ಬೆಳಗಾವಿ ಪಾಲಿಕೆಯಲ್ಲಿ 7 ಕೋಟಿ ತೆರಿಗೆ ವಂಚನೆ: ಲೋಕಾಯುಕ್ತ ತನಿಖೆಗೆ ದಾರಿ.
ನಕಲಿ ಅಂಗವಿಕಲತೆ ಪ್ರಮಾಣ ಪತ್ರ ಕೊಟ್ಟು ನೌಕರಿ ಗಿಟ್ಟಿಸಿದವರ ಬಗ್ಗೆಯೂ ವಿಚಾರಣೆ?
ನಿಯಮ ಉಲ್ಲಂಘಿಸಿದ ಬಹುಮಹಡಿ ಕಟ್ಟಡಗಳಿಗೆ ಸಿಸಿ ನೀಡಿದ ಟಿಪಿಓ ಸೆಕ್ಷನ್ ಬಗ್ಗೆ ವಿಚಾರಣೆ ನಡೆಸುವ ಸಾದ್ಯತೆ?
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ (BMP) ಆಯುಕ್ತೆ ಶುಭ ಬಿ. ಅವರಿಂದ ಲೋಕಾಯುಕ್ತ ಕಚೇರಿಗೆ ಹೋಗಿರುವ ಪತ್ರ, ರೂ.೭.೦೮ ಕೋಟಿ ತೆರಿಗೆ ವಂಚನೆಯ ಗಂಭೀರ ಆರೋಪಗಳನ್ನು ಬೆಳಕಿಗೆ ತಂದಿದೆ. ೨೦೦೨-೦೩ರಿಂದ ಸುತ್ತಿಬಂದ ಈ ಅಪರಾಧದ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆ ಈಗ ಚಾಲನೆಯಾಗಿದೆ.
*ವಂಚನೆಯ ರೀತಿ *ಆಸ್ತಿ ವಿವರ:**
ವೇಗಾ ಫನ್ ಮೊಬೈಲ್ಸ್ (PID 47082 & 83158)
ಮಾಲೀಕರು: ದಿಲೀಫ್ ಆರ್. ಚಿಂಡಕ್ ಮತ್ತು ಸಹಯೋಗಿಗಳು .
೨೦೨೪-೨೫ನೇ ಸಾಲಿನ ತೆರಿಗೆ ಮಾತ್ರ ಪಾವತಿಸಿ, ೨೦೦೨-೦೩ರಿಂದ ರೂ.೭.೦೮ ಕೋಟಿ ಬಾಕಿ ಉಳಿಸಿಕೊಂಡಿರುವುದು. ಮರುಮೌಲ್ಯಮಾಪನ (೨೦೧೬) ನಂತರವೂ ತೆರಿಗೆ ಪಾವತಿ ನಿರಾಕರಣೆ.
ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ ಆರೋಪ.
ದಾಖಲಾತಿ ಪುರಾವೆ:
PID 47082: ರೂ.೬,೬೮,೨೦,೦೧೧
PID 83158: ರೂ.೪೦,೪೬,೫೬೭
ಒಟ್ಟು ಬಾಕಿ: ರೂ.೭,೦೮,೬೬,೫೭೮
ಪಾಲಿಕೆಯ ಆಡಳಿತಾತ್ಮಕ ವಿಫಲತೆಗಳು
ಕರ್ನಾಟಕ ಪೌರಸಭಾ ಅಧಿನಿಯಮ ೧೯೭೬ರ ಸೆಕ್ಷನ್ ೧೧೨ಎ(೭) ಪ್ರಕಾರ, ಮರುಮೌಲ್ಯಮಾಪನ ವ್ಯತ್ಯಾಸ ಪಾವತಿಸದಿದ್ದರೆ ಕ್ರಮ ಕೈಗೊಳ್ಳುವ ಕರ್ತವ್ಯ ಉಲ್ಲಂಘನೆ.
ತೆರಿಗೆ ರಿಜಿಸ್ಟರ್ಗಳನ್ನು ಕಾಲೋಚಿತವಾಗಿ ನವೀಕರಿಸದಿರುವುದು.
ಕೆಎಮ್ಎಫ್-೨೪ ದಾಖಲೆಗಳಲ್ಲಿ ಗಂಭೀರ ಕೊರತೆಗಳು.
ವ್ಯಾಪಾರಿಕ ಆಸ್ತಿಗಳ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ.
