
ಚಂಡೀಗಡಕ್ಕೆ ಬೆಳಗಾವಿ ನಗರಸೇವಕರ ನಿಯೋಗ ಭೆಟ್ಟಿ
ಬೆಳಗಾವಿ. ಚಂಡೀಗಡದ ಮಹಾನಗರ ಪಾಲಿಕೆಯ ನೂತನ ಮೇಯರ್ Harprit kaur Babla ಅವರೊಂದಿಗೆ ಬೆಳಗಾವಿ ನಗರಸೇವಕರ ನಿಯೋಗ ಚರ್ಚೆ ನಡೆಸಿತು. ಅಲ್ಲಿನ ಮಹಾನಗರ ಪಾಲಿಕೆಯು ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನಗರಸೇವಕರು ಚರ್ಚೆ ನಡೆಸಿದರು.
ಬೆಳಗಾವಿ. ಚಂಡೀಗಡದ ಮಹಾನಗರ ಪಾಲಿಕೆಯ ನೂತನ ಮೇಯರ್ Harprit kaur Babla ಅವರೊಂದಿಗೆ ಬೆಳಗಾವಿ ನಗರಸೇವಕರ ನಿಯೋಗ ಚರ್ಚೆ ನಡೆಸಿತು. ಅಲ್ಲಿನ ಮಹಾನಗರ ಪಾಲಿಕೆಯು ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ನಗರಸೇವಕರು ಚರ್ಚೆ ನಡೆಸಿದರು.
ದೇಶದಲ್ಲಿ ಆಹಾರ ಕೊರತೆ ಇಲ್ಲ; ಅಗತ್ಯವಿರುವಷ್ಟು ಇದೆ-ಸಂಸದ ಈರಣ್ಣ ಕಡಾಡಿಮೈಸೂರು: ರಾಜ್ಯದ 5 ಕೋಟಿ ಜನರು ಸೇರಿ ದೇಶದ 80 ಕೋಟಿ ಜನರಿಗೆ ಉಚಿತ ಆಹಾರ ಪದಾರ್ಥ ವಿತರಿಸುತ್ತಿದ್ದು, ನಾಲ್ಕು ತಿಂಗಳಿಗೆ ಬೇಕಾಗುವಷ್ಟು ಆಹಾರ ಶೇಖರಣೆ ಇದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಗುರುವಾರ ಆಹಾರ ನಿಗಮದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಹಾರ ಕೊರತೆ ಇಲ್ಲ. ಅಗತ್ಯವಿರುವಷ್ಟು ಆಹಾರ ಸಂಗ್ರಹವಿದೆ. 2011ರ ಗಣತಿಯಂತೆ ದೇಶದ 80…
ಬೆಳಗಾವಿ:ನಾವು ಬದುಕಿ ಬಂದಿದ್ದೇ ಪವಾಡ “: ಪ್ರಯಾಗರಾಜನಲ್ಲಿ ಪವಿತ್ರ ಕುಂಭಸ್ನಾನ ಮುಗಿಸಿ ನೂಕು ನುಗ್ಗಲಿನಲ್ಲಿ ಪಾರಾಗಿ ಬಂದ ಸರೋಜಾ ನಡುವಿನಹಳ್ಳಿ ಹೇಳಿದ ಮಾತಿದು,ಈ ಮಾತನ್ನು ಹೇಳುವಾಗ ಅವರು ಭಾವುಕರಾಗಿದ್ದರು. ಮಾತುಗಳು ಮೌನವಾಗಿದ್ದವು.“ಪ್ರಯಾಗ್ರಾಜ್ದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಬೇಕೆಂದು ಜ.28ರಂದು ರಾತ್ರಿ 12 ಗಂಟೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ನಾನ ಮುಗಿಸಿ ಲಕ್ಷಾಂತರ ಜನರು ನಮ್ಮ ಎದುಗಡೆಯಿಂದ ಬರುತ್ತಿದ್ದರು. ಜನರು ಮುಖಾಮುಖಿಯಾಗಿ ಒಬ್ಬರನ್ನೊಬ್ಬರು ತಳ್ಳಲು ಆರಂಭಿಸಿದರು. ಎಲ್ಲರೂ ಗಾಬರಿಯಿಂದ ಓಡುವ ರಭಸದಲ್ಲಿದ್ದರು. ತುಳಿದುಕೊಂಡೇ ಹೋಗುತ್ತಿದ್ದರು. ಕಿರುಚಾಡಿದರೂ ಯಾರೂ ರಕ್ಷಣೆಗೆ ಬರಲಿಲ್ಲ….
