Headlines

ಮರಾಠಿ ದಾಖಲೆ ಕೇಳಿದವರಿಗೆ ನೋಟೀಸ್..!

ಬೆಳಗಾವಿ ಮಹಾನಗರ ಪಾಲಿಕೆಮರಾಠಿ ದಾಖಲೆ ಕೇಳಿದವರಿಗೆ ನೋಟೀಸ್..!ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮರಾಠಿ ದಾಖಲೆ ಕೇಳಿದ ನಗರಸೇವಕರಿಗೆ ನೋಟೀಸ್ ಜಾರಿಯಾಗಿದೆ.ಕನ್ನಡ ಪರ ಸಂಘಟನೆಗಳು ಕೊಟ್ಟ ದೂರಿನನ್ವಯ ಅಪರ ಜಿಲ್ಲಾಧಿಕಾರಿಗಳು ಈ ನೋಟೀಸ್ನ್ನು ನೀಡಿದ್ದಾರೆ. ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಎಂಎನ್ಎಸ್ ಸದಸ್ಯ ರವಿ ಸಾಳುಂಕೆ ಸೇರಿದಂತೆ ಮೂರು ಜನರ ಮರಾಠಿಯಲ್ಲಿ ದಾಖಲೆ ಕೊಡಬೇಕು ಎಂದು ವಾದಮಾಡಿ ಗೊಂದಲ ಸೃಷ್ಟಿ ಮಾಡಿದ್ದರು.ಇದನ್ನು ಗಂಭೀರವಾಗಿ ಪರಿಗಣಿಸಿದ ಕನ್ನಡ ಪರ ಸಂಘಟನೆಗಳು ಅವರ ಸದಸ್ಯತ್ವ ರದ್ದು ಮಾಡಬೇಕೆಂದು…

Read More

ಗ್ರಹಣದ ನಡುವೆಯೇ ಗಣೇಶ ವಿಸರ್ಜನೆ ಸಂಭ್ರಮ

ಬೆಳಗಾವಿ, ಸೆನಗರದ ಸಡಗರ–ಸಂಭ್ರಮಕ್ಕೆ ಚಂದ್ರಗ್ರಹಣವೂ ತಡೆದಿಲ್ಲ. ನಿನ್ನೆ (ಸೆ. 6) ಸಂಜೆ 5 ಗಂಟೆಗೆ ಆರಂಭವಾದ ಗಣೇಶ ವಿಸರ್ಜನೆ ಮೆರವಣಿಗೆ ಇಂದಿಗೂ ಮುಂದುವರಿಯುತ್ತಿದ್ದು, ನಗರದ ಬೀದಿಗಳು ಭಕ್ತಿ-ಭಾವನೆಯಿಂದ ನಾದಮಯವಾಗಿವೆ. ಮೆರವಣಿಗೆ ವೈಭವ ನಗರದ ಪ್ರಮುಖ ರಸ್ತೆಗಳಲ್ಲಿ ಗಣೇಶ ಭಕ್ತರ ಹರ್ಷೋದ್ಗಾರ, ಡಿಜೆ ನಾದ, ತಾಳ-ಮದ್ದಳೆ ಸದ್ದು, ಭಜನಾ–ಕೀರ್ತನೆಗಳ ಸೊಗಸು ಒಟ್ಟಾಗಿ ಸಂಭ್ರಮದ ಚಿತ್ರಣ ಮೂಡಿಸಿದೆ. ಅನೇಕ ಮೂರ್ತಿಗಳು ಹೂಮಾಲೆಗಳಿಂದ, ವಿದ್ಯುತ್ ಬೆಳಕಿನಿಂದ ಅಲಂಕರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಸಾವಿರಾರು ಮಂದಿ ವೀಕ್ಷಕರಾಗಿ ಸೇರುತ್ತಿದ್ದಾರೆ. ಇನ್ನೂ 24 ಮೂರ್ತಿಗಳ ವಿಸರ್ಜನೆ…

Read More

ಖಾಕಿ ನಿರ್ಲಕ್ಷ್ಯದಲ್ಲಿ ‘ಸತ್ಯ’ದ ಸಾವು!?

