ಸತೀಶ್ ಸಮೂಹ – ರಾಷ್ಟ್ರದ ಅಗ್ರಗಣ್ಯ ಉದ್ಯಮ ಶಕ್ತಿಯ ಸಂಕೇತ

ಉದ್ಯಮ ಶ್ರೇಷ್ಠ” – ರಾಷ್ಟ್ರಕ್ಕೆ ಬೆಳಗಾವಿಯ ಹೆಮ್ಮೆ

ಸತೀಶ್ ಸಮೂಹ – ಸಕ್ಕರೆ ಉದ್ಯಮದ ಚಿನ್ನದ ಅಧ್ಯಾಯ

ಶತಮಾನೋತ್ಸವ ವೇದಿಕೆಯಲ್ಲಿ ಬೆಳಗಾವಿಯ ಜಯಘೋಷ

ನವೀನ ತಂತ್ರಜ್ಞಾನ + ದಕ್ಷ ನಿರ್ವಹಣೆ = ಯಶೋಗಾಥೆ

ಈ ಗೌರವ ಕಾರ್ಮಿಕ-ರೈತರ ಹಗಲು-ರಾತ್ರಿ ಶ್ರಮದ ಫಲ”

ಸತೀಶ್ ಜಾರಕಿಹೊಳಿ – ಕೈಗಾರಿಕಾ ದೃಷ್ಟಿಯ ವಿಸ್ಮಯಶಕ್ತಿ

ಸರ್ಕ್ಯೂಲರ್ ಎಕಾನಮಿ ಮಾದರಿಯಲ್ಲಿ ರಾಷ್ಟ್ರದ ಮುಂಚೂಣಿ ಸಂಸ್ಥೆ

*ಎನರ್ಜಿ, ಎಥನಾಲ್ ಮತ್ತು ಬಯೋ ಗ್ಯಾಸ್ – ಹಸಿರು ಕ್ರಾಂತಿಯ ಹಾದಿಯಲ್ಲಿ

ಬೆಳಗಾವಿಯ ಕೈಗಾರಿಕಾ ಪರಂಪರೆಯಲ್ಲಿ ಸತೀಶ್ ಸಮೂಹ ಸಂಸ್ಥೆಯ ಹೆಸರೇ ಒಂದು ವಿಶ್ವಾಸದ ಮುದ್ರೆ. ಸಕ್ಕರೆ ಉತ್ಪಾದನೆಯಲ್ಲಿನ ಶ್ರೇಷ್ಠತೆ, ಎನರ್ಜಿ ಮ್ಯಾನೇಜ್‌ಮೆಂಟ್‌ನಲ್ಲಿನ ನವೀನತೆ, ಎಥನಾಲ್ ಮತ್ತು ಬಯೋ ಗ್ಯಾಸ್ ಉತ್ಪಾದನೆಯಲ್ಲಿ ಪರಿಸರಪರ ತಂತ್ರಜ್ಞಾನ – ಇವೆಲ್ಲವುಗಳ ಮಿಶ್ರಣವೇ ಈ ಸಂಸ್ಥೆಯ ಶಕ್ತಿಯ ಮೂಲ.

ಸತೀಶ್ ಶುಗರ್ಸ್ ಲಿ. ಹಾಗೂ ಬೆಳಗಾಂ ಶುಗರ್ಸ್ ಪ್ರೈ. ಲಿ. ಕಾರ್ಖಾನೆಗಳು ಕೃಷಿ ಆಧಾರಿತ ಕೈಗಾರಿಕೆಗಳಲ್ಲಿ ದೇಶದಾದ್ಯಂತ ಮಾದರಿಯಾಗಿದೆ.

ಸತೀಶ್ ಜಾರಕಿಹೊಳಿ – ದೃಷ್ಟಿಯ ನಾಯಕತ್ವ

ಈ ಯಶೋಗಾಥೆಯ ಹಿಂದೆ ಸಂಸ್ಥಾಪಕ ಅಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ದೀರ್ಘದೃಷ್ಟಿ ಹಾಗೂ ತಂತ್ರಜ್ಞಾನಾಭಿಮಾನವೇ ಪ್ರಮುಖ. ರೈತರಿಂದ ಹಿಡಿದು ತಾಂತ್ರಿಕ ಸಿಬ್ಬಂದಿ ತನಕ ಪ್ರತಿಯೊಬ್ಬರ ಶ್ರಮವನ್ನು ಗೌರವಿಸುವ ಅವರ ಶೈಲಿ, ಸತೀಶ್ ಸಮೂಹವನ್ನು ದೇಶದ ಶ್ರೇಷ್ಠ ಕೈಗಾರಿಕಾ ಪಂಗತಿಗೆ ತಳ್ಳಿದೆ.

ಶತಮಾನೋತ್ಸವ ಪ್ರಶಸ್ತಿ – ಇತಿಹಾಸದ ಚಿನ್ನದ ಅಕ್ಷರಗಳಲ್ಲಿ

ದಿ ಶುಗರ್ ಟೆಕ್ನಾಲಜಿಸ್ಟ್‌ಸ್ ಅಸೋಸಿಯೇಶನ್ ಆಫ್ ಇಂಡಿಯಾ ತನ್ನ 100ನೇ ವರ್ಷಾಚರಣೆ ಆಚರಿಸುತ್ತಿರುವ ಈ ಮಹತ್ವದ ಕ್ಷಣದಲ್ಲಿ, ಸತೀಶ್ ಸಮೂಹ ಸಂಸ್ಥೆಯ ಹೆಸರು ರಾಷ್ಟ್ರಮಟ್ಟದಲ್ಲಿ ಘೋಷಿತವಾಗಿರುವುದು ಬೆಳಗಾವಿಯ ಕೈಗಾರಿಕಾ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಎತ್ತಿದೆ.

ಅಭಿವೃದ್ಧಿಯ ಹೊಸ ಗುರಿ

ನಾವು ಮುಂದಿನ ಐದು ವರ್ಷಗಳಲ್ಲಿ ಸತೀಶ್ ಸಮೂಹವನ್ನು ದೇಶದ ಟಾಪ್ 5 ಅಗ್ರೋ-ಇಂಡಸ್ಟ್ರಿಯಲ್ ಸಮೂಹಗಳಲ್ಲಿ ಸ್ಥಾಪಿಸಲು ಬದ್ಧರಾಗಿದ್ದೇವೆ. ರೈತ ಬಾಂಧವರ ಆರ್ಥಿಕ ಸುಧಾರಣೆ, ತಂತ್ರಜ್ಞಾನಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳ ವೃದ್ಧಿ ನಮ್ಮ ಮುಖ್ಯ ಗುರಿ.”

ಪ್ರದೀಪಕುಮಾರ ಇಂಡಿ

Leave a Reply

Your email address will not be published. Required fields are marked *

error: Content is protected !!