ಸ್ಥಾಯಿ ಸಮಿತಿಯ ನಿಷ್ಕ್ರಿಯತೆ: ಪ್ರಶ್ನಾರ್ಹ* ತೆರಿಗೆ ವಂಚನೆಯ ಪ್ರಕರಣ ತೀವ್ರ ಸ್ವರೂಪ ಹೊಂದಿದ್ದರೂ, ಪಾಲಿಕೆಯ ಕಂದಾಯ ಸ್ಥಾಯಿ ಸಮಿತಿ ಯಾವುದೇ ತನಿಖೆ ಅಥವಾ ಕ್ರಮ ಕೈಗೊಳ್ಳದಿರುವುದು ಆಡಳಿತದ ಗಂಭೀರ ದುರ್ಬಲತೆಯನ್ನು ಸೂಚಿಸುತ್ತದೆ. ಅಂದರೆ:
“ಕಂದಾಯ ಶಾಖೆಯ ಜವಾಬ್ದಾರ ಅಧಿಕಾರಿಗಳೇ ಈ ವಂಚನೆಗೆ ಸಹಾಯಕರಾಗಿರಬಹುದು ಎಂಬ ಸೂಚನೆಗಳಿದ್ದೂ, ಸಮಿತಿ ಮೌನ ಏಕೆ?”
ಲೋಕಾಯುಕ್ತ ತನಿಖೆ ಈ ನಿಷ್ಕ್ರಿಯತೆಯ ಬಗ್ಗೆ ತನಿಖೆ ನಡೆಸಬೇಕಿದೆ.
ಲೋಕಾಯುಕ್ತ ತನಿಖೆಗೆ ವೇಗದ ಹಿನ್ನೆಲೆ
ಈ ಮೊದಲು ಸಾರ್ವಜನಿಕ ದೂರುಗಳ ಆಧಾರದ ಮೇಲೆ ಲೋಕಾಯುಕ್ತರು ಪಾಲಿಕೆಗೆ ಭೇಟಿ ನೀಡಿದ್ದರು.
ಇತ್ತೀಚಿಗೆ ಆಯುಕ್ತರು ಖುದ್ದು ಪತ್ರ ಬರೆದಿರುವುದರಿಂದ ತನಿಖೆಗೆ ಆದ್ಯತೆ ನೀಡಲಾಗುತ್ತಿದೆ.
ಇದೂ ತನಿಖೆಯಾಗಬೇಕು?
ನಕಲಿ ಅಂಗವಿಕಲತೆ ಪ್ರಮಾಣಪತ್ರ ನೀಡಿ ಸರ್ಕಾರಿ ನೌಕರಿ ಪಡೆದ ಆರೋಪ ಒಬ್ಬ ಅಧಿಕಾರಿ ಮೇಲಿದೆ. ಇದರ ಜೊತೆಗೆನಿಯಮ ಉಲ್ಲಂಘಿಸುದ ಬಹುಮಹಡಿ ಕಟ್ಟಡಗಳಿಗೆ ಅನುಮತಿ ನೀಡಿದ್ದರ ಬಗ್ಗೆ ಟಿಪಿಓ ಶಾಖೆಯ ಬಗ್ಗೆ ತನಿಖೆ ನಡೆಸಬೇಕಾದ ಅಗತ್ಯತೆ ಇದೆ.
“ಈ ಪ್ರಕರಣ ಪಾಲಿಕೆಯ ಆಂತರಿಕ ನಿಯಂತ್ರಣ ವ್ಯವಸ್ಥೆಯ ಪೂರ್ಣ ವಿಫಲತೆಯನ್ನು ಬಿಂಬಿಸುತ್ತದೆ. ತೆರಿಗೆ ದಾಖಲೆಗಳು ನವೀಕರಣವಾಗದಿರುವುದು, ಸ್ಥಾಯಿ ಸಮಿತಿಯ ನಿಷ್ಕ್ರಿಯತೆ, ಮತ್ತು ಉನ್ನತ ಅಧಿಕಾರಿಗಳ ಮೇಲೆ ಎದ್ದಿರುವ ಪ್ರಶ್ನೆಗಳು – ಇವೆಲ್ಲ ಸಾರ್ವಜನಿಕ ಹಣದ ಅತ್ಯಂತ ದುರುಪಯೋಗದ ಸೂಚಕಗಳಾಗಿವೆ. ಲೋಕಾಯುಕ್ತ ತನಿಖೆ ಕೇವಲ ವಂಚನೆಯಲ್ಲದೇ, ಸಂಸ್ಥಾಪಿತ ಭ್ರಷ್ಟಾಚಾರದ ಬೇರುಗಳನ್ನು ಒಡೆದು ತೋರಿಸಬೇಕಿದೆ.”