ಬೋರವೆಲ್ ವಾಹನ ಬಿಟ್ಟು ಪಲಾಯನ!
RCU ವಿರುದ್ಧ ಠಾಣೆ ಮೆಟ್ಟಿಲು ತುಳಿದ ರೈತರು.
*ಶಾಸಕರು ಬರುವಿಕೆಯ ದಾರಿ ಕಾಯ್ದು ಸುಸ್ತಾದ ರೈತರು.*
ಬೆಳಗಾವಿ, ಹಿರೇಬಾಗೇವಾಡಿ:
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (RCU) ವಿರುದ್ಧ ಮತ್ತೆ ರೈತರ ಕೋಪ ಭುಗಿಲೆದ್ದಿದೆ.
ಇಂದು ಮಧ್ಯಾಹ್ನ ಹಿರೇಬಾಗೇವಾಡಿ ಬಳಿ ರೈತರ ಜಮೀನಿನಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೇ ಬೋರವೆಲ್ ಕೊರೆಸುತ್ತಿದ್ದ RCUದವರು ರೈತರ ಬಆಕ್ರೋಶಕ್ಕೆ ಹೆದರಿ ಸ್ಥಳದಿಂದ ಪಲಾಯನ ಮಾಡಿದ ಘಟನೆ ನಡೆಯಿತು..
ಸ್ಥಳಕ್ಕೆ ಧಾವಿಸಿದ ರೈತರು ಸಂಬಂಧಿದಿದವರನ್ನು ಪ್ರಶ್ನಿಸಿದ ಕ್ಷಣವೇ, ಬೋರವೆಲ್ ವಾಹನವನ್ನು ಅಲ್ಲಿಯೇ ಬಿಟ್ಟು ಕೆಲಸಗಾರರು ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ಶಾಂತಗೊಳಿಸಿದರು ಹಾಗೂ ಸಂಬಂಧಪಟ್ಟವರನ್ನು ಠಾಣೆಗೆ ಕರೆದುಕೊಂಡು ಹೋದರು.
ರಾಷ್ಟ್ರೀಯ ಹೆದ್ದಾರಿಯಿಂದ ವಿವಿಗೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆಗೆ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಚಾಲನೆ ನೀಡಿದ್ದರು. ಆದರೆ ಈ ಯೋಜನೆಯ ಸಮಯದಲ್ಲೇ ರೈತರು ತಮ್ಮ ಭೂಮಿಗೆ ತೊಂದರೆ ಆಗುವುದರ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರು.
ಆದರೆ ಯಾವುದೇ ಭರವಸೆ ನೀಡದೇ, ಈಗ ಮತ್ತೆ “ಪೂರ್ವಾನುಮತಿ ಇಲ್ಲದೇ ಬೋರವೆಲ್ ಕೆಲಸ” ನಡೆಯುತ್ತಿರುವುದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

“ *ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ”* — ರೈತರ ಎಚ್ಚರಿಕೆ
ಸ್ಥಳೀಯ ರೈತ ಶ್ರೀಮಂತಗೌಡ ಪಾಟೀಲ ಅವರ ಭೂಮಿಯಲ್ಲಿ ನಡೆದ ಈ ಘಟನೆ ಬಳಿಕ ರೈತರು ಠಾಣೆ ಮೆಟ್ಟಿಲು ಹತ್ತಿದ್ದಾರೆ.
“RCU ನಿರಂತರವಾಗಿ ನಮ್ಮ ಹಕ್ಕುಗಳನ್ನು ಲೆಕ್ಕಿಸದೇ ಕೆಲಸ ಮಾಡುತ್ತಿದೆ. ಅಗತ್ಯವಿದ್ದರೆ ನ್ಯಾಯಾಲಯದ ಮೆಟ್ಟಿಲು ಕೂಡ ಹತ್ತುತ್ತೇವೆ,” ಎಂದು ರೈತರು ಕಿಡಿಕಾರಿದ್ದಾರೆ.
*ಆರ್ಸಿಯು ಮೌನ — ರೈತರ ಆಕ್ರೋಶ*
ಈ ಕುರಿತು RCU ಅಧಿಕಾರಿಗಳಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಆದರೆ ಸ್ಥಳೀಯರು ಹೇಳುವಂತೆ, ವಿವಿಯ ಕಾರ್ಯಪದ್ಧತಿಯಲ್ಲಿ ‘ಪಾರದರ್ಶಕತೆ ಕೊರತೆ’ ಮತ್ತು ‘ಸ್ಥಳೀಯರ ಅಭಿಪ್ರಾಯ ನಿರ್ಲಕ್ಷ್ಯ’ವೇ ಈ ಆಕ್ರೋಶದ ಮೂಲವಾಗಿದೆ.