
ಕೇಂದ್ರದ ವಿರುದ್ಧ ಹೋರಾಟ- ಬೆಳಗಾವಿಯಲ್ಲಿ ಕೈ ಶಕ್ತಿ ಪ್ರದರ್ಶನ
ಬೆಲೆ ಏರಿಕೆಯ ಬೆಳಗಾವಿಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರತಿಭಟನೆ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಆಗಮನ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಿದ್ಧತೆ ಬಲು ಜೋರು ಬೆಳಗಾವಿ,:ಕೇಂದ್ರ ಸರ್ಕಾರದ ಧೋರಣೆಗಳು, ಹಠಾತ್ ಬೆಲೆ ಏರಿಕೆಗಳು, ಮತ್ತು ಜನಸಾಮಾನ್ಯರ ಬದುಕಿನಲ್ಲಿ ಮೂಡಿದ ತೀವ್ರ ಅಸಮಾಧಾನವನ್ನು ಸಂಘಟಿತಗೊಳಿಸಲು ಕಾಂಗ್ರೆಸ್ ಈ ಬಾರಿ ಬೆಳಗಾವಿಯನ್ನು ವೇದಿಕೆಯಾಗಿಸಿಕೊಳ್ಳುತ್ತಿದೆ. ಬೃಹತ್ ಪ್ರತಿಭಟನೆಗೆ ನಾಳೆ (ದಿ.28) ನಗರದ ಸಿಪಿಎಡ್ ಮೈದಾನ ಸಜ್ಜಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿ ವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರನ್ನು…