ಶುಭಂ ಅರೆಸ್ಟ್..!?

Oplus_16908288

ಬೆಳಗಾವಿ.

ಹಳೆಯ ಪ್ರಕರಣದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸ್ವಯಂ‌ ಘೋಷಿತ ನಾಯಕ ಶುಭಂ ಶೆಳಕೆಯನ್ನು ಮಾಳಮಾರುತಿ ಪೊಲೀಸರು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಖಡೇಬಜಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹೊಡೆದಾಟ ಪ್ರಕರಣದಲ್ಲಿ ಶೆಳಕೆ ಅವರಿಗೆ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಾಳಮಾರುತಿ ಪೊಲೀಸರು ಶೆಳಕೆಯನ್ನು ವಶಕ್ಕೆ ಪಡೆದರು.

Oplus_16908288

ಅಷ್ಟೆ ಅಲ್ಲ ಇತ್ತೀಚಿಗೆ ಕನ್ನಡಿಗರ ಸ್ವಾಭಿಮಾನ ಕೆರಳಿಸುವ ಉದ್ಧಟತನದ ಕೆಲಸ ಮಾಡಿದ ಆರೋಪವೂ ಎಂಇಎಸ್ ನ ಶುಭಂ ಶೆಳಕೆ ಮೇಲಿತ್ತು.. . ಇತ್ತೀಚೆಗಷ್ಟೇ ಕರವೇ ಅಧ್ಯಕ್ಷ ನಾರಾಯಣಗೌಡರನ್ನು ಹಿಯ್ಯಾಳಿಸಿದ್ದಲ್ಲದೇ ಕನ್ನಡ ಧ್ವಜಕ್ಕೆ ಅವಮಾನ ಮಾಡುವ ವಿಡಿಯೋವನ್ನು ಶೆಳಕೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಬಗ್ಗೆ ಕರವೇ ಸಂಘಟನೆ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು

Leave a Reply

Your email address will not be published. Required fields are marked *

error: Content is protected !!