ವಾಣಿಜ್ಯದ ನೆರಳಿನಲ್ಲಿ ಬೆಳಗಾವಿಯ ‘ಕನ್ನಡ ಭವನ’

Oplus_16777216

ಕನ್ನಡ ಮನೆ” ಈ)ಗ ಮೌಲ್ಯ ತುಂಬಿರುವ ಈ ನಿರ್ಧಾರ, ಭಾಷಾ ಆತ್ಮೀಯತೆಗೆ ನ್ಯಾಯತೀರಿಸಬೇಕಾದ ನಿರ್ಣಾಯಕ ಘಟ್ಟವಾಗಿದೆ. ಸಾರ್ವಜನಿಕವಾಗಿ ಅನುದಾನ ತಂದು ಕಟ್ಟಿದ ಕನ್ನಡ ಭವನ ಖಾಸಗಿ ಲಾಭದ ವೇದಿಕೆಯಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಇದೀಗ ಇಡೀ ಬೆಳಗಾವಿಯ ಕಣ್ಣೇ ಈ ಸಮಿತಿಯ ಕಾರ್ಯಚಟುವಟಿಕೆಗಳತ್ತ ಹರಿದಿದೆ.

ಇ ಬೆಳಗಾವಿ ವಿಶೇಷ

ಬೆಳಗಾವಿ:
ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಉಜ್ವಲ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಸಾವಿರಾರು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತವಾಗಿರುವ ಬೆಳಗಾವಿಯ ಕನ್ನಡ ಸಾಹಿತ್ಯ ಭವನ ಇದೀಗ ತನ್ನ ಮೂಲ ಗುರಿಯಿಂದ ದೂರ ಸರಿದಂತಾಗಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಕಟ್ಟಡ ನಿರ್ವಹಣಾ ಸಮಿತಿ ರಚಿಸಲು ಸರಕಾರ ಕ್ರಮ ಕೈಗೊಂಡಿದೆ.

2010-11 ರಿಂದ ಇಲ್ಲಿಯವರೆಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ₹ 3 ಕೋಟಿ 27 ಲಕ್ಷ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹ 2 ಕೋಟಿ 99 ಲಕ್ಷ, ಒಟ್ಟು ₹6 ಕೋಟಿ 26 ಲಕ್ಷ ರೂ. ಅನುದಾನದಿಂದ ನಿರ್ಮಾಣಗೊಂಡ ಈ ಕನ್ನಡ ಭವನದಲ್ಲಿರುವ ವಾಣಿಜ್ಯ ಮಳಿಗೆಗಳೀಂದ ಖಾಸಗಿ ಸಂಘಟನೆಗಳು ಬಾಡಿಗೆ ಸಂಗ್ರಹಿಸಿ ತಮಗೆ ಬೇಕಾದಂತೆ ಬಳಸುತ್ತಿರುವ ಕುರಿತು ಗಂಭೀರ ಆಕ್ಷೇಪಗಳು ಕೇಳಿಬಂದಿವೆ.

ಅಶೋಕ ಚಂದರಗಿ ಆಕ್ಷೇಪ ಏನು?

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರೂ ಆಗಿರುವ ಅಶೋಕ ಚಂದರಗಿ, ಈ ವಿಚಾರವನ್ನು ತೀವ್ರವಾಗಿ ಎತ್ತಿ ಹಿಡಿದಿದ್ದು, “ಜನರ ಉಪಯೋಗಕ್ಕಾಗಿ, ಭಾಷಾ ಸಂಸ್ಕೃತಿ ಉದ್ದೇಶಕ್ಕಾಗಿ ಕಟ್ಟಲಾದ ಕಟ್ಟಡವೊಂದು ಲಾಭದಾಸೆಗೂ ಸಿಲುಕಬಾರದು” ಎಂಬ ತೀಕ್ಷ್ಣ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ದಿನಾಂಕ 29.05.2025ರಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಭವನದ ನಿರ್ವಹಣೆಗೆ ಸಮಿತಿ ರಚನೆಯು ಅಗತ್ಯ ಎಂಬ ಅಭಿಪ್ರಾಯ ಒಮ್ಮತವಾಗಿ ಬಲ ಪಡೆಯಿತು.

ಕಟ್ಟಡ ನಿರ್ವಹಣಾ ಸಮಿತಿಗೆ ಹೊಸ ನುರಿತ ರೂಪ

ಬೃಹತ್ ಸಂಪತ್ತಿನ ನಿರ್ವಹಣೆಗೆ ಸರಿಯಾದ ವ್ಯವಸ್ಥೆ ಕಡ್ಡಾಯವಾದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಅವರು ಅಧ್ಯಕ್ಷರಾಗುವಂತೆ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚನೆಯಾದ ಬಗ್ಗೆ ಆದೇಶ ಈಗ ಹೊರಬಿದ್ದಿದೆ.

