
ಬೆಳಗಾವಿಯಲ್ಲಿ ಅನಾಥ ಅಜ್ಜಿಯ ಅಂತ್ಯ ಸಂಸ್ಕಾರ
ಹಿಂದೂ–ಮುಸ್ಲಿಂ ಸಾಮರಸ್ಯದ ಕಂಗೊಳ ಬೆಳಗಾವಿ, ಸೆಪ್ಟೆಂಬರ್ 3:ಅನಾಥ ವೃದ್ಧೆ (ಹಿಂದೂ ಮಹಿಳೆ)ಯ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಮಾನವೀಯತೆ ಮತ್ತು ಧಾರ್ಮಿಕ ಸಾಮರಸ್ಯದ ಮಾದರಿ ಕಂಗೊಳಿಸಿತು. ಸಿವಿಲ್ ಆಸ್ಪತ್ರೆಯಲ್ಲಿ 10–15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಆ ವೃದ್ಧೆ ನಿನ್ನೆ ನಿಧನರಾದರು. ಅವರ ಕುಟುಂಬದವರು ಅಥವಾ ಬಂಧುಗಳು ಯಾರೂ ಇಲ್ಲದ ಕಾರಣ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ವಿಚಾರ ತಿಳಿದ ತಕ್ಷಣ ಖಾದರಿ ಗೀವಳೆ ಅವರು ಮಾಜಿ ಮೇಯರ್ ವಿಜಯ ಮೋರೆ ಅವರಿಗೆ ತಿಳಿಸಿದರು. ವಿಜಯ ಮೋರೆ ತಕ್ಷಣ ಮುಂದಾಗಿ, ಸಕಲ ಹಿಂದೂ…