Headlines

ಮಾಹಿತಿ ಆಯೋಗದ ರಾಜ್ಯ ಆಯುಕ್ತರಾಗಿ ಹಿರಿಯ ಪತ್ರಕರ್ತ ವಾಳ್ವೇಕರ

ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ಹಿರಿಯ ಪತ್ರಕರ್ತ, ಪ್ರಸ್ತುತ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮಹೇಶ ವಾಳ್ವೇಕರ ನೇಮಕಗೊಂಡಿದ್ದಾರೆ.

ಕಳೆದ ೨೪ ವರ್ಷಗಳಿಂದ ವಿದ್ಯುನ್ಮಾನ, ಬಾನುಲಿ ಹಾಗೂ ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಡಾ.ಮಹೇಶ ವಾಳ್ವೇಕರ್ ಕಳೆದ ೪ ವರ್ಷ ೯ ತಿಂಗಳಿನಿಂದ , ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಡಾ. ಮಹೇಶ ವಾಳ್ವೇಕರ ಅವರು ಸಂಶೋಧನೆ ಕೈಗೊಂಡು ಮಹಾಪ್ರಬಂಧವನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ರಾಜ್ಯ ಕಾನೂನು‌ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಡಾ.ಮಹೇಶ ವಾಳ್ವೇಕರ್,ಕಾನೂನು ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಡಾ. ಮಹೇಶ ವಾಳ್ವೇಕರ ಅವರು ಕಳೆದ ೨೪ ವರ್ಷಗಳಿಂದ ಪತ್ರಿಕೋದ್ಯಮಿಯಾಗಿ ಮಾಧ್ಯಮದ ಎಲ್ಲಾ ಪ್ರಕಾರಗಳಲ್ಲೂ ಸಮರ್ಥವಾಗಿ, ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದ್ದು, ಹಲವು ಸಂಘ ಸಂಸ್ಥೆಗಳಿಗೆ ಮಾಧ್ಯಮ ತಜ್ಞರಾಗಿ ಹಾಗೂ ಮಾಧ್ಯಮ ಸಲಹೆಗಾರರಾಗಿ, ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.  

ಧಾರವಾಡ ಅಕಾಶವಾಣಿ ಕೇಂದ್ರದ ಸುದ್ದಿ ವಿಭಾಗದ ವರದಿಗಾರರಾಗಿ, ವಾರ್ತಾ ವಾಚಕರಾಗಿ ಕರ್ತವ್ಯ ನಿರ್ವಹಿಸಿರುವ ಡಾ. ಮಹೇಶ ವಾಳ್ವೇಕರ, ಉದಯ  TV ಸುದ್ದಿ ವಾಹಿನಿ , ಕಾವೇರಿ TV  ಸೇರಿದಂತೆ ಹಲವು ವಿದ್ಯುನ್ಮಾನ ಸುದ್ದಿವಾಹಿನಿಯ ಜಿಲ್ಲಾ ವರದಿಗಾರರಾಗಿ ಹಾಗೂಉದಯವಾಣಿ ಸೇರಿದಂತೆ  ಮುದ್ರಣ ಮಾಧ್ಯಮದ ಹಲವು ಪತ್ರಿಕೆಗಳ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಡಿದ್ದಾರೆ.  ದೂರದರ್ಶನ ಚಂದನ ವಾಹಿನಿಯ ವರದಿಗಾರರಾಗಿ, ಸಹಾಯಕ ಸುದ್ದಿ ಸಂಪಾದಕರಾಗಿಯೂ ಸಹ ಕರ್ತವ್ಯ ನಿರ್ವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಕಳೆದ ನಾಲ್ಕು ವರ್ಷ ೯ ತಿಂಗಳಿನಿಂದ  ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!