Headlines

ಶಾಸಕರೆಂದ್ರೆ ಹೀಗಿರಬೇಕು…!

ಅಭಯ ಪಾಟೀಲರ ಜನಪರ ಕಾರ್ಯ ವೈಖರಿಯ ಜೀವಂತ ಉದಾಹರಣೆ

ಬೆಳಗಾವಿ

“ಜನರ ಸಮಸ್ಯೆ ನನ್ನ ಸಮಸ್ಯೆ” — ಈ ಮಾತುಗಳನ್ನು ಕೇವಲ ಘೋಷಣೆ ಮಟ್ಟಕ್ಕೆ ಸೀಮಿತಗೊಳಿಸದೆ, ಪ್ರತಿದಿನದ ಜೀವನದಲ್ಲಿ ಕಾರ್ಯರೂಪಕ್ಕೆ ತಂದರೆ ಅದು ಹೇಗಿರುತ್ತದೆ? ಇದರ ಮಾದರಿಯೇ ಶಾಸಕ ಅಭಯ ಪಾಟೀಲರು.

ಬೆಳಗಿನ ಕರೆ, ತಕ್ಷಣದ ಪ್ರತಿಕ್ರಿಯೆ*

ಬೆಳಗ್ಗೆ 5 ಕ್ಕೆ ಒಂದೇ ಹಿಂದೆ ಒಂದೇ ಫೋನ್ ಕರೆಗಳು—
“ಸರ್, ಗ್ಯಾಸ್ ಬರ್ತಿಲ್ಲ. ಮಕ್ಕಳಿಗೆ ಊಟ ಮಾಡಬೇಕು, ಶಾಲೆಗೆ ಕಳಿಸಬೇಕು. ದಯವಿಟ್ಟು ನೋಡಿ…”
ಯಾವ ಸಾಮಾನ್ಯ ನಾಯಕನಾದರೂ ಮುಂದಿನ ದಿನ ಕಚೇರಿಯಲ್ಲಿ ವಿಚಾರಿಸುತ್ತೇನೆ ಎಂದು ಹೇಳಬಹುದಿತ್ತು. ಆದರೆ ಪಾಟೀಲರು ತಕ್ಷಣವೇ ಎದ್ದು, ಬೆಳಿಗ್ಗೆ 5 ಕ್ಕೆ ಮೆಗಾ ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಿದರು.

*ಘಟನಾ ಸ್ಥಳದಲ್ಲಿ ಶಾಸಕರ ಹಾಜರಿ*

ಎಲ್ ಅಂಡ್ ಟಿ ಕಂಪನಿಯವರು ಪೈಪ್ ಅಳವಡಿಸುವ ವೇಳೆ ಆರ್‌ಟಿಒ ವೃತ್ತದ ಬಳಿ ಗ್ಯಾಸ್ ಪೈಪ್ ಹಾನಿಗೊಳಗಾಗಿರುವುದು ಪತ್ತೆಯಾದಾಗ, ಪಾಟೀಲರು ತಕ್ಷಣ ಸ್ಥಳಕ್ಕೆ ಧಾವಿಸಿದರು. ತಾಂತ್ರಿಕ ಸಿಬ್ಬಂದಿಯೊಂದಿಗೆ ಮೂರು ಗಂಟೆಗಳವರೆಗೂ ನಿಂತು ಕೆಲಸ ಮುಗಿಸುವ ತನಕ ಹಾಜರಿದ್ದರು.

ನಾವು ಮತ್ತೆ ಅಡಿಗೆ ಮಾಡಬಹುದು, ಧನ್ಯವಾದಗಳು ಸರ್” ಎಂದು ಮನೆಮಂದಿ ಕರೆ ಮಾಡಿದ ಕ್ಷಣವೇ ಶಾಸಕ ಅಭಯ ಪಾಟೀಲರು  ಅಲ್ಲಿಂದ ತೆರಳಿದರು.

*ಜನಪ್ರಿಯತೆಗೆ ಕಾರಣವಾದ ಶೈಲಿ*

ಸಣ್ಣ ಸಮಸ್ಯೆಯನ್ನೂ ನಿರ್ಲಕ್ಷಿಸದೆ ತಕ್ಷಣ ಸ್ಪಂದಿಸುವ ಗುಣ.

ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಬಗೆಹರಿಸುವ ನಿರ್ಧಾರ ಶಕ್ತಿ.

ಹೊಣೆಗಾರಿಕೆ ಸಮರ್ಥವಾಗಿ‌ ನಿಭಾಯಿಸುವುದು

ಜನಸೇವೆಯ ದಾರಿಯಲ್ಲಿರುವ ಅಭಯ ಪಾಟೀಲ

ಬೆಳಗಿನ ಕತ್ತಲಲ್ಲಿ ಕೇವಲ ಗೃಹಿಣಿಯರ ಅಡಿಗೆಗೆ ಅಡ್ಡಿಯಾದ ಸಮಸ್ಯೆ ಎಂದು ತಿರಸ್ಕರಿಸಬಹುದಾಗಿದ್ದ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿ, ಅದನ್ನು ತನ್ನ ಸಮಸ್ಯೆಯಂತೆ ಬಗೆಹರಿಸಿದ ಪಾಟೀಲರ ಹಾದಿ, ರಾಜಕೀಯದ ಬೇರೊಂದು ಮುಖವನ್ನೇ ತೋರಿಸುತ್ತದೆ.

ನಾಯಕನ ಜವಾಬ್ದಾರಿ ಎಂದರೆ ಕೇವಲ ವಿಧಾನಸಭೆಯಲ್ಲಿ ಪ್ರಶ್ನೆ ಕೇಳುವುದಲ್ಲ, ಬಜೆಟ್‌ನಲ್ಲಿ ಅನುದಾನ ತರಿಸುವುದಲ್ಲ, ಆದರೆ ಜನರಿಗೆ ತಕ್ಷಣ ತಟ್ಟುವ ತೊಂದರೆಯನ್ನು ತಕ್ಷಣ ಪರಿಹರಿಸುವ ಶಕ್ತಿಯೇ ನಿಜವಾದ ನಾಯಕತ್ವ.

ಬೆಳಗಾವಿ ದಕ್ಷಿಣದ ಅನೇಕ ಯೋಜನೆಗಳ ಹಿಂದೆ ಪಾಟೀಲರ ಪರಿಶ್ರಮವಿದೆ. . ಆದರೆ ಸಾಮಾನ್ಯ ಮನೆಮಂದಿಯ ಅಡುಗೆ ಗ್ಯಾಸಿನ ವ್ಯತ್ಯಯದಂತಹ “ಸಣ್ಣ” ಸಮಸ್ಯೆಗೂ ಸಮಾನ ಮಹತ್ವ ನೀಡುವುದು ಅವರ ಕಾರ್ಯಪದ್ಧತಿ.

ಇದರ ಪರಿಣಾಮವಾಗಿ, ನಗರದಲ್ಲಿ “ಅಭಯ ಪಾಟೀಲರಿಗೆ ಕರೆ ಮಾಡಿದರೆ ಸಮಸ್ಯೆ ಬಗೆಹರಿಯದೇ ಇರುವುದೇ ಇಲ್ಲ” ಎಂಬ ವಿಶ್ವಾಸ ಮನೆಮಂದಿಯೊಳಗೆ ಬೆಳೆದಿದೆ.

Leave a Reply

Your email address will not be published. Required fields are marked *

error: Content is protected !!