
ಶ್ರೀಗಳು ನಿರ್ದೋಷಿ..!
ಅಡವಿ ಸಿದ್ದೇಶ್ವರ ಮಠದ ವಿವಾದ ಸುಖಾಂತ್ಯ’ಗೋಕಾಕ:ಮೂಡಲಗಿ ತಾಲೂಕಿನ ಶಿವಾಪೂರ (ಹ) ಗ್ರಾಮದ ಪ್ರಸಿದ್ಧ ಅಡವಿ ಸಿದ್ದೇಶ್ವರ ಮಠದ ಶ್ರೀ ಅಡವಿ ಸಿದ್ದರಾಮ ಸ್ವಾಮೀಜಿಯವರ ಕುರಿತಂತೆ ಭಕ್ತರಲ್ಲಿ ಉಂಟಾದ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ.ಗೋಕಾಕ ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಡೆದ ಮಹತ್ವದ ಸಭೆಯಲ್ಲಿ ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ನೇತೃತ್ವ ವಹಿಸಿದ್ದರು.ಈ ಸಭೆಯಲ್ಲಿ ವಿವಿಧ ಮಠಗಳ ಶ್ರೀಗಳು ಹಾಗೂ ಗ್ರಾಮ ಮುಖಂಡರು ಭಾಗವಹಿಸಿದ್ದರು. ಆಂತರಿಕ ತನಿಖಾ ವರದಿ ಹಾಗೂ ಪೊಲೀಸ್…