ರಾಜ್ಯ ರಾಜಕಾರಣದಲ್ಲಿ ಸಮತೋಲನ ಬೇಕೇ ಬೇಕು!
“ಗಡಿನಾಡದವರಿಗೂ ಸಿಎಂ ಆಸೆ ಪಡುವ ಹಕ್ಕು ಇದೆ — ಬೆಳಗಾವಿಯಿಂದಲೇ ಬದಲಾವಣೆಯ ಘೋಷಣೆ!”
ರಾಜ್ಯ ರಾಜಕಾರಣದ ಸಮತೋಲನಕ್ಕೆ ಈಗ ಗಡಿನಾಡದ ನಾಯಕತ್ವ ಅಗತ್ಯ!”
2028ರ ಪಥದಲ್ಲಿ ಗಡಿನಾಡದ ಹೆಜ್ಜೆ — ಸಿಎಂ ಕುರ್ಚಿಗೆ ಉತ್ತರ ಕರ್ನಾಟಕದ ಕ್ಲೈಮ್!”
(ಇ ಬೆಳಗಾವಿ ವಿಶೇಷ)
ರಾಜ್ಯ ರಾಜಕೀಯದ ಇತಿಹಾಸ ನೋಡಿದರೆ, ಮುಖ್ಯಮಂತ್ರಿಗಳ ಪಟ್ಟದಲ್ಲಿ ದಕ್ಷಿಣ ಕರ್ನಾಟಕದ ನಾಯಕರ ಪ್ರಾಬಲ್ಯ ಬಹುತೇಕ ಸ್ಥಿರವಾಗಿದೆ.
ಮೈಸೂರು, ಮಂಡ್ಯ, ತುಮಕೂರು, ಶಿವಮೊಗ್ಗ ಅಥವಾ ಬಳ್ಳಾರಿಯವರಷ್ಟೇ ಚಕ್ರವರ್ತಿಗಳಾಗಿದ್ದಾರೆ. ಆದರೆ ರಾಜ್ಯದ ಉತ್ತರ ಭಾಗ — ಅಂದರೆ ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, … ಈ ಭಾಗಗಳು ಆಡಳಿತದ ಅಂಚಿನಲ್ಲೇ ಉಳಿದಿವೆ.

ಆದರೆ ಇಂದು ರಾಜಕೀಯದ ಮನೋಭಾವನೆ ಬದಲಾಗುತ್ತಿದೆ. “ಉತ್ತರ ಕರ್ನಾಟಕದ ಜನ ರಾಜಕೀಯದ ಪ್ರಜ್ಞೆ” ಎಂಬ ಹೊಸ ಅಲೆ ಏಳುತ್ತಿದೆ.
ಹಳ್ಳಿಗಳಿಂದ ನಗರಗಳವರೆಗೂ — “ನಮ್ಮವರೂ ಸಿಎಂ ಆಗಬೇಕು” ಎನ್ನುವ ಧ್ವನಿ ಮೂಡುತ್ತಿದೆ. ಇದು ಸತೀಶ್ ಜಾರಕಿಹೊಳಿ ಅಥವಾ ಒಬ್ಬರ ಹಕ್ಕು ಮಾತ್ರವಲ್ಲ, ಇಡೀ ಗಡಿನಾಡಿನ ಪ್ರದೇಶದ ಜನರ ಹಕ್ಕೊತ್ತಾಯವಾಗಿದೆ.
—
ಸಿದ್ಧರಾಮಯ್ಯ ತತ್ವದ ಮುಂದುವರಿತ ರೂಪವೇ ಸತೀಶ್ ಜಾರಕಿಹೊಳಿ?

