ಕಡಾಡಿ ಹೋರಾಟ- ಕಾರ್ಮಿಕರಿಗೆ ಆಶಾದೀಪ!

ಬೆಳಗಾವಿಗೆ ಮತ್ತೆ ಉಸಿರು:
100 ಹಾಸಿಗೆಗಳ ಇ.ಎಸ್.ಐ.ಸಿ. ಆಸ್ಪತ್ರೆಗೆ ಕೇಂದ್ರದ ಮರು ಟೆಂಡರ್ ಅನುಮೋದನೆ

ಬೆಳಗಾವಿ

ಗಡಿನಾಡು ಬೆಳಗಾವಿ ಜಿಲ್ಲೆಯ ಕಾರ್ಮಿಕರ ಸಮುದಾಯಕ್ಕೆ ಬಹುಪಾಲು ನಿರೀಕ್ಷಿತವಾಗಿದ್ದ 100 ಹಾಸಿಗೆಗಳ ಇ.ಎಸ್.ಐ.ಸಿ ಆಸ್ಪತ್ರೆ ಯೋಜನೆಗೆ ಕೊನೆಗೂ ಜೀವ ಬಂದಿದೆ !

ಎರಡು ವರ್ಷಗಳ ರಾಜ್ಯದ ನಿರ್ಲಕ್ಷ್ಯವೊಂದೇ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯನ್ನು ಗಾಳಿಗೆ ಎಸೆದಂತಾಗಿತ್ತು. ಆದರೆ, ಇತ್ತೀಚೆಗೆ ಮರು ಟೆಂಡರ್ಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ ಬಂದಿದೆ. ಇದರಿಂದ ಜನರ ಆರೋಗ್ಯದ ಹಕ್ಕಿಗೆ ಹೊಸ ಬೆಳಕಿನ ಕಿರಣವಾಗಿದೆ.

ನಿರ್ಲಕ್ಷ್ಯದಿಂದ ನಿರ್ಣಯದವರೆಗೆ…

2023ರ ಫೆಬ್ರವರಿಯಲ್ಲಿ ಮಂಜೂರಾದ ಈ ಯೋಜನೆ, ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬಲ್ಲದು ಎಂಬ ಭರವಸೆ ಮೂಡಿಸಿತ್ತು.

ಆದರೆ ರಾಜ್ಯ ಸರ್ಕಾರ ಯೋಜನೆಗೆ ಭೂಮಿ ನೀಡುವಲ್ಲಿ ಅನುಷ್ಠಾನದ ಅಗತ್ಯ ತುತರ್ು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲೂ ವಿಳಂಬ ಮಾಡಿದ್ದು, ಕೊನೆಗೆ 2024ರ ಕೊನೆಯಲ್ಲಿ ಕೇಂದ್ರ ಸಕರ್ಾರದಿಂದಲೇ ಟೆಂಡರ್ ರದ್ದುಪಡಿಸಲಾಯಿತು. ಭೂಮಿ ಇಲ್ಲದೆ ಕಟ್ಟಡ ಕಟ್ಟುವುದು ಹೇಗೆ? ಎಂಬ ಕಠಿಣ ಪ್ರಶ್ನೆಯೊಂದಿಗೆ ಯೋಜನೆ ಸ್ಥಗಿತಗೊಂಡಿತ್ತು.
ಕಡಾಡಿ ಗರಂ..!


ಈ ಸಂದರ್ಭದಲ್ಲಿ ಕೇಂದ್ರದಲ್ಲಿ ಹಲವು ಸುತ್ತಿನ ಮಾತುಕತೆಗಳಲ್ಲಿ ಭಾಗವಹಿಸಿ, ವಿಷಯದ ತೀವ್ರತೆಯನ್ನು ಮನದಟ್ಟು ಮಾಡಿ ಕಾರ್ಯಸಾಧನೆ ಮಾಡಿದವರು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ.!
ಅಧಿಕಾರಿಗಳ ಕಚೇರಿ ಬಾಗಿಲು ತಟ್ಟಿದ ಪರಿ, ಶೂನ್ಯವೇಳೆಯಲ್ಲಿ ಮಾತು ಹಾಕಿದ ದೃಢತೆ ಮತ್ತು ಬೆಂಗಳೂರಿನಿಂದ ದೆಹಲಿವರೆಗೆ ಈ ವಿಷಯದ ಮೆಚ್ಚಿನ ಬೆಳವಣಿಗೆ ಚಿಟಟ ಠಜಿ ಣ ಣಜಟಟ ಣಜ ಣಠಡಿಥಿ ಠಜಿ ಚಿ ಡಿಜಟಜಟಿಣಟಜ ಠಿಣಛಟಛಿ ಜಡಿತಚಿಟಿಣ.