ಬೆಳಗಾವಿ. ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾ ದಾಳಿ ನಡೆದಿದೆ. ಬೆಳಗಾವಿ ನಗರದ ಅನಗೋಳದಲ್ಲಿರುವ, ಬೆಳಗಾವಿ ಪ್ರಭಾರಿ ಸಬ್ ರಿಜಿಸ್ಟರ್ ಸಚಿನ್ ಮಂಡೇದ್ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮನೆ, ಕಚೇರಿ ಸೇರಿ 3 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಹಾರೂಗೇರಿ ವೆಟರ್ನರಿ ಇನ್ಸ್ಪೆಕ್ಟರ್ ಸಂಜಯ್ ಮನೆ ಮೇಲೂ ದಾಳಿ ನಡೆದಿದೆ. ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ವೇದಾಂತ ಫೌಂಡೇಶನ್ ನ 2025ನೇ ಸಾಲಿನ ಪ್ರಶಸ್ತಿ ಪ್ರಕಟ :ಶಿಕ್ಷಕರು, ಪತ್ರಕರ್ತರು ಮತ್ತು ಪೊಲೀಸರು ಹೀಗೆ ನವರತ್ನಗಳು “ವೇದಾಂತ ಎಕ್ಸಲೆನ್ಸ್ ಅವಾರ್ಡ್ “ಪ್ರಶಸ್ತಿಯಿಂದ ಸತ್ಕರಿಸಲ್ಪಡುವರು. ಪ್ರಶಸ್ತಿಗೆ ಭಾಜನರಾದವರು : ಶಿಕ್ಷಕರು -1.ಶ್ರೀಮತಿ. ಅಂಜುದೇವಿ ಕೇದನೂರ್ಕರ್, ನಿವೃತ್ತ ಶಿಕ್ಷಕಿ ಸ. ಹಿ. ಪ್ರಾ. ಶಾಲೆ, ಮುತಗಾ, 2.ಶ್ರೀಮತಿ. ಕವಿತಾ ಪರಮಾಣಿಕ, ಪ್ರಧಾನ ಗುರುಮಾತೆ, ಮಹಿಳಾ ವಿದ್ಯಾಲಯ, ಆಂಗ್ಲ ಮಾಧ್ಯಮ, 3 ರಘುನಾಥ್ ಉತ್ತೂರ್ಕರ್, ಪ್ರಧಾನ ಗುರುಗಳು, ಮರಾಠಿ ಹಿ. ಪ್ರಾ. ಶಾಲೆ. ನಂ. 35, ಮಜಗಾವಿ 4. ಸುನೀಲ್…
ಮೃತರ ಕುಟುಂಬಕ್ಕೆ ತಲಾ 2 ಲಕ್ಷಸಚಿವ ಸತೀಶ್ ಜಾರಕಿಹೊಳಿ ಘೋಷಣೆಬೆಳಗಾವಿ:ಉತ್ತರ ಪ್ರದೇಶದ ಪ್ರಯಾಗರಾಜ್ನ ಮಹಾ ಕುಂಭಮೇಳದಲ್ಲಿ ಮೃತಪಟ್ಟ ಬೆಳಗಾವಿಯವರಿಗೆ ತಲಾ 2 ಲಕ್ಷ ರೂ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಘೋಷಿಸಿದ್ದಾರೆ.ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಈ ವಿಷಯ ತಿಳಿಸಿದರು, ನಮ್ಮ ತಂದೆ ಸತೀಶ್ ಜಾರಕಿಹೊಳಿಯವರು ವೈಯಕ್ತಿಕವಾಗಿ ಈ ಪರಿಹಾರ ಧನ ಕೊಡುವುದಾಗಿ ಹೇಳಿದ್ದಾರೆ, ಅಷ್ಟೇ ಅಲ್ಲ ಸಕರ್ಾರದಿಂದಲೂ ಹೆಚ್ಚಿನ ಪರಿಹಾರ…
ಬೆಳಗಾವಿ. ಉತ್ತರಪ್ರದೇಶದ ಪ್ರಯಾಗರಾಜ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಮೃತಪಟ್ಟ ನಾಲ್ವರ ಮೃತದೇಹಗಳು ದೆಹಲಿಗೆ ತಲುಪಿವೆ. ಅರುಣ ಕೋಪರ್ಡೆ ಮಹಾದೇವಿ ಭಾವನೂರ ಎರಡು ಅಂಬ್ಯುಲೆನ್ಸ್ ಮೂಲಕ ಪ್ರಯಾಗರಾಜದಿಂದ ಮೃತದೇಹಗಳನ್ನು ತರಲಾಗುತ್ತಿತ್ತು.