ಪಾಲಿಕೆಯಲ್ಲಿ ಎಂಇಎಸ್ ಪುಂಡಾಟ

ಬೆಳಗಾವಿ
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮತ್ತೇ ಕನ್ನಡ , ಮರಾಠಿ ಭಾಷಾ ವಿವಾದ ಭುಗಿಲೆದ್ದಿತು.
ಸಭೆಯ ಆರಂಭದಲ್ಲಿಯೇ ಅಜೆಂಡಾದಲ್ಲಿನ‌ ವಿಷಯ ಬದಿಗೊತ್ತಿ ಎಂಇಎಸ್ ಸದಸ್ಯ ರವಿ ಸಾಳುಂಕೆ ಅವರು ಮರಾಠಿಯಲ್ಲಿ ದಾಖಲೆ ಕೊಡಿ ಎನ್ನುವ ವಾದ ಮಾಡತೊಡಗಿದರು.

ಇದರಿಂದ ಕೆರಳಿದ ಸರ್ಕಾರಿ‌ ನಾಮ ನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ ಸೇರಿದಂತೆ ಬಿಜೆಪಿಯ ಕೆಲವರು ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಮರಾಠಿ ದಾಖಲೆ ಕೇಳಿದ ರವಿ ಸಾಳುಂಕೆ ಅವರನ್ನು ಮಹಾರಾಷ್ಟ್ರ ಕ್ಕೆ ಕಳುಹಿಸಿ ಎಂದರು.
ಈ ಸಂದರ್ಭದಲ್ಲಿ ವಾದ ವಿವಾದ ಜೋರಾಗಿ ಕಾವೇರಿದ ವಾತಾವರಣ ನಿರ್ಮಾಣವಾಯಿತು.

ಪರಿಸ್ಥಿತಿಯನ್ನು ಗಮನಿಸಿದ ಮೇಯರ್ ಸಭೆಯನ್ನು ಕೆಲ ಹೊತ್ತು ಮುಂದೂಡಿದರು.
ನಂತರ ಶಾಸಕ ಅಭಯ ಪಾಟೀಲ ಮತ್ತು ಶಾಸಕ ಶೇಠ ನಡುವೆ ಇದೇ ವಿಷಯದ ಬಗ್ಗೆ ಮಾತುಕತೆ ನಡೆಯಿತು. ಅಜೆಂಡಾ ಪ್ರಕಾರ ಮಾತಾಡಬೇಕು. ಅದನ್ನು ಬಿಟ್ಟು ಈ ರೀತಿ ಉದ್ದೇಶಪೂರ್ವಕವಾಗಿ ಮಾತನಾಡುವುದು ಸರಿಯಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!