
ರೇಷ್ಮಾ ತಕ್ಷಣ ಎತ್ತಂಗಡಿಗೆ ಬಿಗಿಪಟ್ಟು
ಉಪ ಆಯುಕ್ತರ ವರ್ಗಾವಣೆಗೆಪಾಲಿಕೆ ನಗರಸೇವಕರ ಒತ್ತಾಯ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟಿ ಅವರನ್ನು ತಕ್ಷಣವೇ ಬೇರೆಡೆ ನಿಯುಕ್ತಿ ಮಾಡುವಂತೆ ನಗರಸೇವಕರು ಒತ್ತಾಯಿಸಿದ್ದಾರೆ.ಈ ಬಗ್ಗೆ ಮೇಯರ್ ಮಂಗೇಶ ಪವಾರ ಕೊಠಡಿಯಲ್ಲಿ ಸಭೆ ನಡೆಸಿದ ಬಿಜೆಪಿ ನಗರಸೇವಕರು ಪಾಲಿಕೆ ಆಯುಕ್ತರ ಮೂಲಕ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ರವಾನಿಸಿದ್ದಾರೆ. ಕಳೆದ ಸೆಪ್ಟೆಂಬರ್ 26 ರಂದು ನಡೆದ ಪರಿಷತ್ ಸಭೆಯಲ್ಲಿ ಗೊತ್ತುವಳಿ ಸಂಖ್ಯೆ 266 ಅಡಿಯಲ್ಲಿ ಕಂದಾಯ ಉಪ ಆಯುಕ್ತರ ಕುರಿತಂತೆ ಠರಾವ್ ನ್ನು ತೆಗೆದುಕೊಳ್ಳಲಾಗಿತ್ತು,…