ರಾಜ್ಯದ ನಿರ್ಲಕ್ಷ್ಯದಿಂದ ಬಡ ಕಾರ್ಮಿಕರ ಆರೋಗ್ಯಕ್ಕೆ ಅಪಾಯವಾಗುತ್ತಿದೆ, ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ಸ್ಪಂದನೆ: ಮರು ಟೆಂಡರ್ಗೆ ಸಮ್ಮತಿ
2025ರ ಜುಲೈ ಅಂತ್ಯದೊಳಗೆ ಕೇಂದ್ರ ಸರ್ಕಾರ ಮತ್ತೆ ಯೋಜನೆಯ ಪರಿಶೀಲನೆ ನಡೆಸಿ ಆನ್ಲೈನ್ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಹೊಸದಾಗಿ ಹೊರಡಿಸಿರುವ ಟೆಂಡರ್ನಲ್ಲಿ ಆಸ್ಪತ್ರೆಯ ಕಟ್ಟಡ, ವೈದ್ಯಕೀಯ ಉಪಕರಣಗಳ ಖರೀದಿ, ಸಿಬ್ಬಂದಿ ನೇಮಕಾತಿ ಮೊದಲಾದ ಎಲ್ಲಾ ಅಂಶಗಳು ಅಡಕವಾಗಿವೆ.

5 ಎಕರೆ ಜಾಗೆ ನೀಡುತ್ತೇನೆ


ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರು ಅಭಯ ಪಾಟೀಲ, ಕೈ ಬಿಚ್ಚಿ ಯೋಜನೆಯನ್ನು ಬೆಂಬಲಿಸಿದ್ದಾರೆ. ಉದ್ಯಮಬಾಗ ಪ್ರದೇಶದಲ್ಲಿ ಈ ಆಸ್ಪತ್ರೆ ನಿರ್ಮಾಣ ವಾಗಬೇಕೆಂದು ನಾನು ಮೊದಲಿನಿಂದಲೂ ಆಗ್ರಹಿಸುತ್ತಿದ್ದೆ. ಅದಕ್ಕಾಗಿ 5 ಎಕರೆ ಜಾಗೆಯನ್ನು ನೀಡಲು ನಾನು ಸಿದ್ಧ, ಎಂದು ಅವರು ಭರವಸೆ ನೀಡಿರುವುದು ಯೋಜನೆಗೆ ಮತ್ತೊಂದು ಬಲವಾಗಿದೆ.

ಯೋಜನೆಯ ಚಿತ್ರಣ

ಯೋಜನೆ ಮಂಜೂರು ಫೆಬ್ರವರಿ 2023
ಹಾಸಿಗೆಗಳು- 100
ಲಾಭದಾರರು- 14 ಲಕ್ಷಕ್ಕೂ ಹೆಚ್ಚು
ವಿಳಂಬದ ಅವಧಿ- 2 ವರ್ಷಗಳಿಗಿಂತ ಹೆಚ್ಚು
ಮರು ಟೆಂಡರ್ ದಿನಾಂಕ- ಜುಲೈ 2025

ಸಾಮಾನ್ಯರ ಪಾಲಿಗೆ ಮಹತ್ವದ ಸೇವೆ
ಈ ಯೋಜನೆಯಿಂದ ಬೆಳಗಾವಿ, ಚಿಕ್ಕೋಡಿ, ಗೋಕಾಕ್, ನಿಪ್ಪಾಣಿ, ಖಾನಾಪುರ ಮೊದಲಾದ ತಾಲೂಕುಗಳ ಕಾಮರ್ಿಕ ಕುಟುಂಬಗಳಿಗೆ ತಾತ್ಕಾಲಿಕ ಚಿಕಿತ್ಸೆ, ತಜ್ಞರ ಸಲಹೆ, ನಿರಂತರ ಚಿಕಿತ್ಸೆ ಮುಂತಾದ ಸೌಲಭ್ಯಗಳು ದೊರೆಯಲಿವೆ. ಖಾಸಗಿ ಆಸ್ಪತ್ರೆಗಳ ಭಾರೀ ವೆಚ್ಚದ ನಡುವೆ ಇಎ???ಸಿ ಆಸ್ಪತ್ರೆಯಂತಹ ಸುಸಜ್ಜಿತ ಆಸ್ಪತ್ರೆ, ಬಡ ಕಾಮರ್ಿಕರ ಬದುಕಿಗೆ ಹೊಸ ಉಸಿರಿನಂತೆ ಕಾಣುತ್ತದೆ.
ಈ ಆಸ್ಪತ್ರೆ ಕೇವಲ ಕಟ್ಟಡವಲ್ಲ, ಅದು ಬೆಳಗಾವಿಯ ಕೆಲಸಗಾರರ ಆರೋಗ್ಯ ಭದ್ರತೆ, ಮಾನವೀಯ ಸ್ಪಂದನೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿದೆ. ಈಗಾಗಲೇ ಕೇಂದ್ರವು ತನ್ನ ಪಾತ್ರವನ್ನು ನಿರ್ವಹಿಸಿದೆ. ಇನ್ನುಳಿದ ಜವಾಬ್ದಾರಿ ರಾಜ್ಯ ಸಕರ್ಾರದದು. ಭೂಮಿ ನೀಡುವ ಕೆಲಸ ತಕ್ಷಣವಾಗಬೇಕು. ದ್ವಂದ್ವ, ದಾಪು, ದಡದಾಟ ಬೇಡ. ಯೋಜನೆ ಆರಂಭವಾಗಲಿ, ನವ ಬೆಳವಣಿಗೆಯ ದಿಕ್ಕಿನಲ್ಲಿ ಹೆಜ್ಜೆ ಇಡಲಿ.

Leave a Reply

Your email address will not be published. Required fields are marked *

error: Content is protected !!