾರವೇ ನೇಮಿಸಿದ ನಾಲ್ಕು ಕಮಿಟಿಗಳು ಕೊಟ್ಟ ಅಭಿಪ್ರಾಯವೇನು ಎನ್ನುವ ಕುತೂಹಲ ಎಲ್ಲರಲ್ಲಿದೆ. ಹುಂಡೇಕಾರ ಸಮಿತಿ (1980ರ ದಶಕ) ಬೆಳಗಾವಿಯ ಸಾಂಸ್ಕೃತಿಕ-ಭಾಷಾ ವೈವಿಧ್ಯತೆ, ವಿಸ್ತಾರ ಪ್ರಮಾಣ ಮತ್ತು ಆಡಳಿತ ವ್ಯವಸ್ಥೆಯ ಅಸಮತೊಲನಗಳ ಕುರಿತ ಬೇಡಿಕೆಗಳ ಬಗ್ಗೆ ವರದಿ ನೀಡಲು ಸಕರ್ಾರ ಈ ಸಮಿತಿ ರಚಿಸಿತು. ಮುಖ್ಯ ಶಿಫಾರಸುಗಳು:
ಬೆಳಗಾವಿಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯಾಗಿಸಿ ನಿರ್ವಹಣೆ ಸುಲಭಗೊಳಿಸಬೇಕು. ಗೋಕಾಕ ಅಥವಾ ಅಥಣಿ ಭಾಗವನ್ನು ಜಿಲ್ಲೆಯ ಕೇಂದ್ರವನ್ನಾಗಿ ಪರಿಗಣನೆ ಮಾಡಬಹುದು.
ಎಂ.ಪಿ. ಪ್ರಕಾಶ್ ಆಯೋಗ (2004-06) ಬೆಳಗಾವಿ ವಿಭಜನೆಯ ಬೇಡಿಕೆ ಮತ್ತೆ ರಾಜಕೀಯ ಮುನ್ನೆಲೆ ತೀವ್ರವಾಗಿದ್ದ ಕಾಲಘಟ್ಟ. ಆಡಳಿತ ಸುಧಾರಣೆ ಮತ್ತು ಪ್ರತ್ಯೇಕ ಜಿಲ್ಲೆಗಳ ಅವಶ್ಯಕತೆ ಕುರಿತು ಸಕರ್ಾರ ವಿಶೇಷ ಅಧ್ಯಯನಕ್ಕೆ ಈ ಆಯೋಗವನ್ನು ರಚಿಸಿತು.
ಶಿಫಾರಸುಗಳು: ಬೆಳಗಾವಿ ಪ್ರಸ್ತುತ ಗಾತ್ರದಿಂದ ಆಡಳಿತ ನಿರ್ವಹಣೆ ತೀವ್ರ ಅಸಮತೋಲನಕ್ಕೆ ಗುರಿಯಾಗುತ್ತಿದೆ. ಚಿಕ್ಕೋಡಿ ಕೇಂದ್ರವಾಗುವಂತೆ ಹೊಸ ಜಿಲ್ಲೆ ರೂಪಿಸಬೇಕು. ಗೋಕಾಕ ಭಾಗವನ್ನು ಸಹ ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಪರಿಗಣಿಸಬಹುದು.
ಭಾಷಾ ಅಂಶಕ್ಕೆ ತಕ್ಕಂತೆ ಜನಸಾಮಾನ್ಯರಿಗೆ ಅನ್ಯಾಯವಾಗದಂತೆ ನಿಧರ್ಾರವಾಗಬೇಕು.
