
ಗಡಿನಾಡಲ್ಲಿ ರಾಜಕೀಯ ಬಾಂಬ್?
ಶರದ್ ಪವಾರ್, ಪ್ರಭಾಕರ್ ಕೋರೆ ಭೆಟ್ಟಿ
ಗಡಿನಾಡಲ್ಲಿ ಕುತೂಹಲ ಸ್ಪೋಟ… !
ಪಕ್ಷರೇಖೆ ಮೀರಿ ನಡೆದ ಮಾತುಕತೆ
ಮುಂದಿನ ಲೆಕ್ಕಾಚಾರ ಶುರುವಾಯಿತಾ?
ಡಿನ್ನರ್ ಮಾತಿನ ಮರ್ಮವೇನು?
ಭವಿಷ್ಯದ ರಾಜಕೀಯ ಲೆಕ್ಕಾಚಾರ ಒಂದೇ ಟೇಬಲ್ಲಿನಲ್ಲಿ ನಡೆಯುತ್ತಿದೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ. .
ಇದು ಕೇವಲ ಭೆಟ್ಟಿಯಲ್ಲ . ಇದು ಗಡಿ ಭಾಗದ ರಾಜಕೀಯದ ಹೊಸ ಲೆಕ್ಕದ ಶುಭಾರಂಭ ಎಂಬುದು ರಾಜಕೀಯ ವೀಕ್ಷಕರ ಅಭಿಪ್ರಾಯ.
ಇನ್ನು ಮುಂದೆ ನಡೆಯಲಿರುವ ರಾಜಕೀಯ ಬದಲಾವಣೆಗಳಲ್ಲಿ ಈ ಭೆಟ್ಟಿ ಒಂದು ಮೈಲಿಗಲ್ಲು ಆಗಬಹುದೆಂಬ ನಿರೀಕ್ಷೆಯಿದೆ. ಬೆಳಗಾವಿಯ ಭವಿಷ್ಯ ಈಗ ಡಿನ್ನರ್ ಟೇಬಲ್ಗಳ ಡಿಸೈನಿಂಗ್ ರೂಮಲ್ಲಿ ರೂಪುಗೊಳ್ಳುತ್ತಿದೆ
ಇ ಬೆಳಗಾವಿ ವಿಶೇಷ
ಬೆಳಗಾವಿ:
ರಾಜಕೀಯದಲ್ಲಿ ‘ಕೇವಲ ಭೆಟ್ಟಿ’ ಮತ್ತು ‘ಸೌಹಾರ್ಧಯುತ’ ಅನ್ನೋದನ್ನ ಅರ್ಥಮಾಡಿಕೊಳ್ಳೋಕೆ ಸಾಮಾನ್ಯ ಮತದಾರನಿಗೆ ಸಮಯ ಬೇಕು.!
ಆದರೆ ಶರದ್ ಪವಾರ್ ಮತ್ತು ಡಾ. ಪ್ರಭಾಕರ್ ಕೋರೆ ನಡುವೆ ನಡೆದ ಅಂತಹದ್ದೊಂದು ‘ಸೌಹಾರ್ದಯುತ’ ಭೇಟಿಯು ಈಗ ರಾಜಕೀಯ ವಲಯದಲ್ಲಿ ಬಿರುಗಾಳಿಯಂತೆ ಅಪ್ಪಳಿಸುತ್ತಿದೆ!

ಯಳ್ಳೂರಿನ ಶಾಲಾ ಶತಮಾನೋತ್ಸವದ ನೆಪದಲ್ಲಿ ಬೆಳಗಾವಿಗೆ ಬಂದ ಶರದ್ ಪವಾರ್ ನೇರವಾಗಿ ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಕೆಎಲ್ಇ ಕಾಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ನಿವಾಸಕ್ಕೆ ಭೇಟಿ ನೀಡಿದ ವಿಚಾರ, ಭೋಜನದ ಮೇಜಿನಲ್ಲೇ ರಾಜಕೀಯ ಪಚಡಿಗೆ ಇನ್ನಷ್ಟು ರುಚಿ ನೀಡಿದಂತಾಗಿದೆ!