ಆದರೆ ಅದರಲ್ಲಿ ಒಂದು ಅಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ದೆಹಲಿ ವಿಮಾನ ನಿಲ್ದಾಣ ತಲುಪಿತು ಮತ್ತೊಂದು ವಾಹನ ಹದಿನೈದು ನಿಮಿಷ ತಡವಾಯಿತು. ಹೀಗಾಗಿ ದೆಹಲಿಯಿಂದ ಮಧ್ಯಾಹ್ನ ಬಿಡುವ ವಿಮಾನದಲ್ಲಿ ಅರುಣ ಕೋಪರ್ಡೆ ಮತ್ತು ಮಹಾದೇವಿ ಬಾವನೂರ ಅವರ ಮೃತದೇಹವನ್ನು ತರಲಾಗುತ್ತಿದೆ ಅದು ಸಂಜೆ ೫.೩೦ ರ ಸುಮಾರಿಗೆ ಬೆಳಗಾವಿ ವಿಮಾನ ನಿಲ್ದಾಣ…
ಬೆಂಗಳೂರು. ರಾಜ್ಯದ ಬಿಜೆಪಿ ಅಧ್ಯಕ್ಷರುಗಳ ನೂತನ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ದೇಶದಾದ್ಯಂತ ಪಕ್ಷದ ಸಂಘಟನಾ ಪರ್ವ 2024-25 ನಡೆಯುತ್ತಿದೆ, ಇದರ ಅಂಗವಾಗಿ ಮೊದಲ ಹಂತದಲ್ಲಿ 23 ಸಂಘಟನಾತ್ಮಕ ಜಿಲ್ಲಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಲಾಗಿದೆ., 1. ಮೈಸೂರು ನಗರ – ಎಲ್. ನಾಗೇಂದ್ರ2. ಚಾಮರಾಜನಗರ – ಸಿ.ಎಸ್. ನಿರಂಜನಕುಮಾರ್3. ದಕ್ಷಿಣಕನ್ನಡ – ಸತೀಶ್ ಕುಂಪಲ.4. ಚಿಕ್ಕಮಗಳೂರು – ದೇವರಾಜ ಶೆಟ್ಟಿ5. ಶಿವಮೊಗ್ಗ – ಎಸ್.ಕೆ.ಜಗದೀಶ್.6….
ದುರ್ಘಟನೆಗೆ ಕಾರಣ ಏನು ಗೊತ್ತಾ? ಬೆಳಗಾವಿಯಿಂದ ಹೋದವರು ಮೂರುನೂರಕ್ಕೂ ಹೆಚ್ಚು ಜನ. ಸತ್ತವರು ನಾಲ್ಕು ಜನ ಸಾಯಿರಥದಿಂದ ಹೋದವರು 13 ಜನ. ಎರಡು ಬಸ್ ಮೂಲಕ ಹೋದವರು 60 ಜನ. ಹಲವರು ನಾಪತ್ತೆ. ಮೃತರನ್ನು ಕರೆತರಲು ಜಿಲ್ಲಾಡಳಿತ ವ್ಯವಸ್ಥೆ. ಗಾಯಾಳುಗಳ ಜೊತೆಗೆ ಸತತ ನಿಗಾ. ಉತ್ತರಪ್ರದೇಶ. 144 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಈಗ ನಾಲ್ಕಕ್ಕೇರಿದೆ. ವಡಗಾವಿಯ ಜ್ಯೋತಿ ಹತ್ತರವಾಟ, ಮೇಘಾ ಹತ್ತರವಾಟ, ಶೆಟ್ಡಿಗಲ್ಲಿಯ ಅರುಣ ಕೋಪರ್ಡೆ ಮತ್ತು ಮಹಾದೇವಿ ಬಾವನೂರ…
ಪ್ರಯಾಗರಾಜ ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ತಾಯಿ-ಮಗಳು ಮೃತಪಟ್ಟಿದ್ದಾರೆ. ಕಾಲ್ತುಳಿತದಲ್ಲಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿ ಆಗದೇ ಬೆಳಗಾವಿಯ ತಾಯಿ ಮಗಳು ಮೃತಪಟ್ಟಿದ್ದಾರೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಮೇಘಾ ಹತ್ತರವಾಟ ಮೃತ ದುರ್ದೈವಿಗಳು ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಣ. ಮಾಡಿದ್ದರು.13 ಜನರ ತಂಡದಲ್ಲಿ ಪ್ರಯಾಣ ಬೆಳೆಸಿದ್ದರು