ಖಾನಾಪುರ ಪೊಲೀಸರ ನಿರ್ಲಕ್ಷ್ಯ – ಬಡ ಕಾರ್ಮಿಕನ ಜೀವ ಬಲಿ🔴 ದೂರು ಕೊಡದಂತೆ ಒತ್ತಾಯಿಸಿದ ಖಾಕಿ?🔴 ಆಸ್ಪತ್ರೆಗಳ ಮೌನ – ಕಡ್ಡಾಯ ಮಾಹಿತಿ ಬಚ್ಚಿಟ್ಟಾರು?🔴 ಶವದ ಅಸ್ಪಷ್ಟ ಹಾದಿ – ಸತ್ಯಕ್ಕೆ ದಾರಿ ಎಲ್ಲಿದೆ?🔴 ಭಯಭೀತ ಕುಟುಂಬ – ನ್ಯಾಯಕ್ಕೆ ಯಾರ ನೆರವು?🔴 ‘ದರ್ಶನ-ರೇಣುಕಾಸ್ವಾಮಿ ಪ್ರಕರಣ’ ನೆನಪಿಸುವ ಜನರ ಕೂಗು🔴 ಖಾಕಿಯ ವಿರುದ್ಧ ಶಿಸ್ತು ಕ್ರಮವೇ ಸಾರ್ವಜನಿಕರ ಬೇಡಿಕೆ E belagavi special ಬೆಳಗಾವಿರಾಜ್ಯದ ಕಾನೂನು ಸುವ್ಯವಸ್ಥೆ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂಥ ಕಳಂಕಿತ ಘಟನೆಯೊಂದು ಬೆಳಗಾವಿ…

Read More

ಬೆಳಗಾವಿಯಲ್ಲಿ ಗಣೇಶನಿಗೆ ಅದ್ಧೂರಿ ವಿದಾಯ!

ಮಂಗಳಮೂರ್ತಿ ಮೋರಯಾ ಘೋಷಣೆಗಳ ನಡುವೆ ಸಂಭ್ರಮದ ಮೆರವಣಿಗೆ ಬೆಳಗಾವಿ:ನಗರದ ಪ್ರತಿಯೊಂದು ಬೀದಿ-ತಿರುವಿನಲ್ಲೂ “ಗಣಪತಿ ಬಪ್ಪಾ ಮೋರಯಾ… ಮಂಗಳಮೂರ್ತಿ ಮೋರಯಾ!” ಎಂಬ ಘೋಷಣೆಗಳು ಮೊಳಗಿದವು. ಶನಿವಾರ ಅನಂತ ಚತುರ್ದಶಿಯಂದು ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಬೆಳಗಾವಿ ಸಂಪೂರ್ಣ ಭಕ್ತಿರಸ-ಸಂಗೀತ-ನೃತ್ಯದ ಸಂಭ್ರಮದಲ್ಲಿ ತೇಲಿತು. ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಲಾದ ಸುತ್ತ 400ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳು ವೈಭವದ ಮೆರವಣಿಗೆಯೊಂದಿಗೆ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆಯಾದವು. ಅದ್ದೂರಿ ಚಾಲನೆ ಕಿರ್ಲೋಸ್ಕರ್ ರಸ್ತೆಯ ಕಾವೇರಿ ಕೋಲ್‌ಗಿಂಕ್ ಬಳಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಮೇಯರ್ ಮಂಗೇಶ…

Read More

ಗಣಪತಿ ಬಪ್ಪ‌ ಮೋರಯಾ…!