ಭೋಜನದ ಮೇಜು!
ಇದು ಕೇವಲ ಊಟವೋ ಅಥವಾ ಮುಂದಿನ ರಾಜಕೀಯ ಬೆಳವಣಿಗೆ ಪ್ರಾರಂಭವೋ ಎಂಬುದು ಇದೀಗ ಚರ್ಚೆ ವಿಷಯ. ಪವಾರ್ ಮಾತಿನ ಪ್ರಕಾರ ಈ ಭೆಟ್ಟಿಗೆ ಯಾವುದೇ ರಾಜಕೀಯ ಅರ್ಥವಿಲ್ಲ ಎಂದರೂ ಹಿಂದಿನ ನೋಟದಲ್ಲಿರುವುದು ಸಧ್ಯಕ್ಕೆ ಯಾರಿಗೂ ಅರ್ಥವಾಗುವ ಮಾತಲ್ಲ.
ಬಿಜೆಪಿಯಲ್ಲಿ ನಿರ್ಲಕ್ಷ್ಯ? ಕೋರೆ ಬೆಂಬಲಿಗರ ಅಸಮಾಧಾನ
ಡಾ. ಕೋರೆ ಅವರನ್ನು ಬಿಜೆಪಿ ವಲಯದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ ಎನ್ನುವ ಅಸಮಾಧಾನ ಅವರ ಬೆಂಬಲಿಗರಲ್ಲಿದೆ.
ಆಧರೆ “ಅವರಂತಹ ಹಿರಿಯ ನಾಯಕರನ್ನು ಕಡೆಗಣಿಸಿದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಾಠ ಕಲಿತರೂ ಅಚ್ಚರಿ ಪಡಬೇಕಿಲ್ಲ ಎನ್ನುವುದಕ್ಕೆ ಅನೇಕ ನಿದರ್ಶನಗಳು ಈಗಿನಿಂದಲೇ ಶುರುವಾಗಿ ಬಿಟ್ಟಿವೆ.

ಗಡಿ ರಾಜಕಾರಣದ ಸ್ಟ್ರಾಟೆಜಿಕ್ ಮಿಲನ?
ಮಹಾರಾಷ್ಟ್ರದ ಎನ್ಸಿಪಿಯ ದೊಡ್ಡ ನಾಯಕ ಶರದ ಪವಾರ್. ಇನ್ನೊಂದು ಕಡೆ ಬೆಳಗಾವಿಯ ಕೆಎಲ್ಇ ಸಂಸ್ಥೆಯ ನಾಯಕ ಡಾ, ಪ್ರಭಾಕರ ಕೋರೆ,
ಈಗ ಇವರಿಬ್ಬರ ಬಾಂಧವ್ಯವು ಕೇವಲ ಆತ್ಮೀಯತೆ ಅಲ್ಲ, ಗಡಿ ರಾಜಕಾರಣದಲ್ಲಿ ಹೊಸ ಶಕ್ತಿ ಸಮೀಕರಣದ ಚಿಹ್ನೆ ಎಂಬಂತೆ ಕಾಣಿಸುತ್ತಿದೆ.
ವರ್ಚಸ್ಸಿಗೆ ವೋಟು ಹಾಕುವ ನಾಯಕ!

ಕೆಎಲ್ಇ ಸಂಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಬೆಳಸಿದವರು, ಸಮುದಾಯ ಸೇವೆಯಲ್ಲಿ ನಂಬಿಕೆಯ ಹೆಸರು ಮತ್ತು ರಾಜಕೀಯವಾಗಿ ಶಾಂತ ಸ್ವಭಾವದ ಕೋರೆ ಈಗ ಮತ್ತೆ ಕೇಂದ್ರ ಬಿಂದುವಾಗುತ್ತಿದ್ದಾರೆ. ಪವಾರ್ ಅವರ ಭೇಟಿ ಈ ಮಾತಿಗೆ ಸೀಲು ಹಾಕಿದಂತಾಗಿದೆ
ಇಲ್ಲಿ ಶರದ್ ಪವಾರ್ ಕೇವಲ ಮಾತುಗಳ ಮನುಷ್ಯವಲ್ಲ. ಅವರು ಜಗತ್ತನ್ನು ಓದಿ ಮುನ್ನಡೆಯುವ ರಾಜಕಾರಣಿಗಳ ಸಾಲಿನಲ್ಲಿ ಬೆಳೆದವರು.

