ಟಿಳಕವಾಡಿ ಮೇಲ್ಸೆತುವೆ ವಿದ್ಯಾರ್ಥಿಗಳ ಭವಿಷ್ಯ, ದೇವಾಲಯಗಳ ಅಸ್ತಿತ್ವದ ಪ್ರಶ್ನೆ!

6 ಸಾವಿರ ವಿದ್ಯಾರ್ಥಿಗಳ ಸಂಚಾರಕ್ಕೆ ಕುತ್ತು!

ಪ್ರಾಚೀನ ಗಣೇಶ-ಹನುಮಾನ್ ದೇವಾಲಯಗಳ ಅಸ್ತಿತ್ವವೇ ಪ್ರಶ್ನಾರ್ಹ

ಅಭಯ ಪಾಟೀಲ–ಸೋಮಣ್ಣರ ಮೇಲೆ ಹೆಚ್ಚಿದ ಜವಾಬ್ದಾರಿ

ಎಲಿವೇಟೆಡ್ ಟ್ರ್ಯಾಕ್ ಪರ್ಯಾಯಕ್ಕೆ ನಾಗರಿಕರ ಒತ್ತಾಯ

ಇ ಬೆಳಗಾವಿ ವಿಶೇಷ
ಬೆಳಗಾವಿ.
ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕೆಲವೊಂದು ಯೋಜನೆಗಳು ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸುತ್ತಿವೆ ಎನ್ನುವ ಆರೋಪ ಮತ್ತೊಮ್ಮೆ ಸಾಬೀತಾಗಿದೆ.

ನಗರದ ಟಿಳಕವಾಡಿಯ ದ್ವಿತೀಯ ರೈಲು ಗೇಟ್ (ಎಲ್ಸಿ 382) ಬಳಿ ನಿರ್ಮಾಣ ಹಂತದಲ್ಲಿರುವ ರೈಲು ಮೇಲ್ಸೇತುವೆ ಈಗ ನಗರದ ರಾಜಕೀಯ-ಸಾಮಾಜಿಕ ವಲಯದಲ್ಲಿ ಬಿಸಿ ಬಿಸಿ ಚಚರ್ೆಗೆ ಕಾರಣವಾಗಿದೆ.

6 ಸಾವಿರ ವಿದ್ಯಾರ್ಥಿಗಳ ಬದುಕು ಸಂಕಟದಲ್ಲಿ!
ROB ನಿಂದ ಏಳು ಶಾಲೆಗಳು, ಹತ್ತು ನರ್ಸರಿಗಳ 6,000 ಕ್ಕೂ ಹೆಚ್ಚು ಮಕ್ಕಳು ಪ್ರತಿದಿನ ಜೀವದ ಹಂಗುತೊರೆದು ಸಂಚಾರ ಮಾಡಬೇಕಾದ ಪರಿಸ್ಥಿತಿ ಬರಲಿದೆ.

“ಮಕ್ಕಳು ಸುರಕ್ಷಿತವಾಗಿ ಶಾಲೆಗೆ ಸೇರುತ್ತಾರಾ? ಆರ್ಓಬಿ ಬಂದರೆ ಸಂಚಾರವೇ ದುರಂತ!” ಎಂದು ತಾಯಂದಿರು ಕಳವಳ ವ್ಯಕ್ತಪಡಿಸಿದ್ದಾರೆ.

ದೇವಾಲಯಗಳ ಗೌರವವೇ ಕುಸಿತ?
ಟಿಳಕವಾಡಿ ಪ್ರದೇಶದಲ್ಲಿರುವ ಪ್ರಾಚೀನ ಗಣೇಶ ಹಾಗೂ ಹನುಮಾನ್ ದೇವಾಲಯಗಳು ROB ಯಿಂದ ಸಂಕಷ್ಟಕ್ಕೆ ಸಿಲುಕುತ್ತಿವೆ. ಹೊಗೆ, ಶಬ್ದ ಮಾಲಿನ್ಯದ ನಡುವೆ ದೇವರ ದರ್ಶನ ಹೇಗೆ ಸಾಧ್ಯ ಎಂದು ಭಕ್ತರು ಪ್ರಶ್ನೆ ಮಾಡುತ್ತಿದ್ದಾರೆ.
ಮಸೀದಿ- ಚರ್ಚ್ ಗಳಿಗೆ ಸರ್ಕಾರ ಯೋಜನೆ ಬದಲಿಸುತ್ತದೆ. ಹೀಗಿರುವಾಗ ಹಿಂದೂ ದೇವಾಲಯಗಳ ಸಂರಕ್ಷಣೆಗೆ ಯಾಕಿಷ್ಟು ಮೌನ ಎನ್ನುವ ಬಹುದೊಡ್ಡ ಪ್ರಶ್ನೆ ಜನರದ್ದಾಗಿದೆ.”

ಇಲ್ಲಿ. ROB ಯಿಂದ ಕಪಿಲೇಶ್ವರ ದೇವಾಲಯ ಗಾಂಭೀರ್ಯ ಕಳೆದುಕೊಂಡಿರುವುದು ಜೀವಂತ ಉದಾಹರಣೆ. ಟಿಳಕವಾಡಿ ದೇವಾಲಯಗಳಿಗೂ ಇದೇ ಸ್ಥಿತಿ ಎದುರಾಗುತ್ತದೆ ಎನ್ನುವ ಆತಂಕ ಎಲ್ಲರನ್ನು ಕಾಡುತ್ತಿದೆ.

