ಕತ್ತಿ ವಿವಾದದ ‘ಬಾಯಿ ಬಾಂಬ್’!
ಬೆಳಗಾವಿ
ಮಾಜಿ ಸಂಸದ ರಮೇಶ ಕತ್ತಿ ಮತ್ತೆ ರಾಜಕೀಯದ ಬಿಸಿ ಕೇಂದ್ರಬಿಂದುವಾಗಿದ್ದಾರೆ!
ಅವರ ನಾಲಿಗೆಯಿಂದ ಜಾರಿ ಬಂದ ಮಾತುಗಳು — ಮತ್ತೆ ವಿವಾದದ ಚಂಡಮಾರುತ ಎಬ್ಬಿಸಿವೆ.
ಈ ಬಾರಿ ಕತ್ತಿ ಅವರ ಮಾತು ವಾಲ್ಮೀಕಿ ಸಮುದಾಯದ ವಿರುದ್ಧ ಅವಹೇಳನಕಾರಿ ಎಂದು ಆರೋಪಗೊಂಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಾಲ್ಮೀಕಿ ಸಂಘಟನೆಗಳು ಬೀದಿಗಿಳಿದಿವೆ.
ಬೆಳಗಾವಿ, ಗೋಕಾಕ, ಹುಕ್ಕೇರಿ ಸೇರಿದಂತೆ ಅನೇಕ ಕಡೆ ಬೃಹತ್ ಪ್ರತಿಭಟನೆಗಳು,
“ಕತ್ತಿ ಬಂಧನ!”ದ ಘೋಷಣೆಗಳು, ಹಾಗೂ ಕಾನೂನು ಕ್ರಮದ ಒತ್ತಡ ಹೆಚ್ಚುತ್ತಿವೆ.
ಪೊಲೀಸರು ಈಗಾಗಲೇ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ.

“ನನ್ನ ಮಾತು ತಿರುಚಲಾಗಿದೆ!”
ವಿವಾದ ಕಾವು ತೀವ್ರವಾಗುತ್ತಿದ್ದಂತೆಯೇ, ಕತ್ತಿ ವಿಡಿಯೋ ಮೂಲಕ ಕ್ಷಮೆ ಮತ್ತು ಸ್ಪಷ್ಟನೆ ನೀಡಿದ್ದಾರೆ.
“ನನ್ನ ಹೇಳಿಕೆಯನ್ನು ರಾಜಕೀಯವಾಗಿ ತಿರುಚಲಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರೂ,
ವಾಲ್ಮೀಕಿ ಸಮುದಾಯದ ಸಂಘಟನೆಗಳು ಅವರ ಸ್ಪಷ್ಟನೆಗೆ ವಿಶ್ವಾಸ ತೋರಿಲ್ಲ.
ವಿವಾದದ ಮೂಲದಲ್ಲಿ ಜಾರಕಿಹೊಳಿ ಕುಟುಂಬದ ವಿರುದ್ಧ ಕತ್ತಿಯ ಅಸಮಾಧಾನ ಉಂಟು ಎನ್ನುವುದು ರಾಜಕೀಯ ವಲಯದ ಅಂದಾಜು.
ಹೀಗಾಗಿ ಈ ಮಾತುಗಳು “ಜಾರಕಿಹೊಳಿಗಳಿಗೆ ಹೊಡೆದು, ಸಮುದಾಯಕ್ಕೆ ತಗುಲಿದಂತಾಗಿದೆ” ಎಂಬ ಟೀಕೆಗಳು ಕೇಳಿಬರುತ್ತಿವೆ.
ಹಳೆಯ ವಿವಾದಗಳ ನೆರಳು –
ರಮೇಶ ಕತ್ತಿ ಅವರಿಗೆ ವಿವಾದ ಹೊಸದೇನಲ್ಲ.
ಹಿಂದೆಯೂ ಅವರು ಪಕ್ಷದ ಶಿಸ್ತು ಮೀರಿ, RSS ಹಾಗೂ ಬಿಜೆಪಿ ನಾಯಕರ ವಿರುದ್ಧ ಟೀಕೆಗಳನ್ನು ಮಾಡಿದ್ದರು.
ಆ ಕಾರಣದಿಂದಲೇ ಲೋಕಸಭಾ ಟಿಕೆಟ್ ತಪ್ಪಿತು ಎಂಬುದು ಬಿಜೆಪಿ ಒಳವಲಯದ ಮಾತು.
ಈ ಹೊಸ ವಿವಾದದ ಮಾತು, ಈಗ ಪಕ್ಷದ ನಾಯಕರಿಗೂ ನಡುಕ ತಂದಿದೆ.
ವಾಲ್ಮೀಕಿ ಸಮುದಾಯದಂತು ರಾಜ್ಯದ ರಾಜಕೀಯವಾಗಿ ಪ್ರಭಾವಿ ಮತಬ್ಯಾಂಕ್
ಇದರಿಂದ ಪಕ್ಷದ ಸಾಮಾಜಿಕ ಸಮತೋಲನಕ್ಕೂ ಧಕ್ಕೆಯಾಗಬಹುದು ಎಂಬ ಆತಂಕ ಬಿಜೆಪಿಯಲ್ಲಿ ವ್ಯಕ್ತವಾಗುತ್ತಿದೆ
ಬಿಜೆಪಿಗೆ ತಲೆನೋವು –
ಕತ್ತಿ ಅವರ ಹೇಳಿಕೆಯ ಪರಿಣಾಮ ಈಗ ಪಕ್ಷದೊಳಗೆ ಚರ್ಚೆಯ ವಿಷಯವಾಗಿದೆ.
ಕೆಲವರು “ಪಕ್ಷದ ಇಮೇಜ್‌ಗೆ ಹಾನಿಯಾಗಿದೆ” ಎನ್ನುತ್ತಿದ್ದು,
ಇನ್ನೂ ಕೆಲವರು “ಕತ್ತಿಯು ತಮ್ಮ ಪ್ರದೇಶದ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ” ಎಂದು ಅಂದಾಜು ಮಾಡುತ್ತಿದ್ದಾರೆ.
ವಾಲ್ಮೀಕಿ ಸಂಘಟನೆಗಳು ಕತ್ತಿ ವಿರುದ್ಧ ಕಾನೂನು ಕ್ರಮದ ಒತ್ತಡ ಮುಂದುವರಿಸುತ್ತಿದ್ದು,