ಹಿಂದೂ ಬ್ರಾಹ್ಮಣ ಎಂದು ಮಾತ್ರ ನಮೂದಿಸಿ.
ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಮನವಿ
ಬೆಳಗಾವಿ,
ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಗಣತಿಯಲ್ಲಿ ಎಲ್ಲಾ ಬ್ರಾಹ್ಮಣರು ‘ಹಿಂದೂ ಬ್ರಾಹ್ಮಣ’ ಎಂದು ನಮೂದಿಸಬೇಕೆಂದು ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಮನವಿ ಮಾಡಿದೆ.
ಈ ಕುರಿತು ಪ್ರಕಟನೆ ಹೊರಡಿಸಿದ ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರೆ ಅವರು, ಧರ್ಮ ಕಾಲಂ ದಲ್ಲಿ ಹಿಂದೂ ಮತ್ತು ಜಾತಿ ಕಾಲಂ ದಲ್ಲಿ ಕೇವಲ ಬ್ರಾಹ್ಮಣ ಎಂದು ನಮೂದಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಹಿಂದೂ ಬ್ರಾಹ್ಮಣರು ಈ ದೇಶದ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ವಿದ್ಯಾ ಕ್ಷೇತ್ರಗಳಲ್ಲಿ ಶತಮಾನಗಳಿಂದ ಅಪಾರ ಕೊಡುಗೆ ನೀಡಿರುವ ಸಮುದಾಯ.

ಆದ್ದರಿಂದ ಗಣತಿಯಲ್ಲಿ ನಮ್ಮ ಸಮುದಾಯದ ಗುರುತು ಸರಿಯಾಗಿ ದಾಖಲಿಸದೇ ಇದ್ದರೆ ಸಮುದಾಯ. ತೊಂದರೆಗೆ ಒಳಗಾಗಬಹುದು ಎಂದು ಅವರು ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದ್ದರಿಂದ ಗಣತಿ ದಾಖಲೆಗಳಲ್ಲಿ “ಹಿಂದೂ ಬ್ರಾಹ್ಮಣರು” ಎಂದು ನಮೂದಿಸಬೇಕು. .
ಅಧಿಕಾರಿಗಳು ಯಾವುದೇ ರೀತಿಯ ಗೊಂದಲ ಮೂಡಿಸುವಂತೆ “ಬ್ರಾಹ್ಮಣ” ಅಥವಾ “ಹಿಂದೂ” ಪ್ರತ್ಯೇಕವಾಗಿ ದಾಖಲಿಸಬಾರದು ಎಂದು ಭಂಡಾರೆ ಮನವಿ ಮಾಡಿದ್ದಾರೆ.