ಬೆಳಗಾವಿ.
ಮಹಾನಗರ ಪಾಲಿಕೆ ಸ್ಥಾಯಿಸಮಿತಿ ಅಧ್ಯಕ್ಷರ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ದಿ. 18 ರಂದು ಅಧ್ಯಕ್ಷರ ಆಯ್ಕೆ ನಡೆಯಲಿದೆ. ಎಲ್ಲವೂ ಅವಿರೋಧ ಆಯ್ಕೆ ಪಕ್ಕಾ.

ಆದರೆ ಈ ಚುನಾವಣೆಯಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಎಂಟ್ರಿಆಗಿದ್ದಾರೆಂದು ಗೊತ್ತಾಗಿದೆ. ಕೆಲವೊಂದು ಕಮಿಟಿಯಲ್ಲಿ ಇಂತಹವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ರಣತಂತ್ರ ಅವರು ರೂಪಿಸಿದ್ದಾರೆ ಎಂದು ಗೊತ್ತಾಗಿದೆ.

ಮೂಲಗಳ ಪ್ರಕಾರ, ರಮೇಶ ಜಾತಕಿಹೊಳಿ ಅವರು ಉತ್ತರ ಕ್ಷೇತ್ರದ ಮಾಜಿ ಶಾಸಕ ಅನಿಲ ಬೆನಕೆ ಮೂಲಕ ಒತ್ತಡ ಹೇರುವ ತಂತ್ರ ನಡೆಸಿದ್ದಾರೆಂದು ಹೇಳಲಾಗಿದೆ.ಎರಡು ಕಮಿಟಿಗಳಿಗೆ ಯಾರು ಅಧ್ಯಕ್ಷರು ಎನ್ನುವುದು ಬಹುತೇಕ ಸ್ಪಷ್ಟವಾಗಿದೆ. ಇನ್ನೆರೆಡು ಕಮಿಟಿಗಳಲ್ಲಿ ರಮೇಶ ಜಾರಕಿಹೊಳಿ.ಎಂಟ್ರಿಯಿಂದ ಗೊಂದಲ ಸೃಷ್ಟಿಯಾಗಿದೆ ಎನ್ನುವ ಮಾತುಗಳಿವೆ.

ಆದರೆ ಪಾಲಿಕೆಯ ಕಿಂಗ್ ಮೇಕರ್ ಎನಿಸಿಕೊಂಡ ಅಭಯ ಪಾಟೀಲ ನಡೆ ಏನು ಎನ್ನುವುದು ನಿಗೂಢವಾಗಿದೆ.