ಅಭಯ ಪಾಟೀಲರ ಸೂಚನೆಗೆ ಆಡಳಿತ ಪಕ್ಷದ ಘರ್ಜನೆ

ಬೆಳಗಾವಿ ಪಾಲಿಕೆ ಸಭೆಯಲ್ಲಿ ನಾಡನುಡಿ ಸಿಡಿಲು –

ಮರಾಠಿ ಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಲಿ- ರಮೇಶ ಸೊಂಟಕ್ಕಿ

ಅಭಯ ಪಾಟೀಲರ ಸೂಚನೆಗೆ ಆಡಳಿತ ಪಕ್ಷದ ಘರ್ಜನೆ – ಕಾಂಗ್ರೆಸ್ ಸದಸ್ಯರ ಮೌನ ಚರ್ಚೆಗೆ ಎಡೆ

ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು ನಾಡು-ನುಡಿ ವಿಷಯದಲ್ಲಿ ರಾಜಕೀಯ ಚಂಡಮಾರುತವಾಗಿ ಬದಲಾಗಿದೆ. ಎಂಇಎಸ್ ನಾಡದ್ರೋಹಿ ನಿಲುವಿಗೆ ತೀವ್ರ ಪ್ರತಿಕ್ರಿಯೆ ನೀಡಿದ ಶಾಸಕರ ಆಕ್ರೋಶ ಸಭಾಂಗಣದಲ್ಲಿ ಗುಡುಗಿನಂತೆ ಪ್ರತಿಧ್ವನಿಸಿತು.


ಅಭಯ ಪಾಟೀಲರ ಸೂಚನೆ – ಆಡಳಿತ ಪಕ್ಷದ ಘರ್ಜನೆ

ಶಾಸಕ ಅಭಯ ಪಾಟೀಲರ ಸ್ಪಷ್ಟ ಸೂಚನೆಗೆ ಕಾನೂನು ಉಲ್ಲೇಖಿಸಿ‌ ಮಾತನಾಡಿದ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಅನುಮತಿ ಇಲ್ಲದೇ ಮಾತನಾಡಿದವರ ಸದಸ್ಯತ್ವ ರದ್ದುಪಡಿಸಬಹುದು ಎಂದರು.

ಅವರೊಂದಿಗೆ ಗಿರೀಶ್ ಧೋಂಗಡಿ, ರವಿ ಧೋತ್ರೆ, ಆನಂದ ಚವ್ವಾಣ, ಶ್ರೀಶೈಲ ಕಾಂಬಳೆ ಸೇರಿ ಹಲವು ಸದಸ್ಯರು ಎಂಇಎಸ್ ಭಂಡಾರದ ವಿರುದ್ಧ ಧ್ವನಿಬಲ ಹೆಚ್ಚಿಸಿದರು.

.ಇದಕ್ಕೆ ಶಾಸಕ ಅಭಯ ಪಾಟೀಲ ಸಹ ಬೆಂಬಲ ಸೂಚಿಸಿದರು.

“ *ನಾಡದ್ರೋಹಿಗಳನ್ನು‌ಮಹಾರಾಷ್ಟ್ರಕ್ಕೆ ಕಳಿಸಿ

ಸರ್ಕಾರಿ ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ನಾಡದ್ರೋಹಿಯ ಮಾತು ಕೇಳುವವರು ಇಲ್ಲಿ ಏಕೆ? ರವಿ ಸಾಳುಂಕೆ ಮತ್ತು ಇತರ ಎಂಇಎಸ್ ಇತರರನ್ನು ಮಹಾರಾಷ್ಟ್ರಕ್ಕೆ ಕಳುಹಿಸಿಬಿಡಿ,” ಎಂದು ಘರ್ಜಿಸಿದರು.

ಅವರ ಈ ಘೋಷಣೆಗೆ ಡಾ. ದಿನೇಶ ನಾಶಿಪುಡಿ ಸೇರಿದಂತೆ ಹಲವರು ಒಪ್ಪಿಗೆ ಸೂಚಿಸಿದರು.

ವಿರೋಧ ಪಕ್ಷದ ಮೌನಕ್ಕೆ ಚರ್ಚೆ

ಸಭೆಯಲ್ಲಿ ಬಹುತೇಕ ಕಾಂಗ್ರೆಸ್ ನಗರಸೇವಕರು ಮೌನವಾಗಿ ಕುಳಿತಿದ್ದು,
“ನಾಡದ್ರೋಹಿಗಳ ವಿರುದ್ಧ ಮಾತಾಡದೆ ಕುಳಿತುಕೊಳ್ಳುವುದು ಕನ್ನಡದ ಹಿತಕ್ಕೆ ವಿರೋಧವೇ?” ಎಂದು ಆಡಳಿತಪಕ್ಷ ಸದಸ್ಯರು ಪ್ರಶ್ನೆ ಎತ್ತಿದರು.

ಕನ್ನಡ ಹಕ್ಕಿನ ವಿಚಾರದಲ್ಲಿ ಮೌನವೇ ಅತಿ ದೊಡ್ಡ ದ್ರೋಹ,” ಎಂದು ಕೆಲವರು ನೇರವಾಗಿ ತಿವಿದರು.

ಮೌನದ ಧರ್ಮಸಂಕಟ!

ಈ ವಿಷಯದಲ್ಲಿ ಶಾಸಕ ಅಭಯ ಪಾಟೀಲರು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರೂ, ಕೆಲವು ಮರಾಠಿ ಭಾಷಿಕ ಬಿಜೆಪಿ ನಗರಸೇವಕರು ಆಸನದಲ್ಲೇ ಕುಳಿತು ಮೌನವಾಗಿರುವುದು ಚರ್ಚೆಯ ಕೇಂದ್ರವಾಯಿತು.
ಇನ್ನೂ ಅಚ್ಚರಿಯ ಸಂಗತಿ ಎಂದರೆ, ಕೆಲವು ಕನ್ನಡ ಭಾಷಿಕ ಸದಸ್ಯರೂ ಕೂಡ ನಾಡು-ನುಡಿ ವಿಷಯದಲ್ಲಿ ಎದ್ದು ನಿಲ್ಲಲಿಲ್ಲ.

ಆಡಳಿತ ಪಕ್ಷದ ನಾಯಕ ಕೊಂಗಾಲಿಯ ಮನವಿಗೂ ಸ್ಪಂದನೆ ಇಲ್ಲದೆ ಕುಳಿತಿರುವುದು ಹೇಗೆ?” ಎಂಬ ಪ್ರಶ್ನೆ ಈಗ ಪಾಲಿಕೆ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ

ರಾಜಕೀಯ ವಲಯದಲ್ಲಿ ಕಿಡಿ
ಎಂಇಎಸ್ ನಾಡದ್ರೋಹಿ ಅಜೆಂಡಾಗೆ ಆಡಳಿತ ಪಕ್ಷ ಸ್ಪಷ್ಟ ಪ್ರತಿರೋಧ ತೋರಿದರೆ, ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲವರ ಮೌನ ಧರ್ಮಸಂಕಟದಂತೆ ತೋರಿತು.

Leave a Reply

Your email address will not be published. Required fields are marked *

error: Content is protected !!