ಬೆಳಗಾವಿ ಮೇಲೆ ಖಾಕಿ ಹದ್ದಿನ ಕಣ್ಣು. ಗಣೇಶೋತ್ಸವ ವಿಸರ್ಜನಾ ಮೆರವಣಿಗೆ.ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ- ಶುಭ ಬಿ. ಆಯುಕ್ತರು. ಬೆಳಗಾವಿ ಮಹಾನಗರ ಪಾಲಿಕೆ. ಕಿಡಿಗೇಡಿತನ ಮಾಡಿದರೆ ಕಠಿಣ ಕ್ರಮ. ಭೂಷಣ ಗುಲಾಬರಾವ್ ಬೋರಸೆ.ಪೊಲೀಸ್ ಆಯುಕ್ತರು. ಬೆಳಗಾವಿ:ಹನ್ನೊಂದು ದಿನಗಳ ಸಂಭ್ರಮದ ಶ್ರೀ ಗಣೇಶೋತ್ಸವ ನಾಳೆ (ಸೆಪ್ಟೆಂಬರ್ 6) ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ನಗರವು ಹಬ್ಬದ ಕಲರವ, ಭಕ್ತಿ, ಮೆರವಣಿಗೆ ರೂಪಕ ವಾಹನಗಳು ಮತ್ತು ಭಕ್ತಿ ಭಾವದಿಂದ ತುಂಬಿದ ಗಣೇಶ ಮೂರ್ತಿಗಳೊಂದಿಗೆ ಜೀವಂತವಾಗಿದೆ. ವಿಸರ್ಜನಾ ಮೆರವಣಿಗೆ ಮಾರ್ಗ ಬದಲಾವಣೆ, ಡಿಜೆ…

Read More

ಖಾನಾಪುರದಲ್ಲಿ ಅಮಾನವೀಯ ಕೊಲೆ: ಈ‌ ಸಾವು ನ್ಯಾಯವೇ?

ದರ್ಶನ ಗ್ಯಾಂಗ್ ತರಹ ಚಿತ್ರಹಿಂಸೆ ನೀಡಿದ್ದರು. ಹೊಟೇಲನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ .ಹತ್ತುಸಾವಿರ ಕೊಟ್ಟು ಕೇಸ್ ಮುಚ್ವಿಹಾಕುವ ಯತ್ನ. ಮೃತ ಕುಟುಂಬದ ಬೆನ್ನಿಗೆ ನಿಂತ ಗ್ರಾಮಸ್ಥರು. ಬೆಳಗಾವಿ:ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯೊಂದಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ಸಾಕ್ಷಿಯಾಗಿದೆ.ಪ್ರಿಯತಮೆಗೆ ಅಶ್ಲೀಲ ಸಂದೇಶ ಕಳಿಸಿದ್ದ ಎನ್ನುವ ಒಂದೇ ಕಾರಣಕ್ಕೆ ಚಿತ್ರನಟ ದರ್ಶನ್ ಗ್ಯಾಂಗ್ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಪಟ್ಟಣಗೆರೆ ಶೆಡ್ನಲ್ಲಿ ಹಲ್ಲೆ ಮಾಡಿ ಕೊಂದಿತ್ತು.ಈಗ ಅದೇ ಮಾದರಿಯಲ್ಲಿ 18 ವರ್ಷದ ಕಾರ್ಮಿಕನ ಮೇಲೆ ಕಳ್ಳತನ ಆರೋಪ ಹೊರೆಸಿದ ಹೊಟೇಲ್…

