e belagavi special.*
ಬೆಳಗಾವಿ:
ಗಡಿನಾಡ ಬೆಳಗಾವಿಯ ಸಹಕಾರ ಕ್ಷೇತ್ರದಲ್ಲಿ ಈ ಬಾರಿ ನಡೆಯುತ್ತಿರುವ ಚುನಾವಣೆಗಳು ಜಿಲ್ಲೆಯ ರಾಜಕೀಯ ಭವಿಷ್ಯವನ್ನೇ ನಿರ್ಧರಿಸುವ ಹೋರಾಟವಾಗಿ ಪರಿಣಮಿಸಿವೆ.
ದಶಕಗಳಿಂದ ಕಟ್ಟಿ ಕುಟುಂಬದ ಕೈವಶದಲ್ಲಿದ್ದ ಡಿಸಿಸಿ ಬ್ಯಾಂಕ್, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಹಾಗೂ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ – ಈ ಮೂರು ಪ್ರಭಾವಿ ಸಂಸ್ಥೆಗಳತ್ತ ಈಗ ಜಾರಕಿಹೊಳಿ ಸಹೋದರರು ನೇರ ದಾಳಿ ನಡೆಸಿದ್ದಾರೆ.:
*ಬಾಲಚಂದ್ರ ಜಾರಕಿಹೊಳಿ: ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಗಂಭೀರವಾಗಿ ಪರಿಗಣನೆ, 12–14 ಸ್ಥಾನಗಳಲ್ಲಿ ಗೆಲುವು ಖಚಿತ ಎಂಬ ಮಾತು.*
*ಸತೀಶ್ ಜಾರಕಿಹೊಳಿ:* ಹುಕ್ಕೇರಿಯತ್ತ ಕಣ್ಣು, ಹಿರಣ್ಯಕೇಶಿ ಕಾರ್ಖಾನೆ ಮತ್ತು ವಿದ್ಯುತ್ ಸಂಘ ಪುನರುಜ್ಜೀವನಗೊಳಿಸುವ ಭರವಸೆ.
ರಮೇಶ್ ಕತ್ತಿ “ನಮ್ಮ ಕುಟುಂಬ ಹುಕ್ಕೇರಿಯನ್ನು ನಾಲ್ಕು ದಿಕ್ಕಿನಿಂದ ಕಾಪಾಡುತ್ತದೆ”
*ಜಾರಕಿಹೊಳಿ ತಿರುಗೇಟು:* “ಮಧ್ಯಾಹ್ನ ಎದ್ದರೆ ಆಗುವುದಿಲ್ಲ, ಜನರ ಹಿತ ಕಾಯಿದರೆ ಜನರೇ ನಿಮ್ಮನ್ನು ಕಾಯುತ್ತಾರೆ” ಎಂಬ ಚುಚ್ಚುಮಾತು.
—
*ಡಿಸಿಸಿ ಬ್ಯಾಂಕ್ – ಜಾರಕಿಹೊಳಿ ಹೊಸ ಶಕ್ತಿ ಕೇಂದ್ರ**

ಡಿಸಿಸಿ ಬ್ಯಾಂಕ್ ಚುನಾವಣೆ ಜಿಲ್ಲೆಯಲ್ಲಿ ರಾಜಕೀಯ ಬಿಸಿ ತಟ್ಟೆ.
ಬಾಲಚಂದ್ರ ಜಾರಕಿಹೊಳಿ. ಡಾ. ಪ್ರಭಾಕರ ಕೋರೆ, ಅಣ್ಣಾಸಾಹೇಬ ಜೊಲ್ಲೆ, ಲಕ್ಷ್ಮಣ ಸವದಿ ಮುಂತಾದ ಮುಖಂಡರ ಬೆಂಬಲದೊಂದಿಗೆ ಬಣ ಬಲಪಡಿಸಿದ್ದಾರೆ.
ಅಧ್ಯಕ್ಷ ಸ್ಥಾನ ಲಿಂಗಾಯತರಿಗೆ ಮೀಸಲಾದ ಸುದ್ದಿ ಜಾರಕಿಹೊಳಿಯವರ ವರ್ಚಸ್ಸಿಗೆ ಮತ್ತೊಂದು ಪ್ಲಸ್ ಪಾಯಿಂಟ್.
—
*ಹುಕ್ಕೇರಿಯತ್ತ ಸತೀಶ್ ಜಾರಕಿಹೊಳಿ ಚಿತ್ತ*

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಟ್ಟಿಗಳ ಕೋಟೆ ಹುಕ್ಕೇರಿಯತ್ತ ಕಣ್ಣು ಹರಿಸಿದ್ದಾರೆ.
“ಹಿರಣ್ಯಕೇಶಿ ಕಾರ್ಖಾನೆ, ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಜನರ ನಿರೀಕ್ಷೆಗೆ ತಕ್ಕಂತೆ ಬೆಳೆಯಲಿಲ್ಲ. ದಿ. ಅಪ್ಪಣಗೌಡ ಪಾಟೀಲ್ ಅವರ ಹೆಸರಿನಲ್ಲಿ ಚುನಾವಣೆಗೆ ನಿಲ್ಲುತ್ತೇವೆ” ಎಂದು ಘೋಷಿಸಿದ್ದಾರೆ.

*ಮಾತಿನ ಕದನ – ಕತ್ತಿ v/s ಜಾರಕಿಹೊಳಿ*
*ರಮೇಶ್ ಕತ್ತಿ:* “ಹೊರಗಿನವರು ಹುಕ್ಕೇರಿಗೆ ಕಾಲಿಟ್ಟರೆ ತಪ್ಪದು. ನಾವು ನಾಲ್ಕು ದಿಕ್ಕಿನಿಂದ ಕಾಯುತ್ತೇವೆ.”
*ಸತೀಶ್ ಜಾರಕಿಹೊಳಿ: “ಬೆಳ್ಳಿಗ್ಗೆ ಎದ್ದವರಿಗೇ ಕ್ಷೇತ್ರ ಸಿಗುತ್ತದೆ, ಮಧ್ಯಾಹ್ನ ಎದ್ದವರಿಗೆ ಅಲ್ಲ!”*
—
ಹಿರಣ್ಯಕೇಶಿ ಕಾರ್ಖಾನೆ – ತಪ್ಪಿದ ಕತ್ತಿ ಹಿಡಿತ

ಉಮೇಶ್ ಕತ್ತಿ ನಿಧನದ ನಂತರ ಹಿರಣ್ಯಕೇಶಿ ಕಾರ್ಖಾನೆಯ ಮೇಲೆ ಕತ್ತಿ ಹಿಡಿತ ಸಡಿಲವಾಗಿದೆ. ನಿರ್ದೇಶಕರ ಬಣ ಈಗ ಜೊಲ್ಲೆ ಮತ್ತು ಕತ್ತಿ ನಡುವೆಯೇ ತೂಗಾಡುತ್ತಿದೆ.