ಸಿದ್ಧರಾಮಯ್ಯ ಅವರು ಸಾಮಾಜಿಕ ನ್ಯಾಯದ ಧ್ವಜದೊಂದಿಗೆ ರಾಜ್ಯ ರಾಜಕಾರಣಕ್ಕೆ ಹೊಸ ಮೌಲ್ಯ ತಂದವರು. ಆದರೆ ಅವರ ಬಳಿಕ ಆ ತತ್ವವನ್ನು ಜೀವಂತವಾಗಿಟ್ಟುಕೊಳ್ಳುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಸಮಯ ಇದು.
ಅದಕ್ಕೆ ಬೆಳಗಾವಿಯ ಸತೀಶ್ ಜಾರಕಿಹೊಳಿ ಅವರ ಹೆಸರು ಬರುತ್ತದೆ. ಅಹಿಂದದ ಆ ತತ್ವ, ಗ್ರಾಮೀಣ ಆರ್ಥಿಕತೆ, ಅಲ್ಪಸಂಖ್ಯಾತರ ಧ್ವನಿ, ಹಾಗೂ ಶೋಷಿತರ ಪರದ ನಿಲುವು — ಈ ಎಲ್ಲ ಅಂಶಗಳಲ್ಲಿ ಅವರ ನಾಯಕತ್ವ ಹೊಸ ಅಧ್ಯಾಯದ ಸೂಚನೆ ನೀಡುತ್ತಿದೆ.
—
*ಗಡಿನಾಡದಿಂದ ಸಿಎಂ ಬರಬೇಕು — ಇದು ಗೌರವದ ಪ್ರಶ್ನೆ!*
ಬೆಳಗಾವಿಯಂತಹ ಗಡಿನಾಡವು ಕೇವಲ ರಾಜಕೀಯವಾಗಿ ಮಾತ್ರವಲ್ಲ, ರಾಜ್ಯದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರೀಕರಣಕ್ಕೂ ಬುನಾದಿಯಾಗಿದೆ. ಕರ್ನಾಟಕದ ದ್ವಾರವಾಗಿರುವ ಈ ಜಿಲ್ಲೆಯಿಂದ ನಾಯಕನೊಬ್ಬ ರಾಜ್ಯದ ಸಿಎಂ ಆದರೆ, ಅದು ಕೇವಲ ಪ್ರಾದೇಶಿಕ ಗೌರವವಲ್ಲ — ಸಾಮಾಜಿಕ ಸಮತೋಲನದ ಜಯಗೀತೆ.
ಈ ಕಾರಣಕ್ಕೆ, ಸತೀಶ್ ಜಾರಕಿಹೊಳಿ ಅವರ ಸಿಎಂ ಆಸೆ ಪಡುವುದು ಯಾವುದೇ ಅತಿರೇಕವಲ್ಲ.
ಅದು ಉತ್ತರ ಕರ್ನಾಟಕದ ಮಾತು, ಹಕ್ಕಿನ ಹೋರಾಟ, ಮತ್ತು ಶೋಷಿತರ ಪರದ ರಾಜಕೀಯ ಪ್ರಜ್ಞೆಯ ರೂಪ.

“ಗಡಿನಾಡದ ಹಕ್ಕು, ಕರ್ನಾಟಕದ ಸಮತೋಲನ”
ರಾಜ್ಯ ರಾಜಕಾರಣದ ಕೇಂದ್ರ–ಪರಿಧಿ ಭೇದವನ್ನು ಕೊನೆಗಾಣಿಸಲು, ಸಿದ್ಧರಾಮಯ್ಯ ಅವರ ಬಳಿಕ ಉತ್ತರ ಕರ್ನಾಟಕದ ನಾಯಕರಿಗೂ ಅವಕಾಶ ಕೊಡಲೇಬೇಕು.
ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆ ಬಿರುಗಾಳಿ ಎಬ್ಬಿಸಿದರೂ, ಅದರ ಮಧ್ಯೆ ಸತೀಶ್ ಜಾರಕಿಹೊಳಿ ಅವರ “2028ಕ್ಕೆ ನಾನೂ ಕ್ಲೈಮ್ ಮಾಡ್ತೀನಿ” ಎಂಬ ಮಾತು ಕೇವಲ ರಾಜಕೀಯ ಘೋಷಣೆ ಅಲ್ಲ —
ಗಡಿನಾಡದ ಧ್ವನಿ, ಬೆಳಗಾವಿಯ ಗೌರವದ ಘೋಷಣೆ!