Read More

ಬಾಲ್ಯ ಗರ್ಭಿಣಿ – ಸರ್ಕಾರದ ವಿಫಲತೆಯ ಸ್ಪಷ್ಟ ಸಾಕ್ಷಿ

ಬೆಳಗಾವಿ ಜಿಲ್ಲೆಯಲ್ಲಿ 1477 ಬಾಲ ಗರ್ಭಿಣಿಯರು ಕಳೆದ ನಾಲ್ಕು ವರ್ಷದಲ್ಲಿ‌ ನಿರಂತರ ಹೆಚ್ಚುತ್ತಿರುವ ಪ್ರಕರಣಗಳು. ಕ್ರಮಕ್ಕೆ ಮುಂದಾಗದ ಪೊಲೀಸ್ ಇಲಾಖೆ. ಆಫ್ ದಿ ರೆಕಾರ್ಡ ಕಥೆ ಹೇಳುತ್ತಿರುವ ಪೊಲೀಸ್ ಅಧಿಕಾರಿಗಳು ಬೆಳಗಾವಿ. ಶಿಕ್ಷಣ, ಕೃಷಿ, ಕೈಗಾರಿಕೆಗಳಲ್ಲಿ ರಾಜ್ಯದ ಮುಂಚೂಣಿಯಲ್ಲಿರುವ ಈ ಜಿಲ್ಲೆ ಈಗ ಒಂದು ಕರಾಳ ಸಾಮಾಜಿಕ ಸಮಸ್ಯೆಯಿಂದ ಎದುರಾಗಿರುವ ಅಪಖ್ಯಾತಿ ಗಂಭೀರ ಚಿಂತನೆಗೆ ಕಾರಣವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ 1477 ಬಾಲ ಗರ್ಭಿಣಿಯಾಗಿರುವುದು ಸಮಾಜದ ಮೌನ ಸಮ್ಮತಿ ಮತ್ತು ಸರ್ಕಾರಿ ನೀತಿ-ನಿಷ್ಕ್ರಿಯತೆಯ ಭಯಾನಕ ಮುಖವನ್ನು…

Read More

ರೈತರ ಆಶೀರ್ವಾದದೊಂದಿಗೆ ಬಿಡಿಸಿಸಿ ಬ್ಯಾಂಕ್‌ನಲ್ಲಿ ಬಹುಮತದ ಗುರಿ- ಬಾಲಚಂದ್ರ

ಹುಕ್ಕೇರಿ ಹಾಲು ಒಕ್ಕೂಟ: ರೈತರ ಆಶೀರ್ವಾದದೊಂದಿಗೆ ಬಿಡಿಸಿಸಿ ಬ್ಯಾಂಕ್‌ನಲ್ಲಿ ಬಹುಮತದ ಗುರಿ ಬೆಳಗಾವಿ: ಅಕ್ಟೋಬರ್ 19 ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಫೆನಲ್ ತಂಡ ಸಂಪೂರ್ಣ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಆತ್ಮವಿಶ್ವಾಸದಿಂದ ಹೇಳಿದರು. ಸುಮಾರು 12 ಜನ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ, ಅವರು ಬ್ಯಾಂಕಿನ ನಿರ್ವಹಣೆಯ ಚುಕ್ಕಾಣಿ ನೇರವಾಗಿ ಹಿಡಿಯಲಿದ್ದಾರೆ ಎಂದರು. ಗುರುವಾರ, ಹುಕ್ಕೇರಿ ಪಟ್ಟಣದ ರವದಿ ಫಾರ್ಮ್ ಹೌಸ್‌ನಲ್ಲಿ, ಜಿಲ್ಲಾ ಹಾಲು ಒಕ್ಕೂಟದ ಆಶ್ರಯದಲ್ಲಿ…

