
32 ವರ್ಷಗಳಿಂದ ನಾಪತ್ತೆಯಾಗಿದ್ದ ಮೂವರು ಆರೋಪಿಗಳು ಅಂದರ್
32 ವರ್ಷಗಳಿಂದ ತಲೆಮರೆಯುತ್ತಿದ್ದ ಮೂವರು ಆರೋಪಿಗಳು ಪೊಲೀಸರ ಬಲೆಗೆ , ಬೆಳಗಾವಿ: ಸಂಕೇಶ್ವರ ಪೊಲೀಸ್ ಠಾಣೆಯ ಹಳೆಯ ಎಲ್‌ಪಿಆರ್ ಕೇಸ್ (ಸಿ.ಆರ್. ನಂ. 190/1993, ಕಲಂ 323, 326 ಜೊತೆಗೆ 34 ಐಪಿಸಿ) ಸಂಬಂಧಿಸಿದಂತೆ 32 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 1993ರಲ್ಲಿ ಬಂಧಿತರಾಗಿ ನಂತರ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಆರೋಪಿಗಳು, ವಿಚಾರಣೆಗೆ ಹಾಜರಾಗದೆ ಓಡಿಹೋಗಿದ್ದರು. ಈ ಹಿನ್ನೆಲೆ ಅವರ ವಿರುದ್ಧ ಎಲ್‌ಪಿಆರ್ ವಾರಂಟ್ ಜಾರಿಯಾಗಿತ್ತು. ಬಂಧಿತರು :ನಾರಾಯಣಲಾಲ್ ಹೀರಾಲಾಲ್ ಗುಜ್ಜರ್…