Headlines

ಶಾಂತಾಯಿ ವೃದ್ಧಾಶ್ರಮದಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ

ಬೆಳಗಾವಿ.
ದಾನ-ಧರ್ಮದಲ್ಲಿ ತೊಡಗಿರುವ ಕಾಯಕಯೋಗಿ ಡಾ. ಪ್ರಭಾಕರ್ ಕೋರೆ ಜನ್ಮದಿನವನ್ನು ನಗರದ ಶಾಂತಾಯಿ ವೃದ್ಧಾಶ್ರಮದಲ್ಲಿ ವಿನೂತನ ರೀತಿಯಲ್ಲಿ ಆಚರಿಸಲಾಯಿತು.
ಮಾಜಿ ಮೇಯರ್ ವಿಜಯ್ ಮೋರೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಜನಸಾಮಾನ್ಯರ ದೆಸೆಯಿಂದ ಸಾರ್ವಜನಿಕ ಆರೋಗ್ಯದ ಜಾಗೃತಿಗೆ ಸಾರ್ಥಕವಾಗಿ ಬಳಸಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಕೆಎಲ್ಇ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.


ಸಾಮಾನ್ಯ ಜನರಲ್ಲಿ ಜೀವ ಉಳಿಸುವ ತಂತ್ರಜ್ಞಾನದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ನಸಿರ್ಂಗ್ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ನೀಡಿದ್ದು ಗಮನ ಸೆಳೆಯಿತು.
ಈ ಕುರಿತು ಮಾದರಿ ಮಾನೆಕಿನ್ಗಳ ಸಹಾಯದಿಂದ ತುರ್ತು ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.

ಅಲನ್ ವಿಜಯ್ ಮೋರೆ ಅವರು ಜನ್ಮದಿನದ ಸಂದರ್ಭದಲ್ಲಿ ಎಲ್ಲರಿಗು ಧನ್ಯವಾದ ಸಲ್ಲಿಸಿ, “ಡಾ. ಕೋರೆ ಅವರು ಈ ದೇಶದ ಆರೋಗ್ಯ, ಶಿಕ್ಷಣ ಮತ್ತು ಸಮಾಜಸೇವೆಯ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾಭಾವನೆಯನ್ನು ಮುಂದಿನ ತಲೆಮಾರಿಗೆ ತಿಳಿಸಬೇಕಾದ ಹೊಣೆ ನಮ್ಮದು ಎಂದರು.

ಈ ಸಂದರ್ಭದಲ್ಲಿ ನಮ್ರತಾ ದೇವೂಲ್ಕರ್, ಅಶೋಕ್ ಕೋರೆ, ವಿವಿಧ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!