ಬೆಳಗಾವಿ. ಬಿಡಿಸಿಸಿ ಚುನಾವಣೆಯಲ್ಲಿ ಜಾರಕಿಹೊಳಿ ವಿರುದ್ಧ ಮೀಸೆ ತಿರುವಿ ಉದ್ದುದ್ದ ಮಾತಾಡಿದ್ದ ಮಾಜಿ ಸಂಸದ ರಮೇಶ ಕತ್ತಿ ಬಣ ಸೋಲು ಅನುಭವಿಸಿದರೆ, ಜಾರಕಿಹೊಳಿ ಬಣ ಭರ್ಜರಿ ಗೆಲುವು ಸಾಧಿಸಿದೆ.

ಹುಕ್ಕೇರಿ ತಾಲೂಕು ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಗೆದ್ದ ನಂತರ ಬಿಡಿಸಿಸಿ ಗೆದ್ದೇ ಬಿಟ್ಟೆವು ಎನ್ನುವಂತೆ ಬೀಗುತ್ತಿದ್ದ ಕತ್ತಿ ಬಣ ಸೋಲುವ ಮೂಲಕ ಮುಖಭಂಗ ಅನುಭವಿಸುವಂತಾಯಿತು.

ಒಟ್ಟು 16 ಸ್ಥಾನಗಳಲ್ಲಿ ಜಾರಕಿಹೊಳಿ ಬಣ 12 ಸ್ಥಾನ ಗಳನ್ನು ತನ್ನದಾಗಿಸಿಕೊಂಡಿದೆ. ಫಲಿತಾಂಶಕ್ಕೂ ಮುನ್ನವೇ ಬಾಲಚಂದ್ರ ಜಾರಕಿಹೊಳಿ ಅವರು12 ಸ್ಥಾನವನ್ನು ಗೆದ್ದು ಬಿಡಿಸಿಸಿ ಚುಕ್ಕಾಣಿ ಹಿಡಿಯುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಗೆದ್ದವರು…
ರಾಮದುರ್ಗದಿಂದ ಮಲ್ಲಣ್ಣ ಯಾದವಾಡ,
ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ 122 . ರಾಯಬಾಗದಲ್ಲಿ ಅಪ್ಪಾಸಾಹೆಬ ಕುಲಗುಡೆ 120 ಮತ ಪಡೆದು ಗೆದ್ದಿದ್ದಾರೆ.ನಿಪ್ಪಾಣಿಯಿಂದ ಚಿಕ್ಕೋಡಿಯ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ 71 ರಾಯಬಾಗ ಅಪ್ಪಾ ಸಾಹೇಬ ಕುಲಗುಡೆ 120 ಮತ ಪಡೆದಿದ್ದಾರೆ.
ಹುಕ್ಕೇರಿಯಲ್ಲಿ ರಮೇಶ್ ಕತ್ತಿ 59 ,
ಕಿತ್ತೂರಿನಲ್ಲಿ ನಾನಾ ಸಾಹೇಬ್ ಮತ್ತು ವಿಕ್ರಂ ಇನಾಮ್ಹಾರ ಅವರು ತಲಾ 15 ಮತಗಳ ಮೂಲಕ ಸಮಬಲ ಸಾಧಿಸಿದ್ದಾರೆ. ಬೈಲಹೊಂಗಲದಲ್ಲಿ ಮಹಾಂತೇಶ್ ದೊಡ್ಡ ಗೌಡರ್ ಅವರು 53 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