
ಡಿಸಿ ಹೇಳಿಕೆ- ಧರ್ಮ ಸೂಕ್ಷ್ಮತೆ ಎಚ್ಚರಿಸಿದ ಸಭಾನಾಯಕ
ಬೆಳಗಾವಿ, ಆ. 25 (ಸಂಯುಕ್ತ ಕರ್ನಾಟಕ)ಗಣೇಶೋತ್ಸವ ಸಿದ್ಧತೆಗಳ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನೀಡಿದ “ಲಕ್ಷ ಜನರಿಗೆ ಪಾಲಿಕೆಯಿಂದ ಮಹಾಪ್ರಸಾದ” ಎಂಬ ಹೇಳಿಕೆ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಭಾರೀ ಗದ್ದಲ ಎಬ್ಬಿಸಿತು. ಪಕ್ಷ ಬೇಧ ಮರೆತ ನಗರಸೇವಕರು ಜಿಲ್ಲಾಡಳಿತದ ವಿರುದ್ಧ ಗರಂ ಆಗಿ “ಶಿಷ್ಟಾಚಾರ ಉಲ್ಲಂಘನೆ – ಪಾಲಿಕೆಗೆ ಅವಮಾನ” ಎಂದು ನೇರ ವಾಗ್ದಾಳಿ ನಡೆಸಿದರು. *ಮೊಟ್ಟ ಮೊದಲ ಬಾರಿಗೆ ಡಿಸಿಯೇ ಚರ್ಚೆಯ ಗುರಿ!* ಗಡಿನಾಡ ಬೆಳಗಾವಿಯ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಜಿಲ್ಲಾಧಿಕಾರಿಯ…