Headlines

ಯಳ್ಳೂರು ಹೋರಾಟದ ಭೂಮಿ- ಪವಾರ್

ಬೆಳಗಾವಿ
“ಯಳ್ಳೂರು’ ಕೇವಲ ಒಂದು ಗ್ರಾಮವಲ್ಲ, ಇದು ಹೋರಾಟದ ಭೂಮಿ, ಶೈಕ್ಷಣಿಕ ಕ್ರಾಂತಿಯ ಪುಟಗಳನ್ನು ಬರೆದ ಸ್ಥಳ ಎಂದು ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಹೇಳಿದರು.

ಯಳ್ಳೂರಿನ ಸರ್ಕಾರಿ ಮರಾಠಿ ಮಾದರಿ ಶಾಲೆಯ ಶತಕೋತ್ತರ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಈ ಗ್ರಾಮಕ್ಕೆ ವಿಶೇಷ ಮಹತ್ವವಿತ್ತು. ಇಲ್ಲಿ ಜನರು ಅನ್ಯಾಯದ ವಿರುದ್ಧ ಧೈರ್ಯದಿಂದ ಎದ್ದು ನಿಂತರು. ಈ ಹೋರಾಟದ ಆತ್ಮವನ್ನೇ ಶಾಲೆಯು ತಮ್ಮ ಮಕ್ಕಳಿಗೆ ಶಿಕ್ಷಣ ರೂಪದಲ್ಲಿ ನೀಡಿತು ಎಂದರು.


ಯಳ್ಳೂರಿನ ಶೈಕ್ಷಣಿಕ ಚಿಂತಕರು, ಗ್ರಾಮಸ್ಥರು ಶಿಕ್ಷಣದ ಮೂಲಕ ಸಮಾಜವನ್ನು ಎಚ್ಚರಿಸಲು ಪ್ರಯತ್ನಿಸಿದರು. ಈ ಶಾಲೆಯಿಂದ ಅನೆಕ ಗಣ್ಯರು, ಅಧಿಕಾರಿಗಳು, ಸಮಾಜ ಸೇವಕರು ಬೆಳೆದಿದ್ದಾರೆ. ಇದು ಈ ಸಂಸ್ಥೆಯ ಗೌರವವನ್ನು ಹೆಚ್ಚಿಸುತ್ತದೆ ಎಂದರು.
“ಅಕ್ಷರ ಸಂಸ್ಕೃತಿಯ ಬೆಳವಣಿಗೆ ಇಲ್ಲದಿದ್ದರೆ ಸಮಾಜದ ಪ್ರಗತಿಗೆ ಅಡ್ಡಿಯಾಗುತ್ತದೆ. ಗ್ರಾಮೀಣ ಪ್ರದೇಶಗಳ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಾಲೆಗಳು ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು. ಆದ್ದರಿಂದ ಹಳೆಯ ವಿದ್ಯಾಥರ್ಿಗಳು ಮತ್ತು ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು,
ಶಿಕ್ಷಣದ ಹೊಸ ಸವಾಲುಗಳ ಬಗ್ಗೆ ಮಾತನಾಡಿದ ಪವಾರ್,
ಈಗಿನ ಪೀಳಿಗೆಗೆ ಕೇವಲ ಪಾಠದ ಜೊತೆಗೆ ನೈತಿಕತೆ, ಶಿಸ್ತು, ರಾಷ್ಟ್ರಪ್ರೇಮವೂ ಬೇಕಾಗಿದೆ. ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳನ್ನು ಸಮಗ್ರ ವ್ಯಕ್ತಿತ್ವಗಳಾಗಿ ಬೆಳೆಸುವುದು ಶಾಲೆಗಳ ಗುರಿಯಾಗಬೇಕು ಎಂದು ಸಲಹೆ ನೀಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿದರು. ಶಿವಾಜಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಾಣಿಕರಾವ್ ಸಾಳುಂಕೆ, ಡಾ. ಪ್ರಭಾಕರ್ ಕೋರೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ವಿಠ್ಠಲರಾವ್ ಹಲಗೇಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅರವಿಂದ ಪಾಟೀಲ, ರಾವಜಿ ಪಾಟೀಲ, ಎನ್.ಡಿ.ಗೋರೆ, ಸತೀಶ್ ಪಾಟೀಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!