ಬೆಳಗಾವಿ ಡಿಸಿ ಆದೇಶ

ಸಮಿತಿಯ ಮೂಲ ಉದ್ದೇಶ :

ಕನ್ನಡ ಭವನದಲ್ಲಿ ತೆರೆಯಲಾದ ಮಳಿಗೆಗಳ ವಾಸ್ತವ ಪರಿಸ್ಥಿತಿ ಪರಿಶೀಲನೆ

ಸಂಗ್ರಹವಾಗಿರುವ ಬಾಡಿಗೆಯ ವಿವರಗಳ ಖಚಿತತೆ

ಇನ್ನುಮುಂದೆ ಬಾಡಿಗೆ ಮೊತ್ತವನ್ನು ಗಡಿ ಪ್ರಾಧಿಕಾರದ ಯೋಜನೆಗಳಿಗೆ ಬಳಸುವ ಸಂಬಂಧ ನಿರ್ಧಾರ

ಕಟ್ಟಡದ ನಿಖರ ಉಪಯೋಗ ಮತ್ತು ನಿರ್ವಹಣೆಗೆ ಸೂಕ್ತ ಮಾರ್ಗಸೂಚಿ ರೂಪಿಸಿ ಜವಾಬ್ದಾರಿಯುತ ವ್ಯವಸ್ಥೆ


ಮಾರ್ಗ ತಪ್ಪಿದ ಮಿಶನ್* ?

ವಿಷಯವೆಂದರೆ, ಈ ಭವನ ಜನಸಾಮಾನ್ಯರಿಗಾಗಿ ಮತ್ತು ಕನ್ನಡದ ಸೇವೆಗೆ ಮೀಸಲಾದರೂ, ಹಾಸುಹೊಕ್ಕಿನ ನಿರ್ವಹಣಾ ಕೊರತೆ ಹಾಗೂ ಸ್ಪಷ್ಟ ನಿಯಂತ್ರಣದ ಅಭಾವದಿಂದಲೇ ಖಾಸಗಿ ಸಂಘಟನೆಗಳು ಇದರ ಬಾಡಿಗೆಗಳನ್ನು ತಮ್ಮ ಸ್ವಂತ ವಹಿವಾಟಿಗೆ ಬಳಸುತ್ತಿರುವುದಾಗಿ ಮಾಹಿತಿ ಸಿಕ್ಕಿದೆ.

ಹೀಗಾಗಿ ಸಮಿತಿ ಸದಸ್ಯ ಕಾರ್ಯದರ್ಶಿಗಳು ಕಟ್ಟಡದ ಸ್ಥಿತಿಗತಿ ಮತ್ತು ಲೆಕ್ಕಪತ್ರಗಳ ಪರಿಶೀಲನೆಯೊಂದಿಗೆ ಸಮಗ್ರ ವರದಿ ಸಿದ್ಧಪಡಿಸಿ, ಅದನ್ನು ಜಿಲ್ಲಾಧಿಕಾರಿ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

ಕನ್ನಡದ ಮನೆ”ಗೆ ನ್ಯಾಯ ಸಿಗುತ್ತಾ?

ಈ ಭವನವನ್ನು ಸರಿಯಾದ ಉದ್ದೇಶಕ್ಕೆ, ಸಮರ್ಥ ನಿರ್ವಹಣೆಯೊಂದಿಗೆ ಕನ್ನಡ ಸಾಹಿತ್ಯ, ಕಲಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಬಳಸುವಂತೆ ಸಮಿತಿಯ ನಿರ್ಧಾರಗಳು ಮುನ್ನಡೆಯಬೇಕಿದೆ. ಇನ್ನುಮುಂದೆ ಇಲ್ಲಿಂದ ಬಾಡಿಗೆ ಸಂಗ್ರಹ ಮಾಡುವದಾದರೂ ಗಡಿ ಪ್ರಾಧಿಕಾರದ ಕಾರ್ಯಕ್ರಮಗಳಿಗೆ ಮೀಸಲಿರಬೇಕು ಎಂಬುದು ಅಧಿಕಾರಿಗಳ ಸ್ಪಷ್ಟ ಅಭಿಪ್ರಾಯ.

Leave a Reply

Your email address will not be published. Required fields are marked *

error: Content is protected !!