Headlines

ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ — ₹8.94 ಕೋಟಿ ಲಾಭ, 15% ಲಾಭಾಂಶ ಘೋಷಣೆ

Oplus_16908288

ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ — ₹8.94 ಕೋಟಿ ಲಾಭ, 15% ಲಾಭಾಂಶ ಘೋಷಣೆ

ಬೆಳಗಾವಿ, ಸೆ.13 (ಪ್ರತಿನಿಧಿ):
ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್, ಬೆಳಗಾವಿ ತನ್ನ 29ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರಿಗೆ ಸಂತಸದ ಸುದ್ದಿಯನ್ನು ನೀಡಿದೆ. 2024–25ನೇ ಸಾಲಿನಲ್ಲಿ ಬ್ಯಾಂಕ್ ಒಟ್ಟು ₹8.94 ಕೋಟಿ ಶುದ್ಧ ಲಾಭ ಗಳಿಸಿದ್ದು, 15% ಲಾಭಾಂಶವನ್ನು ಘೋಷಿಸಿದೆ.

Oplus_16908288

ನಗರದ ನೆಹರುನಗರದ ಕನ್ನಡಭವನದಲ್ಲಿ ಇಂದು ನಡೆದ ಸಭೆಯನ್ನು ಬ್ಯಾಂಕ್ ಅಧ್ಯಕ್ಷೆ ಡಾ. ಪ್ರೀತಿ ಕೆ. ದೋಡ್ಡವಾಡ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ರೂಪಾ ಜೆ. ಮುನವಳ್ಳಿ, ನಿರ್ದೇಶಕ ಮಂಡಳಿ ಸದಸ್ಯರು, ವೃತ್ತಿಪರ ನಿರ್ದೇಶಕರು, ಸ್ಥಳೀಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟನೆ ನಡೆಯಿತು. ನಂತರ ಸ್ಥಾಪಕ ನಿರ್ದೇಶಕಿ ಶ್ರೀಮತಿ ಶಾಂತಕ್ಕಾ ಕೆ. ಬಿಲ್ಲೂರವರ ಸ್ಮರಣೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Oplus_16908288

ವಾರ್ಷಿಕ ಪ್ರಗತಿ ವರದಿ ಮಂಡಿಸಿದ ಅಧ್ಯಕ್ಷೆ ಡಾ. ಪ್ರೀತಿ ದೋಡ್ಡವಾಡ ಅವರು

ಬ್ಯಾಂಕ್ ಠೇವಣಿ ₹402.78 ಕೋಟಿ,

ಸಾಲ ವಿತರಣೆ ₹252.79 ಕೋಟಿ,

ಶುದ್ಧ ಲಾಭ ₹8.94 ಕೋಟಿ
ಎಂದು ಘೋಷಿಸಿದರು.

ಅವರು, “ನಿರಂತರವಾಗಿ ನಾಲ್ಕು ವರ್ಷಗಳಿಂದ 15% ಲಾಭಾಂಶ ವಿತರಣೆ ನಡೆಯುತ್ತಿದೆ. ಸದಸ್ಯರ ವಿಶ್ವಾಸದಿಂದ ಬ್ಯಾಂಕ್ ವಹಿವಾಟು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ,” ಎಂದು ವಿವರಿಸಿದರು.

ಸಭೆಯಲ್ಲಿ ವಿವಿಧ ಅಜೆಂಡಾ ವಿಷಯಗಳನ್ನು ಮಂಡಿಸಲಾಗಿದ್ದು, ಅವುಗಳನ್ನು ಏಕಮತದಿಂದ ಅಂಗೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶ್ರೇಯಾಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಹಾಗೂ ಉತ್ತಮ ಸಾಧನೆ ಮಾಡಿದ ಶಾಖೆಗಳಿಗೆ ಸನ್ಮಾನ ಮಾಡಲಾಯಿತು.

ಅಂತಿಮವಾಗಿ ಉಪಾಧ್ಯಕ್ಷೆ ಶ್ರೀಮತಿ ರೂಪಾ ಜೆ. ಮುನವಳ್ಳಿ ಧನ್ಯವಾದ ಅರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!