ಮೇ 31ರವರೆಗೆ ವಕೀಲರಿಗೆ ಕಪ್ಪು ಕೋಟ್‌ನಿಂದ ವಿನಾಯಿತಿ
ರಾಜ್ಯದ ಜಿಲ್ಲಾ, ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಆದೇಶ. ಬೇಸಿಗೆಯ ಹಿನ್ನೆಲೆ; ಶ್ವೇತ ಉಡುಪು, ಸೊಬರ ಬಣ್ಣದ ಸೀರೆ/ಸಲ್ವಾರ್-ಕಮೀಜ್‌ಗೆ ಅವಕಾಶ ಬೆಂಗಳೂರು, ಮಾ.23:ರಾಜ್ಯದ ಜಿಲ್ಲಾ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ವಾದ ಮಂಡಿಸುವ ವಕೀಲರು ಮೇ 31, 2026ರವರೆಗೆ ಕಪ್ಪು ಕೋಟ್ ಧರಿಸುವುದರಿಂದ ವಿನಾಯಿತಿ ಪಡೆದಿದ್ದಾರೆ. ಈ ಕುರಿತು ಕರ್ನಾಟಕ ಹೈಕೋರ್ಟ್ ಸೋಮವಾರ ವೃತ್ತಪತ್ರ ಹೊರಡಿಸಿದೆ.ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರು ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಸಲ್ಲಿಸಿದ್ದ ಮನವಿಗಳನ್ನು ಪರಿಗಣಿಸಿ, ಈ ತೀರ್ಮಾನ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ…

