ಕಾಂಗ್ರೆಸ್ ಸಾಧನೆ ಮನೆಮನೆಗೆ ತಲುಪಲಿ” – ರಾಹುಲ್ ಜಾರಕಿಹೊಳಿ

ಕಾಂಗ್ರೆಸ್ ಸಾಧನೆ ಮನೆಮನೆಗೆ ತಲುಪಲಿ” – ರಾಹುಲ್ ಜಾರಕಿಹೊಳಿ

ಬೆಳಗಾವಿಯಲ್ಲಿ
ಬೃಹತ್ ಬೈಕ್ ರ್ಯಾಲಿ,

ಕಾರ್ಯಕರ್ತರಿಗೆ ಸಂಘಟನೆ ಬಲಪಡಿಸುವ ಕರೆ

ಬೆಳಗಾವಿ –
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ನವಚೈತನ್ಯ ತುಂಬಿದ್ದರೂ, ಪ್ರಚಾರದ ಕೊರತೆಯಿಂದ ಸಾರ್ವಜನಿಕವಾಗಿ ಪರಿಪೂರ್ಣವಾಗಿ ತಲುಪಿಲ್ಲ ಎಂದು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ನಗರ ಯುವ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಂಗ್ರೆಸ್ ಸಾಧನೆಗಳನ್ನು ಜನರಿಗೆ ತಿಳಿಸಬೇಕಿದೆ ಎಂದರು.

ಕೇವಲ ಗ್ಯಾರಂಟಿ ಯೋಜನೆ ಜಾರಿಗೆ ಮಾತ್ರ ಸೀಮಿತವಾಗದೇ, ಅದರ ಪರಿಣಾಮಗಳನ್ನು ಸಹ ಶ್ರಮಪೂರ್ವಕವಾಗಿ ಜನರ ಮನಸ್ಸು ತಲುಪುವಂತೆ ಮಾಡಬೇಕು. ಈ ವರ್ಷ 52 ಸಾವಿರ ಕೋಟಿ ರೂ. ಬಜೆಟ್ ಮೂಲಕ ಜನಪರ ಯೋಜನೆಗಳು ಜಾರಿಗೆ ತಂದಿದ್ದರೂ, ಪ್ರಚಾರದ ಕೊರತೆಯಿಂದ ಅದರ ಪ್ರಭಾವ ಕಡಿಮೆಯಾಗಿದೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

“ಬೂತ್ ಮಟ್ಟದ ಸಂಘಟನೆಯನ್ನು ಬಲಪಡಿಸಿ, ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕಾರ್ಯವೈಖರಿ ಬೆಳೆಸಿದರೆ, ಮತ ಸಹಜವಾಗಿ ಕಾಂಗ್ರೆಸ್‌ನತ್ತ ಹರಿದುಬರುತ್ತದೆ” ಎಂದು ಯುವ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಚುನಾವಣೆ ಸನಿಹ- ಕಾರ್ಯಕರ್ತರಿಗೆ ಸ್ಪಷ್ಟ ಸೂಚನೆ

“ಮುಂಬರುವ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಯಶಸ್ಸು ಸಾಧಿಸಲು ಯುವ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು. ಜನರ ಸಮಸ್ಯೆ ಅರಿತು, ತಕ್ಷಣದ ಸ್ಪಂದನೆ ನೀಡುವ ಸಂಘಟನೆ ಮುಖವಾಡದೊಂದಿಗೆ ನಾವು ಹಾಜರಾಗಬೇಕು” ಎಂಬ ಸ್ಫಷ್ಟ ಸಂದೇಶ ನೀಡಿದರು.

ಸತೀಶ್ ಜಾರಕಿಹೊಳಿಯವರ ಸೇವೆ ಪ್ರೇರಣೆಯಾಗಿದೆ”

“ನಾನು ನನ್ನ ತಂದೆ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಂದ ಪ್ರೇರಣೆ ಪಡೆದುಕೊಂಡಿದ್ದೇನೆ. ಅವರು ಘಟಪ್ರಭಾದಲ್ಲಿ ಉಚಿತ ಶಿಕ್ಷಣ ಹಾಗೂ ಉದ್ಯೋಗ ತರಬೇತಿ ಕೇಂದ್ರ ಸ್ಥಾಪಿಸಿ ನೂರಾರು ಯುವಕರಿಗೆ ಹೊಸ ಭರವಸೆ ನೀಡಿದ್ದಾರೆ. ಈ ರೀತಿಯ ಸಮಾಜಮುಖಿ ಕಾರ್ಯಗಳೇ ನಿಜವಾದ ಸಂಘಟನೆಗೆ ಶಕ್ತಿ ತುಂಬಲಿವೆ” ಎಂದು ರಾಹುಲ್ ಹೇಳಿದರು.

ಬೈಕ್ ರ್ಯಾಲಿ

ಸಭೆಯ ಪೂರ್ವಭಾವಿಯಾಗಿ ಯುವ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನವಾಗಿ ಬೃಹತ್ ಬೈಕ್ ರ್ಯಾಲಿ ನಗರದ ಮುಖ್ಯ ಮಾರ್ಗದಲ್ಲಿ ನಡೆಸಲಾಯಿತು. ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೆ ನೂರಾರು ಯುವಕರು ದ್ವಿಚಕ್ರ ವಾಹನಗಳ ಜಾಥಾದಲ್ಲಿ ಭಾಗವಹಿಸಿ, ಜನತೆಗೆ ಕಾಂಗ್ರೆಸ್ ನವಭಾರತದ ಧೋರಣೆಗಳನ್ನು ಪ್ರತಿಪಾದಿಸಿದರು.

ಸಭೆಯಲ್ಲಿ‌ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ವಿನಯ ನಾವಲಟ್ಟಿ ,
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ , ಉಪಾಧ್ಯಕ್ಷೆ
ದೀಪಿಕಾ ರೆಡ್ಡಿ, ಪ್ರದೀಪ ಎಂ.ಜೆ ,
ಸಿದ್ದಿಕ್ ಅಂಕಲಗಿ, ಶ್ರೀಧರ ಜಾಧವ, ಸಿದ್ದು ಹಳ್ಳಿಗೌಡ, ಇಮ್ರಾನ್ ಅಂಕಲಗಿ, ನೌಮಾನ್ ಮೊಕಾಶಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!