
ಗಣೇಶ ವಿಸರ್ಜನೆ ಮೆರವಣಿಗೆ.
“ಪಾರಂಪರಿಕ ಮಾರ್ಗವೇ ಅಂತಿಮ – ಪೊಲೀಸರಿಗೆ ಅಭಯ ಖಡಕ್ ಎಚ್ಚರಿಕೆ”
ಗಣೇಶ ಮಂಡದವರೇನು ದರೋಡೆಕೋರರಾ?
ಬೆಳಗಾವಿ:
ಗಡಿನಾಡ ಬೆಳಗಾವಿಯ ಗಣೇಶೋತ್ಸವಕ್ಕೆ ಪೊಲೀಸರು ಅನಗತ್ಯ ಕಿರಿಕಿರಿ ಮುಂದುವರಿಸಿದರೆ ಪರಿಣಾಮ ಗಂಭೀರವಾಗುವುದು ಖಚಿತ!
ಶಹಾಪುರದ ಸಂತಸೇನಾ ಮಂಗಲ ಕಾರ್ಯಾಲಯದಲ್ಲಿಂದು ಸಂಜೆ ನಡೆದ ೮೦ ಕ್ಕೂ ಗಣೇಶ ಮಂಡಳಿ ಪದಾಧಿಕಾರಿಗಳ ಸಭೆಯಲ್ಲಿ ಶಾಸಕರು ಈ ಎಚ್ಚರಿಕೆ ನೀಡಿದರು.

ಕಳೆದ ಬಾರಿಯಂತೆ ಈ ಸಲವೂ “ಪಾರಂಪರಿಕ ಮಾರ್ಗದಲ್ಲಿಯೇ ಮೆರವಣಿಗೆ ಸಾಗುತ್ತದೆ.ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಂಡಳಿಗಳ ಅಭಿಪ್ರಾಯ ಉಲ್ಲೇಖಿಸಿ ಘೋಷಿಸಿದರು.
“ವಿಸರ್ಜನೆ ಮೆರವಣಿಗೆಯ ಮಾರ್ಗವು . ಪೀಳಿಗೆಯಿಂದ ಬಂದಿರುವ ಪಾರಂಪರಿಕ ಮಾರ್ಗ. ಅದೇ ದಾರಿಯಲ್ಲಿ ಗಣೇಶ ಮೂರ್ತಿ ಸಾಗುತ್ತದೆ. . ಪೊಲೀಸರ ಒತ್ತಡ, ಬೆದರಿಕೆ ಇಲ್ಲಿ ಕೆಲಸಕ್ಕೆ ಬರುವುದಿಲ್ಲ” ಎಂದು ಪಾಟೀಲ ಖಡಕ್ ಧಾಟಿಯಲ್ಲಿ ಹೇಳಿದರು.
ಈ ಬಗ್ಗೆ ಪೊಲೀಸ್ ಆಯುಕ್ತರೊಂದಿಗೂ ಮಾತುಕತೆ ಮಾಡುವುದಾಗಿ ಭರವಸೆ ನೀಡಿದರು.

“ವಿಸರ್ಜನೆ ದಿನ ಪಟಾಕಿ, ಡಾಲ್ಬಿ, ಬೇಸ್–ಟಾಪ್ ಇವೆಲ್ಲಾ ಹಿಂದೂ ಸಂಪ್ರದಾಯದ ಅಂಗಗಳು. ಅದನ್ನು ನಿಲ್ಲಿಸು ಎಂದು ಪೊಲೀಸರು ಹೇಳುವುದಾದರೆ, ಅದು ಸಂಪೂರ್ಣ ಅಸಹ್ಯ. ಗಣೇಶ ಮೆರವಣಿಗೆಯ ಸಡಗರವನ್ನು ಯಾರೂ ಕಡಿತ ಮಾಡೋದು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ಅವರೇನು ದಡೋಡೆಕೋರರಾ?
ಪೊಲೀಸರು ಕೆಲ ಮಂಡಳಿಗಳಿಂದ ಬಾಂಡ್ ಬರೆಯಿಸಿಕೊಂಡ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, “ಇಲ್ಲಿ ಗಣೇಶೋತ್ಸವ ಮಂಡಳಿಗಳು ದರೋಡೆಕೋರರಾ ಎಂದು ಖಾರವಾಗಿ ಪ್ರಶ್ನೆ ಮಾಡಿದರು. ? ಏಕೆ ಪೊಲೀಸರು ಹೀಗೆ ವರ್ತಿಸುತ್ತಾರೆ? ಮುಂದೆ ಎಚ್ಚರಿಕೆಯಿಂದ ಇರಲಿ ಎಂದರು.
ಇಲ್ಲಿ ಪೊಲೀಸರು ಬರೆದುಕೊಂಡ ಬಾಂಡಗಳ ಮೇಲೆ ಬರೀ ಸಹಿ ಮಾಡಿಸಿಕೊಂಡಿದ್ದಾರೆ. ಇಲ್ಲಿ ಬಾಂಡ್ ಗಳು ಕಾಣೆಯಾಗಿಏನಾದರೂ ಹೆಚ್ವುಕಡಿಮೆಯಾದರೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು.
ಹಿಂದೂಗಳ ಹಬ್ಬಕ್ಕೆ ಏಕಿಷ್ಟು ಕಿರಿಕ್?

“ಇಂದು ಡಾಲ್ಬಿಯನ್ನು ಹೊಂಡದ ಬಳಿ ಬಂದ್ ಮಾಡು ಎನ್ನುತ್ತಾರೆ, ನಾಳೆ ಮಂಟಪದ ಬಳಿ ಕೂಡಾ ನಿಲ್ಲಿಸು ಎನ್ನುತ್ತಾರೆ. ಹೀಗೆ ನಿಯಮ ಹಾಕುತ್ತಾ ಹೋದರೆ ಹಬ್ಬವೇ ಹಾಳು! ಹಿಂದೂಗಳ ಹಬ್ಬಕ್ಕೆ ಮಾತ್ರ ಈ ನಿಯಮ ಏಕೆ? ಪಟಾಕಿ ಹಾರಿಸಬಾರದು ಎಂದರೆ, ನಾವು ಗೋಟಿ ಆಡಬೇಕಾ?” ಎಂದು ಶಾಸಕರು ಕಿಡಿಕಾರಿದರು.
“ಪೊಲೀಸರು ಎಷ್ಟೇ ಬೆದರಿಕೆ ಹಾಕಿದರೂ ಹೆದರಬೇಡಿ. ನಿಮ್ಮ ಹಿಂದೆ ಇಡೀ ಬೆಳಗಾವಿ ಇದೆ. ನೇರವಾಗಿ ಮಹಾಮಂಡಳ ಅಥವಾ ನನಗೆ ಮಾಹಿತಿ ನೀಡಿ” ಎಂದರು.
“ನಮಗೂ ಶಾಂತಿ ಬೇಕು. ಹಬ್ಬವು ವೈಭವದಿಂದ ಸಾಗಲಿ. ಮನೆಮಂದಿ ಕುಳಿತು ಸಂತೋಷದಿಂದ ಗಣೇಶದ ಆರಾಧನೆ ಮಾಡಲಿ. ಆದರೆ ಶಾಂತಿಯ ಹೆಸರಿನಲ್ಲಿ ಪೊಲೀಸರ ದಬ್ಬಾಳಿಕೆಗೆ ಒಪ್ಪಿಕೊಳ್ಳುವುದಿಲ್ಲ” ಎಂದು ಪಾಟೀಲರು ಸ್ಪಷ್ಟಪಡಿಸಿದರು.