ROB ಯಿಂದ ಜನರಿಗೆ ಆಗುತ್ತಿರುವ ಕಿರಿಕಿರಿ ಹೀಗಿದೆ ನೋಡಿ

ಸೋಮಣ್ಣ- ಅಭಯ ಪಾಟೀಲರ ಹೊಣೆಗಾರಿಕೆ!
ಸೆ.15 ರಂದು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅನಗೋಳ ಗೇಟ್ ಶಂಕುಸ್ಥಾಪನೆಗೆ ಬರುವಾಗ, ನಿವಾಸಿಗಳು ಈ ROB ವಿರುದ್ಧ ಮನವಿ ಸಲ್ಲಿಸಲಿದ್ದಾರೆ.
ಈಗಾಗಲೇ ಸಚಿವರ ಗಮನಕ್ಕೂ ಅಲ್ಲಿನ ನಿವಾಸಿಗಳು ಇದನ್ನು ತಂದಿದ್ದಾರೆ.

ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅಷ್ಟೇ ಅಲ್ಲ ಪ್ರಧಾನಿಗೂ ಪತ್ರ ರವಾನಿಸಿದ್ದಾರೆ.
ಸ್ಥಳೀಯ ಶಾಸಕ ಅಭಯ ಪಾಟೀಲರನ್ನು ಖುದ್ದು ಭೆಟ್ಟಿ ಮಾಡಿ ಸಮಸ್ಯೆಯನ್ನು ತಿಳಿಸಿದ್ದಾರೆ, ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ.

ಆದರೆ ನಾಳೆ ದಿ, 15 ರಂದು ಬೆಳಗಾವಿಗೆ ಆಗಮಿಸುವ ಸಚಿವ ಸೋಮಣ್ಣ ಅವರ ಮುಂದೆ ಸ್ಪಷ್ಟ ಮಾತುಗಳಲ್ಲಿ ಇಲ್ಲಿ ಆರ್ಓಬಿ ಬೇಡ ಅದಕ್ಕೆ ಪರ್ಯಾಯವಾಗಿ ಜನರ ಬೇಡಿಕೆಯಂತೆ ಮಾಡಿ ಎಂದು MLA ABHAY PATIL ರು ಹೇಳಬೇಕಾಗಿದೆ, ಅದು ಆದರೆ ಮಾತ್ರ ಅಲ್ಲಿನ 6 ಸಾವಿರ ವಿದ್ಯಾರ್ಥಿಗಳು ಯಾವುದೇ ಜೀವದ ಹಂಗಿಲ್ಲದೆ ಶಾಲೆಗೆ ಹೋಗಬಹುದು, ಅಷ್ಟೇ ಅಲ್ಲ ಹಿಂದೂ ದೇವಾಲಯಗಳಿಗೂ ಕೂಡ ಯಾವುದೇ ರೀತಿಯ ಧಕ್ಕೆ ಬರುವುದಿಲ್ಲ.

ಬೇಕಿರುವುದು ಎಲಿವೇಟೆಡ್ ಟ್ರ್ಯಾಕ್!
ಎಲ್ಸಿ-381 ಮತ್ತು ಎಲ್ಸಿ-383 ROB ಗಳು ಈಗಾಗಲೇ ಸಂಚಾರ ನಿಭಾಯಿಸುತ್ತಿರುವುದರಿಂದ ಹೊಸ ಖಔಃ ಅಗತ್ಯವಿಲ್ಲ. ತಜ್ಞರ ಅಭಿಪ್ರಾಯ:
“9 ಕಿ.ಮೀ ಎಲಿವೇಟೆಡ್ ರೈಲು ಟ್ರ್ಯಾಕ್ ಮಾತ್ರವೇ ದೀರ್ಘಕಾಲಿಕ ಪರಿಹಾರ.”
ಕುರುಕ್ಷೇತ್ರ, ಕಾನ್ಪುರ, ದೆಹಲಿ-ಮೀರಟ್ ನಗರಗಳಲ್ಲಿ ಈ ಮಾದರಿ ಯಶಸ್ವಿ.
ಆರ್ಥಿಕ ನಷ್ಟ ಅನಿವಾರ್ಯ
ROB ನಿಂದ ವ್ಯಾಪಾರಸ್ಥರ ಅಂಗಡಿಗಳು ಮುಚ್ಚುವ ಭೀತಿ. ಅದರ ಕೆಳಭಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ಸಾಧ್ಯತೆಗಳಿವೆ ಎನ್ನುವ ಮಾತನ್ನು‌ ನಿವಾಸಿಗಳು ಹೇಳಿದ್ದಾರೆ.
ಬೆಳಗಾವಿ ಸ್ಮಾರ್ಟ ಸಿಟಿಯಾಗಬೇಕಾ ಅಥವಾ ಕಲುಷಿತ ನಗರವಾಗಬೇಕಾ ಎನ್ನುವುದನ್ನು ಸರ್ಕಾರ ತೀರ್ಮಾನಿಸಬೇಕಿದೆ.

Leave a Reply

Your email address will not be published. Required fields are marked *

error: Content is protected !!