ಬೆಳಗಾವಿ ಹಾಲು ಒಕ್ಕೂಟದ ಉತ್ಪನ್ನಗಳ ಬೆಲೆ ಇಳಿಕೆ
ಬೆಳಗಾವಿ:
ಹಾಲು ಉತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಮನೆಮಾತಿನ ಬಜೆಟ್ ಮೇಲೆ ಬಿದ್ದಿದ್ದ ಒತ್ತಡ ಈಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಕೇಂದ್ರ ಸರ್ಕಾರ ಹಾಲು ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ, ಬೆಳಗಾವಿ ಹಾಲು ಒಕ್ಕೂಟವು 30 ಕ್ಕೂ ಹೆಚ್ವು ಉತ್ಪನ್ನಗಳ ದರ ಇಳಿಕೆ ಘೋಷಿಸಿದೆ.

ಹೊಸ ದರಗಳು ಸೆಪ್ಟೆಂಬರ್ 22ರಿಂದಲೇ ಜಾರಿಗೆ ಬಂದಿದ್ದು, ರಾಜ್ಯಾದ್ಯಂತ ಗ್ರಾಹಕರಿಗೆ ನೇರ ಲಾಭ ದೊರೆಯುತ್ತಿದೆ.
ಪ್ರಮುಖ ಉತ್ಪನ್ನಗಳ ಹಳೆಯ–ಹೊಸ ದರ
ತುಪ್ಪ (1 ಕೆ.ಜಿ.): ₹650 → ₹610
ಚೀಸ್ (1 ಕೆ.ಜಿ.): ₹530 → ₹497
ಪನೀರ್ (1 ಕೆ.ಜಿ.): ₹425 → ₹408
ಬಟರ್ (500 ಗ್ರಾಂ): ₹305 → ₹286
ಐಸ್‌ಕ್ರೀಮ್ (100 ಮಿ.ಲಿ.): ₹35 → ₹31
ಕ್ರೀಮ್ (500 ಮಿ.ಲಿ.): ₹645 → ₹574
ಜಿಎಸ್‌ಟಿ ಇಳಿಕೆಯ ಹಿನ್ನಲೆ
ತುಪ್ಪ, ಚೀಸ್, ಚಾಕೊಲೇಟ್, ಕುಡಕು ತಿನಿಸುಗಳ ಮೇಲಿನ ಜಿಎಸ್‌ಟಿ ಶೇ.12ರಿಂದ ಶೇ.5ಕ್ಕೆ ಇಳಿಕೆ.
ಕ್ರೀಮ್, ಚಾಕೊಲೇಟ್ ಐಸ್‌ಕ್ರೀಮ್, ಇನ್ಸ್ಟಂಟ್ ಮಿಕ್ಸ್ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಶೇ.18ರಿಂದ ಶೇ.5ಕ್ಕೆ ಇಳಿಕೆ.
ಪನೀರ್, ಮಜ್ಜಿಗೆ, ಯಹೆಮಿಟಿ ಹಾಲು ಉತ್ಪನ್ನಗಳ ಮೇಲಂತೂ ಜಿಎಸ್‌ಟಿ ಶೇ.5ರಿಂದ ನೇರ ಶೂನ್ಯಕ್ಕೆ ಇಳಿಕೆ.
ನೇರ ಪ್ರಯೋಜನ
ಬೆಲೆ ಇಳಿಕೆಯಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ನೇರ ಪ್ರಯೋಜನವಾಗಲಿದೆ. ದಿನನಿತ್ಯದ ಬದುಕಿನಲ್ಲಿ ಹೆಚ್ಚು ಬಳಸುವ ಹಾಲು ಉತ್ಪನ್ನಗಳು ಈಗ ಅಗ್ಗದಲ್ಲಿ ದೊರೆಯುವುದರಿಂದ ಮನೆ ಬಜೆಟ್‌ಗೆ ಶಾಂತಿ.
ಇನ್ನೊಂದೆಡೆ, ಅಗ್ಗದ ದರದಿಂದ ಬೇಡಿಕೆ ಹೆಚ್ಚುವ ಮೂಲಕ ಮಾರಾಟ ಪ್ರಮಾಣ ಏರಿಕೆ ಕಾಣಲಿದೆ. ಇದರಿಂದ ಹಾಲು ಉತ್ಪಾದಕರಿಗೂ ಪರೋಕ್ಷ ಲಾಭ ದೊರಕಲಿದೆ.
ರೈತರಿಗೆ- ಗ್ರಾಹಕರಿಗೂ ಲಾಭ
“ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಕೈಗೊಂಡ ಜಿಎಸ್‌ಟಿ ಇಳಿಕೆ ಮಹತ್ವದ ಕ್ರಮ. ಬೆಳಗಾವಿ ಹಾಲು ಒಕ್ಕೂಟದ ಉತ್ಪನ್ನಗಳು ಈಗ ಹೆಚ್ಚು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಾಗುತ್ತವೆ. ರೈತರು–ಗ್ರಾಹಕರಿಬ್ಬರಿಗೂ ಇದು ಲಾಭದಾಯಕ, ”

ಬಾಲಚಂದ್ರ ಜಾರಕಿಹೊಳಿ.
ಅಧ್ಯಕ್ಷರು. ಹಾಲು ಒಕ್ಕೂಟ, ಬೆಳಗಾವಿ.