Read More

ಗುರಿ ಸಾಧನೆಗಾಗಿ ವಿದ್ಯಾರ್ಥಿಗಳು ಪ್ರಾಥಮಿಕ ಗುರಿಯತ್ತ ಗಮನ ಹರಿಸಬೇಕು

ಪುಣೆ :“ಗುರಿಯತ್ತ ಮುನ್ನುಗ್ಗುವಾಗ ಪ್ರತಿ ವಿದ್ಯಾರ್ಥಿಯೂ ಮೊದಲಿಗೆ ತನ್ನ ಎದುರಿನ ಪ್ರಾಥಮಿಕ ಗುರಿಗಳನ್ನು ಆದ್ಯತೆಗೊಳಿಸಿದಾಗ ಮಾತ್ರ ಅಂತಿಮ ಗುರಿ ಸಾಧನೆ ಸುಲಭವಾಗುತ್ತದೆ,” ಎಂದು ಬೆಳಗಾವಿಯ ಹಿರಿಯ ಪತ್ರಕರ್ತ ಹಾಗೂ ಸಮಾಜಸೇವಕ ಲೂಯಿಸ್ ರೋಡ್ರಿಗ್ಸ್ ಅಭಿಪ್ರಾಯಪಟ್ಟರು ಮಂಗಳವಾರ ಸಂಜೆ ಪುಣೆಯ ‘ಸಂತುಲನ’ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಅವರು ಮಾತನಾಡಿದರು. ‘ಜಿಂದಾಬಾದ್’ ಎಂಬ ಸಂತುಲನ ಸಂಸ್ಥೆಯ ಘೋಷವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಸಂಸ್ಥಾಪಕ ಅಡ್ವೊಕೇಟ್ ಬಸ್ತು ರೇಗೇ, ಸಂಸ್ಥೆಯ ನಿರ್ದೇಶಕಿ ಅಡ್ವೊಕೇಟ್ ಪಲ್ಲವಿ ರೇಗೇ…

Read More

ಗಣೇಶ ಮಂಡಳ- ಪೊಲೀಸ್ ನಡುವೆ ಹಗ್ಗ ಜಗ್ಗಾಟ ಶುರು…

ವಿಸರ್ಜನೆ ಮಾರ್ಗ ಬದಲಾವಣ ಬೆಳಗಾವಿ.ಯಾವುದೇ ಅನಗತ್ಯ ಕಿರಿಕಿರಿ ಇಲ್ಲದೇ ಗಣೇಶೋತ್ಸವ ವಿಸರ್ಜನೆ ಮುಕ್ತಾಯಗೊಳ್ಳುತ್ತದೆ ಎನ್ನುವಾಗಲೇ ಗಣೇಶ ಮಂಡಳಿ ಮತ್ತು ಪೊಲೀಸ್ ನಡುವೆ ಮಾರ್ಗ ಬದಲಾವಣೆ ಹಗ್ಗ ಜಗ್ಗಾಟ ಶುರುವಾಗಿದೆ.ಕಳೆದ ಬಾರಿಯಂತೆ ಪಾರಂಪರಿಕ ಮಾರ್ಗದಲ್ಲಿಯೇ ವಿಸರ್ಜನೆ ಮೆರವಣಿಗೆ ಸಾಗುತ್ತದೆ ಎಂದು ಗಣೇಶ ಮಂಡಳಿಗಳು ಸ್ಪಷ್ಟಪಡಿಸಿವೆ.ಆದರೆ ಪೊಲೀಸರು ಮಾತ್ರ ತಾವು ಸೂಚಿಸಿದ ಮಾರ್ಗದಲ್ಲಿಯೇ ವಿಸರ್ಜನೆಗೆ ತೆರಳಬೇಕು ಎನ್ನುವ ಹುಕುಂನ್ನು ನೀಡಿದ್ದರಿಂದ ಒಂದು ರೀತಿಯ ಗೊಂದಲ ವಾತಾವರಣ ಶುರುವಾಗಿ ಬಿಟ್ಟಿದೆ.ಇದೆಲ್ಲದರ ಜೊತೆಗೆ ಗಣೇಶೋತ್ಸವದಲ್ಲಿ ಎಲ್ಲಿಯೂ ಇಲ್ಲದ ಕಾನೂನನ್ನು ಮಂಡಳಿಗಳ ಮೇಲೆ ಹೇರುತ್ತಿರುವ…

Read More
error: Content is protected !!