ಬೆಳಗಾವಿ, ಸೆ
ನಗರದ ಸಡಗರ–ಸಂಭ್ರಮಕ್ಕೆ ಚಂದ್ರಗ್ರಹಣವೂ ತಡೆದಿಲ್ಲ.

ನಿನ್ನೆ (ಸೆ. 6) ಸಂಜೆ 5 ಗಂಟೆಗೆ ಆರಂಭವಾದ ಗಣೇಶ ವಿಸರ್ಜನೆ ಮೆರವಣಿಗೆ ಇಂದಿಗೂ ಮುಂದುವರಿಯುತ್ತಿದ್ದು, ನಗರದ ಬೀದಿಗಳು ಭಕ್ತಿ-ಭಾವನೆಯಿಂದ ನಾದಮಯವಾಗಿವೆ.


ಮೆರವಣಿಗೆ ವೈಭವ
ನಗರದ ಪ್ರಮುಖ ರಸ್ತೆಗಳಲ್ಲಿ ಗಣೇಶ ಭಕ್ತರ ಹರ್ಷೋದ್ಗಾರ, ಡಿಜೆ ನಾದ, ತಾಳ-ಮದ್ದಳೆ ಸದ್ದು, ಭಜನಾ–ಕೀರ್ತನೆಗಳ ಸೊಗಸು ಒಟ್ಟಾಗಿ ಸಂಭ್ರಮದ ಚಿತ್ರಣ ಮೂಡಿಸಿದೆ. ಅನೇಕ ಮೂರ್ತಿಗಳು ಹೂಮಾಲೆಗಳಿಂದ, ವಿದ್ಯುತ್ ಬೆಳಕಿನಿಂದ ಅಲಂಕರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಸಾವಿರಾರು ಮಂದಿ ವೀಕ್ಷಕರಾಗಿ ಸೇರುತ್ತಿದ್ದಾರೆ.


ಇನ್ನೂ 24 ಮೂರ್ತಿಗಳ ವಿಸರ್ಜನೆ ಬಾಕಿ
ನಗರದ ವಿವಿಧ ಗಣೇಶ ಮೂರ್ತಿಗಳಲ್ಲಿ ಬಹುತೇಕವು ವಿಸರ್ಜನೆಗೊಂಡಿದ್ದರೂ ಇನ್ನೂ ಕನಿಷ್ಠ 24 ಮೂರ್ತಿಗಳ ವಿಸರ್ಜನೆ ಬಾಕಿ ಇದೆ. ಪ್ರತೀ ವರ್ಷ ಹೀಗೆಯೇ ವಿಸರ್ಜನೆ ಮೆರವಣಿಗೆ ರಾತ್ರಿ–ಬೆಳಗಿನವರೆಗೂ ಮುಂದುವರಿಯುವುದು ಬೆಳಗಾವಿಯ ವಿಶಿಷ್ಟ ಧಾರ್ಮಿಕ–ಸಾಂಸ್ಕೃತಿಕ ವೈಶಿಷ್ಟ್ಯ.

ಬೆಳಗಾವಿ ಮೇಯರ್, ಉಪಮೇಯರ್, ಆಯುಕ್ತರು, ಪೊಲೀಸ್ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ
