Headlines

ಜನಿವಾರ ಪ್ರಕರಣ- ಬ್ರಾಹ್ಮಣರ ಸಭೆ ಇಂದು

RPD COLLEGE ಬಳಿಯಿರುವ ಕೃಷ್ಣಮಠದಲ್ಲಿ ಸಭೆ. ಮಹತ್ವದ ನಿರ್ಧಾರ ಸಾಧ್ಯತೆ.

ಮುಂದಿನ ಹಂತದ ಹೋರಾಟದ ಬಗ್ಗೆ ಚರ್ಚೆ.

ಸಮಾಜದ ಪ್ರಮುಖರು ಭಾಗಿ


ಬೆಳಗಾವಿ.
ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯವ್ಯಾಪಿ ಬ್ರಾಹ್ಮಣ ಸಮಾಜದ ಆಕ್ರೋಶ ಭುಗಿಲೇಳುತ್ತಿದೆ.
ಈ ಹಿನ್ನೆಲೆಯಲ್ಲಿ ನಾಳೆ ದಿ,20 ರಂದು ಬೆಳಿಗ್ಗೆ 11.30 ಕ್ಕೆ ಆರ್ಪಿಸಿ ಕ್ರಾಸ್ ಬಳಿ ಇರುವ ಕೃಷ್ಣ ಮಠದಲ್ಲಿ ಸಮಸ್ತ ಬ್ರಾಹ್ಮಣರ ಸಮಾಜದ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಜನಿವಾರ ಧರಿಸುವ ಮತ್ತು ್ತಕಾಶೀಧಾರವನ್ನು ಕಟ್ಟಿಕೊಳ್ಳುವ ಪ್ರತಿಯೊಬ್ಬರೂ ಭಾಗವಹಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.

ಕಠಿಣ ಕ್ರಮ ಜರುಗಿಸಿ..!
ಜನಿವಾರ ಕತ್ತಿರಿಸುವುದಲ್ಲದೇ ಕಾಶಿಧಾರವನ್ನು ತುಂಡರಿಸುವ ಮೂಲಕ ಸಮಸ್ತ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ಎಕೆಬಿಎಂಎಸ್ ನ ಜಿಲ್ಲಾಧ್ಯಕ್ಷ ಅಕ್ಷಯ ಕುಲಕರ್ಣಿ ಆರೋಪಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರವನ್ನು ಹರಿದು ಹಾಕಿದ್ದು ಅನಾಗರಿಕ ಸಂಗತಿ.
ಜನಿವಾರ ಅಂದರೆ ಕೇವಲ ದಾರವಲ್ಲ. ಅದು ಸಾವಿರಾರು ವರ್ಷದ ಸಂಸ್ಕೃತಿಯ, ಆಚಾರ ವಿಚಾರದ, ಶಿಸ್ತಿನ ಪ್ರತೀಕ. ಅದನ್ನು ಬಲವಂತವಾಗಿ ತೆಗೆಯುವುದು, ನಾನಾ ರೂಪದ ದಾಸ್ಯತೆಯ ವಿರುದ್ಧ ಬ್ರಾಹ್ಮಣ ಸಮಾಜವೇ ತಲೆ ಎತ್ತಿ ಹೋರಾಡಿದ ಬೌದ್ಧಿಕ ಪರಂಪರೆಯ ಮೇಲಿನ ಅಪಮಾನ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಕೂಡ ಬ್ರಾಹ್ಮಣ ಸಮಾಜದ ನಿಂದನೆ ಪ್ರಕರಣಗಳು ಜರುಗಿದ ಸಂದರ್ಭದಲ್ಲಿ ಆಗಿನ ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ ನೇತೃತ್ವದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆದಿತ್ತು ಎಂದು ಅವರು ವಿವರಿಸಿದ್ದಾರೆ.
ಬ್ರಾಹ್ಮಣರು ಶಾಂತ ಸ್ವಭಾವದವರು. ಅವರ ತಪೋಬಲವನ್ನು ಬಲ ಹೀನತೆಯೆಂದು ಯಾರೂ ಭಾವಿಸಬಾರದು, ಶಾಂತಿ ನಮ್ಮ ಅಸ್ತ್ರ, ಆದರೆ ಅಗತ್ಯವಿದ್ದರೆ ಧರ್ಮ ರಕ್ಷಣೆಗಾಗಿ ದುಷ್ಟರನ್ನು ಎದುರಿಸುವ ಶಕ್ತಿ ನಮ್ಮಲ್ಲಿದೆ ಎನ್ನುವ ಎಚ್ಚರಿಕೆ ಸಂದೇಶವನ್ನು ಅವರು ನೀಡಿದ್ದಾರೆ..
ಈ ದೇಶದಲ್ಲಿ ಪ್ರತಿಯೊಬ್ಬ ಸಮುದಾಯದ ಗೌರವ ಜೀವಂತವಾಗಿರಬೇಕು. ಆದರೆ ಅದಕ್ಕಾಗಿ ಬ್ರಾಹ್ಮಣರ ಆತ್ಮಗೌರವವನ್ನೇ ಕೊನೆಗೊಳಿಸುವ ನಿರ್ಲಜ್ಜ ಪ್ರಯತ್ನ ಎಂದಿಗೂ ಯಶಸ್ವಿಯಾಗಲ್ಲ ಎಂದು ಅಕ್ಷಯ ಕುಲಕರ್ಣಿ ಹೇಳಿದ್ದಾರೆ

Leave a Reply

Your email address will not be published. Required fields are marked *

error: Content is protected !!