ಕ್ಯಾಂಟಿಲೀವರ್ ವಶಕ್ಕೆ ಪಡೆದ ಪಾಲಿಕೆ

ಅಕ್ರಮ ಜಾಹೀರಾತು ಫಲಕ ತೆರವುಗೊಳಿಸಿದ ಪಾಲಿಕೆ.

ಕಳೆದ ಪಾಲಿಕೆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಅನುಷ್ಠಾನಗೊಳಿಸಿದ ಆಯುಕ್ತರು.

ದಿ.6 ರ ರಾತ್ರಿ ಯಿಂದಲೇ ಜಾಹೀರಾತು ಫಲಕ ವಶಕ್ಕೆ ತೆಗೆದುಕೊಳ್ಳುವ ಕೆಲಸ ಆರಂಭಿಸಿದ ಸಿಬ್ಬಂದಿ.

ಶಾಸಕ ಅಭಯ ಪಾಟೀಲ ಪ್ರಸ್ತಾಪಿಸಿದ್ದ ವಿಷಯ ಇದು

ಬೆಳಗಾವಿ.
ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ‌ ಬಹು ಚರ್ಚಿತವಾದ ಆದೇಶದ ಪ್ರಕಾರ ಅವಧಿ ಮುಗಿದ ಜಾಹೀರಾತು (ಕ್ಯಾಂಟೀಲಿವರ್) ಫಲಕಗಳನ್ನು ಪಾಲಿಕೆ ವಶಕ್ಕೆ ಪಡೆದುಕೊಂಡಿದೆ.

ದಿ. 6 ರಂದೇ ಅವಧಿ‌ ಮುಗಿದ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಗಳು ರಾತ್ರಿ ಹೊತ್ತು ಕಾರ್ಯಾಚರಣೆ ನಡೆಸಿ ಅವುಗಳನ್ನು ವಶಕ್ಕೆ ಪಡೆದುಕೊಂಡು ಅದರ ಮೇಲೆ ಪಾಲಿಕೆ ಸಂಬಂಧಿಸಿದ ಬರಹಗಳನ್ನು ಅಂಟಿಸುವ ಕೆಲಸ ಮಾಡಿದರು.

ನಗರದ ಚನ್ನಮ್ಮ ವೃತ್ತದಿಂದಲೇ ಈ ಪ್ರಕ್ರಿಯೆ ಆರಂಭವಾಯಿತು. ಬೆಳಗಾವಿ ನಗರದಲ್ಲಿ ಸುಮಾರು 24 ಫಲಕಗಳಿವೆ. ಕಳೆದ ಬೆಳಗಾವಿ ಮಹಾನಗರ ಪಾಲಿಕೆ ಪರಿಷತ್ ಸಭಾದಲ್ಲಿ ತೆಗೆದುಕೊಂಡ ಠರಾವನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನ ಗೊಳಿಸುತ್ತಿರುವ ಆಯುಕ್ತರು ಇವರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!