ರಮೇಶ ಕತ್ತಿ ವಿರುದ್ಧ ಗುಡುಗಿದ ಸಚಿವ ಸತೀಶ
ಹುಕ್ಕೇರಿ,
ಈ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಎಂಬತ ಕ್ರಿಕೆಟ್ ಆಟದಲ್ಲಿ ಬ್ಯಾಟ್ಸ್ಮನ್, ಬೌಲರ್, ಕೀಪರ್, ಅಂಪೈರ್. ಎಲ್ಲ ಪಾತ್ರವನ್ನೂ ಒಬ್ಬನೇ ನಿಭಾಯಿಸುತ್ತಿದ್ದಾನೆ.

ಇದು ಸಹಕಾರವೇ? ಕುಟುಂಬ ರಾಜಕಾರಣವೇ ಎಂದು ರಮೇಶ ಕತ್ತಿ ಕುಟುಂಬದ ಕಾರ್ಯವೈಖರಿಯ ವಿರುದ್ಧ ಸಚಿವ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಸೆ. 28ರಂದು ನಡೆಯಲಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಹಿನ್ನೆಲೆಯಲ್ಲಿ ಪಾಶ್ಚಾಪೂರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು,

ಪ್ರತಿಯೊಬ್ಬ ಕಾರ್ಯಕರ್ತನು ಮನೆ ಮನೆ ತಲುಪಬೇಕು. ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಿ. ಅಪ್ಪಣಗೌಡ ಪಾಟೀಲ್ ಪೆನಲ್ ಗೆಲುವು ಖಚಿತಪಡಿಸಬೇಕು. ಇದು ಸಹಕಾರ ಕ್ಷೇತ್ರದ ಭವಿಷ್ಯ ನಿರ್ಧರಿಸುವ ಹೋರಾಟ, ಎಂದರು..
ಈ ಚುನಾವಣೆಯಲ್ಲಿ ಸ್ಥಳೀಯ ಮುಖಂಡರೇ ಸ್ಪರ್ಧಿಸುತ್ತಿದ್ದಾರೆ. ಹೊರಗಿನವರು, ಹೊರಗಿನವರು ಎನ್ನುವ ಆರೋಪ ಸಂಪೂರ್ಣ ತಪ್ಪು. ಜನರು ಕುಟುಂಬ ರಾಜಕಾರಣದಿಂದ ಬೇಸತ್ತು ನಮ್ಮತ್ತ ಬಂದಿದ್ದಾರೆ, ಎಂದರು.
ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿದರು