Headlines

ಸಹಾಯದ ನಿರೀಕ್ಷೆಯಲ್ಲಿ 7 ವರ್ಷದ ಪೋರ

ಅರಳುವ ಹೂವೊಂದು ಬಾಡದಿರಲಿ ನಿಮ್ಮ ಸಹಾಯದ ನಿರೀಕ್ಷೆಯಲ್ಲಿದ್ದಾನೆ 7 ವರ್ಷದ ಪೋರ

ಬೆಳಗಾವಿ: ಆತ ಈಗ ಎರಡನೇ ಕ್ಲಾಸ್ ವಿದ್ಯಾರ್ಥಿ ಆಟೋಡದಲ್ಲಿ ಶಾಲೆಯಲ್ಲಿ ಆತನನ್ನು ಮೀರಿಸುವವರು ಯಾರೂ ಇರಲಿಲ್ಲ. ಅದರಂತೆ ಸಂಗೀತವೆಂದರೇ ಆತನಗೆ ಅಚ್ಚು ಮೆಚ್ಚು ಬೆಳೆಯುವ ಪೈರು ಮೊಳಕೆಯಲ್ಲಿ ಕಾಣು ಎಂಬಂತೆ ಆ ಬಾಲಕ ಹಾಡಿಕೊಂಡು ಆಡಿಕೊಂಡಿದ್ದ ಆದರೆ ಏಕಾಏಕಿ ಆತನ ಮುಖದಲ್ಲಿ ಬಾವು ಕಾಣಿಸಿಕೊಂಡಾಗ ತಂದೆ ತಾಯಿಯರು ಆತನನ್ನು ಕರೆದುಕೊಂಡು ಆಸ್ಪತ್ರೆಗೆ ಹೋದಾಗ ವೈದ್ಯರು ಆ ಬಾಲಕನ್ನು ಪರೀಕ್ಷಿಸಿ ತಂದೆ ತಾಯಿಗೆ ನಿಮ್ಮ ಮಗನಿಗೆ ಬ್ಲಡ್ ಕ್ಯಾನ್ಸರ್ ಎಂದು ಹೇಳಿದ್ದರು.

7 ವರ್ಷದ ವಿಹಾನ್ ರಾಮು ಚೌವ್ಹಾನ್ ಎಂಬ ಬಾಲಕ ಸಧ್ಯ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾ‌ನೆ. ವಿಹಾನ್ ತಂದೆ ರಾಯಭಾಗ ಹಾಗೂ ಚಿಕ್ಕೋಡಿಯಲ್ಲಿ ನೃತ್ಯ ತರಬೇತಿ ಶಾಲೆಗಳನ್ನು ನಡೆಸುತ್ತಿದ್ದಾರೆ.ರಾಮು ದಂಪತಿಗಳಿಗೆ ಇರುವ ಇಬ್ಬರು ಮಕ್ಕಳ ಪೈಕಿ ವಿಹಾನ್ ಮೊದಲ ಮಗ ದಂಪತಿಗಳಿಗೆ ಇನ್ನೋರ್ವ ಮಗಳೂ ಸಹ ಇದ್ದಾಳೆ. ಯಾವಾಗ ಮಗನಿಗೆ ಮಾರಕ ಕಾಯಿಲೆ ಬ್ಲಡ್ ಕ್ಯಾನ್ಸರ್ ಎಂದು ಗೊತ್ತಾಯಿತೋ ತಂದೆ ತಾಯಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ.ಮಕ್ಕಳಿಗೆ ನೃತ್ಯಪಾಠ ಹೇಳಿಕೊಟ್ಟು ತುತ್ತಿನ ಜೋಳಿಗೆ ತುಂಬಿಸುತ್ತಿದ್ದ ಬಡ ಕುಟುಂಬ ಈಗ ಮಗನ ಆಸ್ಪತ್ರೆಯ ಬಿಲ್ ಕಟ್ಟಾಲಾಗದೆ ಪರದಾಡುವ ಪರಿಸ್ಥಿತಿಗೆ ಬಂದು ತಲುಪಿದೆ. ಸಧ್ಯ ದಾನಿಗಳ ಸಹಾಯದ ನಿರೀಕ್ಷೆಯಲ್ಲಿ ಕುಟುಂಬವಿದ್ದು ಸಹಾಯ ಮಾಡಲಿಚ್ಚಿಸುವವರು

ವಿಹಾನ್ ತಂದೆ ರಾಮಚಂದ್ರ ಚೌವ್ಹಾನ್ ಅವರ ಅಮೌಂಟ್ ನಂಬರ್
Ramchandra chavan
Canara bank Account number: 05082200257490
Ifsc code: CNRB0010508
Mob: 9535203046
ಸಹಾಯ ಮಾಡಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!