ವಾಸುದೇವ ಆಯೋಗ (2008) ಬೆಳಗಾವಿ ಜಿಲ್ಲೆಯಲ್ಲಿ ಪುನರ್ ಹಂಚಿಕೆ ಕುರಿತು ನಿಧರ್ಾರಕ್ಕೆ ಬಲು ಹತ್ತಿರ ಬಂದಂತೆ ಆಗಿತ್ತು. ಆಡಳಿತಾತ್ಮಕ ಸುಧಾರಣೆಗಾಗಿ ಅನುಕೂಲತೆ ಪರಿಶೀಲನೆಗೆ ಈ ಆಯೋಗ ರೂಪುಗೊಂಡಿತು. ಶಿಫಾರಸುಗಳು: ಬೆಳಗಾವಿಯ ಆಡಳಿತ ಸುಧಾರಣೆಗೆ ವಿಭಜನೆ ಅಗತ್ಯ. ಚಿಕ್ಕೋಡಿ ಹೊಸ ಜಿಲ್ಲೆ ಮಾಡಬೇಕು. ಗೋಕಾಕ ಅಥವಾ ಅಥಣಿ ಜಿಲ್ಲೆಯ ಕುರಿತು ಪರಿಗಣನೆ ಮಾಡಬಹುದು, ಮೂಲ ಸೌಲಭ್ಯಗಳ ಸಮಪಾಲನೆಗೆ ಹೊಸ ಜಿಲ್ಲೆಗಳು ನೆರವಾಗುತ್ತವೆ. —. ಗದ್ದಿಗೌಡ ಸಮಿತಿ (2012ರ ಬಳಿಕ) ಬೆಳಗಾವಿ ಜಿಲ್ಲೆ ವಿಭಜನೆಯ ಬೇಡಿಕೆ ಮತ್ತೆ ಬಲವಾಗಿ ಸಕರ್ಾರದ ಮೇಲೆ ಒತ್ತಡ ತರಲು ಜನಪ್ರತಿನಿಧಿಗಳ ಒತ್ತಡದ ಹಿನ್ನೆಲೆಯಲ್ಲಿ ಈ ಸಮಿತಿ ರೂಪುಗೊಂಡಿತು. ಶಿಫಾರಸುಗಳು: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಕನಿಷ್ಠ ಎರಡು ಜಿಲ್ಲೆಗಳ ರೂಪದಲ್ಲಿ ಪುನರ್ ಹಂಚಿಕೆ ಮಾಡಬೇಕು.
ನಿಖರ ಆಡಳಿತ ನಿರ್ವಹಣೆ, ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ತಲುಪಿಸಲು ಪ್ರತ್ಯೇಕ ಜಿಲ್ಲೆಗಳು ಅವಶ್ಯಕ. ಭಾಗಗಳ ವೈಶಿಷ್ಟ್ಯತೆ, ಅಭಿವೃದ್ಧಿ ವೈಷಮ್ಯಗಳನ್ನು ಪರಿಶೀಲಿಸಿ ಹಂಚಿಕೆ ಮಾಡಬೇಕು.
ಕನ್ನಡ ಸಂಘಟನೆಗಳು ಹೋರಾಟ ಮಾಡದಿದ್ದರೆ….
ಬೆಳಗಾವಿ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಭಜಿಸಬೇಕೆಂದು ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಪಕ್ಷ ಭೇದ ಮರೆತು ಒತ್ತಾಯಿಸುತ್ತಲೇ ಇದ್ದಾರೆ. 1997 ರ ಅಗಷ್ಟ 22 ರಂದು ಜಿಲ್ಲೆಯನ್ನು ಮೂರು ಜಿಲ್ಲೆಗಳನ್ನಾಗಿ ಒಡೆಯಲು ಅಂದು ಅಧಿಕಾರದಲ್ಲಿದ್ದ ಜನತಾದಳದ ಮಂತ್ರಿಗಳು, ಶಾಸಕರೇ ಕಾರಣವಾಗಿದ್ದರು.
ಕನ್ನಡ ಪರ ಸಂಘಟನೆಗಳು, ಮಠಾಧೀಶರು ಒಂದು ತಿಂಗಳು ಕಾಲ ಹೋರಾಟ ಮಾಡದಿದ್ದರೆ ಜಿಲ್ಲೆ ಮೂರು ಹೋಳಾಗುತ್ತಿತ್ತು. ಬೆಳಗಾವಿ ಜಿಲ್ಲೆಯನ್ನು ವಿಭಜಿಸದೇ ಜಿಲ್ಲೆಯ ಜನರಿಗೆ ಆಡಳಿತಾತ್ಮಕವಾಗಿ ಹೇಗೆ ನೆರವಾಗಬಹುದು ಎಂಬುದನ್ನು
ಹೇಳುತ್ತಲೇ ಬಂದಿದ್ದೇವೆ.ಈ ಸಂಬಂಧ ರಾಜಕಾರಣಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಜಿಲ್ಲಾ ಕೇಂದ್ರದಿಂದ 150 ಕಿ.ಮೀ. ದೂರವಿರುವ ಪಟ್ಟಣ, ಹಳ್ಳಿಗಳ ಜನತೆಗೆ ಚಿಕ್ಕೋಡಿ,ಬೈಲಹೊಂಗಲ ಉಪವಿಭಾಗಗಳಿಂದಲೇ ಸಾಕಷ್ಟು ಸವಲತ್ತು, ಸೌಲಭ್ಯ ಒದಗಿಸಬಹುದಾಗಿದೆ.
ಚಿಕ್ಕೋಡಿಯಲ್ಲಿ ಸಾಕಷ್ಟು ಕೋಟರ್ು, ಕಚೇರಿಗಳಾದ ನಂತರ ದೂರದ ಹಳ್ಳಿಗಳ ಜನತೆಗೆ ಅನುಕೂಲವೇ ಆಗುತ್ತಿದೆ. ಗಡಿವಿವಾದ ಸಂಬಂಧ ಮಹಾರಾಷ್ಟ್ರ ಇತ್ತೀಚೆಗೆ ಮತ್ತಷ್ಟು ಆಕ್ರಮಣಕಾರಿ ನಿಲುವು ತಳೆಯುತ್ತಿದೆ. 2004 ರಿಂದ ಸುಪ್ರೀಮ್ ಕೋರ್ಟ ಮುಂದೆ ಬಾಕಿಯಿರುವ ಗಡಿವಿವಾದ ಪ್ರಕರಣದ ಇತ್ಯರ್ಥಕ್ಕೆ ಕನರ್ಾಟಕದ ರಾಜಕಾರಣಿಗಳು ಗಮನ ಹರಿಸುತ್ತಿಲ್ಲ. ಈ ಪ್ರಕರಣದಲ್ಲಿ ಒಂದನೇ ಪ್ರತಿವಾದಿಯಾಗಿರುವ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಪ್ರಕರಣಕ್ಕೆ ಅಂತ್ಯ ಹಾಡಬೇಕಾಗಿದೆ.ಮಹಾರಾಷ್ಟ್ರದ
ದಾವೆಯನ್ನು ತಿರಸ್ಕರಿಸುವಂತೆ ಮಾಡುವ ಅವಶ್ಯಕತೆಯಿದೆ.ಹೀಗಾದರೆ ಕೇಂದ್ರ ಸರಕಾರ ‘ ಗಡಿವಿವಾದ ಮುಗಿದ ಅಧ್ಯಾಯ” ಎಂದು ಘೋಷಿಸಲು ಅವಕಾಶವಾಗಲಿದೆ. ಗಡಿವಿವಾದ ಮುಗಿದ ಅಧ್ಯಾಯ ಎಂದು ಕೇಂದ್ರವು ಘೋಷಿಸಿದರೆ ಸಾಕು. ಬೆಳಗಾವಿ ಜಿಲ್ಲೆಯನ್ನು ವಿಭಜಿಸಲು ಯಾರದೂ ಅಭ್ಯಂತರವಿರಲಾರದು.
ಅಶೋಕ ಚಂದರಗಿ ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