“ಖಾಕಿಯ ಕಿತ್ತಳೆ ಕನಸು ಈಗ ಮನೆ ಬಾಗಿಲಲ್ಲೇ!”
ಭಯವಲ್ಲ, ವಿಶ್ವಾಸ ತರುತ್ತಿದ್ದಾರೆ ನಿಮ್ಮ ಪೊಲೀಸರು.
ಬೆಳಗಾವಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಭಾವುಕ ಆರಂಭ
ಬೆಳಗಾವಿ
ಒಂದಾನೊಂದು ಕಾಲದಲ್ಲಿ ಮನೆಯ ಬಳಿ ಪೊಲೀಸ್ ಬಂದರು ಅಂದರೆ ಮನೆಮಂದಿ ಎದೆಬಡಿತ ಜೋರಾಗುತ್ತಿತ್ತು . “ಏನು ಆಯ್ತು?” ಎಂದು ನೆರೆಹೊರೆಯವರು ಕಣ್ಣು ಚೆಲ್ಲುತ್ತಿದ್ದರೆ, ಮನೆಯೊಳಗಿನವರು ನೀಡಿದ ಉಸಿರನ್ನು ಎಣಿಸುತ್ತಿದ್ದರು.
ಆದರೆ ಇಂದು, ಪೊಲೀಸ್ ಮನೆ ಬಾಗಿಲಿಗೆ ಬಂದರೆ ಅದು ಶಂಕೆಯ ಸೂಚಕವಲ್ಲ – ಅದು ಭರವಸೆ ಬೆಳಕು.ಜೊತೆಗೆ ಖಾಕಿಯ ನಗು..!
‘ಈಗ ರಾಜ್ಯದ ಗೃಹ ಇಲಾಖೆ ಸೂಚನೆ ಮೇರೆಗೆ ಮನೆ ಮನೆಗೆ ಪೊಲೀಸ್’ ಎನ್ನುವ ಯೋಜನೆ ಗಡಿನಾಡ ಬೆಳಗಾವಿಯಲ್ಲಿ ಜಾರಿಗೆ ಬರುತ್ತದೆ. ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ ಅವರು ಈ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಠಾಣೆ ಠಾಣೆಗಳಿಗೆ ಹೋಗಿ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ..
ಮನುಷ್ಯನೊಡನೆ ಮನುಷ್ಯನಂತೆಯೇ ವರ್ತಿಸುವ ‘ಖಾಕಿ’ ಹತ್ತಿರಗೊಳ್ಳುವ ಪ್ರಯತ್ನಕ್ಕೆ ಇದು ಸಾಕ್ಷಿ.
ಭದ್ರತಾ ಸಂಭ್ರಮ: ಬಾಗಿಲ ಮೇಲೆ ಖಾಕಿಯ ಕೈಹಿಡಿತ

“ಪ್ರತಿ 40-50 ಮನೆಗಳಿಗೆ ಒಬ್ಬ ಪುರುಷ ಮತ್ತು ಮಹಿಳಾ ಪೊಲೀಸರು ಭೇಟಿ ನೀಡುತ್ತದೆ. ಅವರನ್ನು ನೋಡಿ ಜನ ಭಯಪಡಬೇಕು ಅಂದಿಲ್ಲ. ಈಗ ಅವರು ಕೇಳೋದು— ‘ಚೆನ್ನಾಗಿದ್ದೀರಾ?’ ಎಂಬ ಆತ್ಮೀಯ ಪ್ರಶ್ನೆ.”
ಈ ಮಾತುಗಳಲ್ಲಿ ಕಾನೂನುಗಿಂತಲೂ ಹೆಚ್ಚು ಕಾಳಜಿ ಇದೆ. ಅಧಿಕಾರಕ್ಕಿಂತಲೂ ಹೆಚ್ಚು ಸ್ನೇಹ ಭಾವನೆ ಇದೆ. ಪೋಲೀಸರು ಮನೆಯ ಬಾಗಿಲಿಗೆ ಬರೋದು ಕೇವಲ ಪೊಲೀಸ್ ಕಾರ್ಯವಲ್ಲ, ಅದು ಸಮಾಜದ ನಡಿಗೆಯಲ್ಲಿ ತಾಳಮೇಳ ಹಿಡಿಯುವ ನವಪ್ರಯತ್ನ.

ಮನೆಯ ಸುತ್ತಲಿನ ಭದ್ರತೆ ಕುರಿತು ಸಲಹೆ ನೀಡುತ್ತಾರೆ,
ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು ಎಲ್ಲರೊಂದಿಗೆ ಸುದೀರ್ಘ ಸಂವಾದ ನಡೆಸುತ್ತಾರೆ,
ಡ್ರಗ್ಸ್, ಸೈಬರ್ ಅಪರಾಧ, ಮಹಿಳಾ ಸುರಕ್ಷತೆ ಕುರಿತ ಜಾಗೃತಿ ಮೂಡಿಸುತ್ತಾರೆ,
ಯಾವುದೇ ತೊಂದರೆ ಇದ್ದರೆ ಅಹವಾಲು ಸ್ವೀಕರಿಸುತ್ತಾರೆ.
ಖಾಕಿಯ ಹೊಸ ವ್ಯಾಖ್ಯಾನ: ಸಂಬಂಧವೊಂದರ renaissance!
ಈ ಯೋಜನೆಯು ಪೊಲೀಸ್ ಇಲಾಖೆಯ ಹೊಸ ತಿರುವಾಗಿದೆ. ಅಲ್ಲಿ ಕೇವಲ “ಕಾನೂನು ಪಾಲನೆ” ಎನ್ನುವ ಮಾತುಗಳಿಲ್ಲ; ಬದಲಾಗಿ “ಸಾಮರಸ್ಯ”, “ಸಂದೇಹಗಳ ನಿವಾರಣೆ”, “ಭದ್ರತಾ ಬಾಂಧವ್ಯ” ಎನ್ನುವ ಹೊಸ ಪದಗಳು ಬೆಳೆದುಕೊಳ್ಳುತ್ತಿವೆ.

ಸಾಂದರ್ಭಿಕ ಚಿತ್ರ..
ಇದು ಯೋಜನೆಯ ಹೆಸರಷ್ಟೆ ಅಲ್ಲ – ಅದು ಭದ್ರತೆಗಿಂತ ಹೆಚ್ಚಿನ ಸಂಬಂಧವನ್ನು ಕಟ್ಟುವ ಸಂಕೇತ. ಭೀತಿಯ ಬದಲಿಗೆ ಪ್ರೀತಿಯ ಸ್ಪರ್ಶ. ನೀಡುವ ಕೆಲಸ ಮಾಡುತ್ತಿದ್ದಾರೆ.
: ಪೋಲೀಸರು ಈಗ ಮನೆಯವರೆಗೆ!
‘ಮನೆ ಮನೆಗೆ ಪೊಲೀಸ್’ ಯೋಜನೆ ಖಾಕಿಯ ನಿಜವಾದ ಮುಖವನ್ನೇ ತೋರಿಸುತ್ತಿದೆ – ಕಠಿಣತೆಯ ಹಿಂದೆ ಮೃದುವಾದ ಮನಸ್ಸು, ಅಧಿಕಾರದ ಒಳಗೆ ಆತ್ಮೀಯತೆಯ ಸ್ಪರ್ಶ.
ಇದು ಕೇವಲ ಸುಧಾರಣೆಯ ಆರಂಭವಲ್ಲ…
ಇದು ನಂಬಿಕೆಯ ನವಯುಗ ಆರಂಭ!