ಯಂತ್ರ ಶಕ್ತಿಯಿಂದ ಒಳಚರಂಡಿ ಶುದ್ಧತೆ!”


ಯಂತ್ರ ಶಕ್ತಿಯಿಂದ ಒಳಚರಂಡಿ ಶುದ್ಧತೆ!”

ಯುಜಿಡಿ ಸಮಸ್ಯೆಗೆ ರೋಬೋಟ್ ಪರಿಹಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಹೊಸ ಯತ್ನ

ಬೆಳಗಾವಿ:
ಗಡಿನಾಡ ನಗರ ಬೆಳಗಾವಿ ತನ್ನ ಶುದ್ಧತೆಯ ಹೋರಾಟಕ್ಕೆ ತಾಂತ್ರಿಕ ಶಸ್ತ್ರಾಸ್ತ್ರ ಹಸ್ತಗತ ಮಾಡಿಕೊಂಡಿದೆ! ನಿತ್ಯ ಹೆಚ್ಚುತ್ತಿರುವ ಒಳಚರಂಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ, ಈ ಬಾರಿ ಹೊಸ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ರೋಬೋಟಿಕ್ ಇನ್ಸ್‌ಪೆಕ್ಷನ್ ಮಷೀನ್ ಮೂಲಕ ಸಮಸ್ಯೆಗಳ ಪತ್ತೆ ಹಚ್ಚುವ ನೂತನ ಪ್ರಯೋಗ ಆರಂಭಿಸಿದೆ.

ಹನುಮಾನ್ ನಗರದ ಬಳಿಯಲ್ಲಿ ನಡೆದ ಪ್ರಾಯೋಗಿಕ ಪ್ರದರ್ಶನದಲ್ಲಿ ಮಹಾಪೌರ ಮಂಗೇಶ ಪವಾರ, ಉಪಮಹಾಪೌರ ವಾಣಿ ವಿಲಾಸ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಹಾಗೂ ಹಲವಾರು ನಗರಸೇವಕರು ಮತ್ತು ಪಾಲಿಕೆ ಅಧಿಕಾರಿಗಳು ಸಾಕ್ಷಿಯಾಗಿದ್ದರು.
ಕಂಪನಿಯ ತಜ್ಞರು ಯಂತ್ರದ ಕಾರ್ಯವೈಖರಿ, ತಾಂತ್ರಿಕ ಅಂಶಗಳು ಹಾಗೂ ಬಳಕೆಯ ಸವಾಲುಗಳನ್ನು ವಿವರಿಸಿದರು.


ರೋಬೋಟ್‌ನ ಕೆಲಸ ಹೇಗಿರುತ್ತದೆ?

ಇದು ಅತಿ ಸಂವೇದನಾಶೀಲ ಕ್ಯಾಮೆರಾ ಮತ್ತು ಸೆನ್ಸಾರ್‌ಗಳಿಂದ ಲಸಿಯುಡುಗರಂತೆ ಒಳಚರಂಡಿಗೆ ಇಳಿದು, ಬ್ಲಾಕೇಜ್, ಲಿಕೇಜ್, ನೀರಿನ ಮಿಶ್ರಣದಂತಹ ಸಮಸ್ಯೆಗಳನ್ನು ನಿಖರವಾಗಿ ಪತ್ತೆಹಚ್ಚುತ್ತದೆ. ಪೈಪ್ಲೈನ್ ಒಳಗಿನ ನಿಜವಾದ ದೃಶ್ಯಾವಳಿಯನ್ನು ಲೈವ್ ಫೀಡ್ ಮೂಲಕ ನೀಡುವ ಸಾಮರ್ಥ್ಯ ಈ ಯಂತ್ರಕ್ಕೆ ಇದೆ. ಪೈಪುಗಳು ಕುಸಿಯುವ ಮೊದಲು ಎಚ್ಚರಿಕೆ ನೀಡುವ ಸಾಮರ್ಥ್ಯ ಇದರಲ್ಲಿ ಅಡಕವಾಗಿದೆ.


ವ್ಯಯ ಹಾಗೂ ನಿರ್ವಹಣೆಯ ಯೋಜನೆ

ಮೌಲ್ಯ: ₹27 ಲಕ್ಷ

ತರಬೇತಿ: ಒಂದು ತಿಂಗಳ ಉಚಿತ

ದೀರ್ಘಾವಧಿಯ ಒಪ್ಪಂದ: ₹5.5 ಕೋಟಿ ವೆಚ್ಚದಲ್ಲಿ 3 ವರ್ಷಗಳ ಕಾಲ ಕಂಪನಿಯೇ ನಿರ್ವಹಣೆ

ಉದ್ಯೋಗ ಭೀತಿಗೆ ಅಗತ್ಯವಿಲ್ಲ:

“ಇದು ಪೌರ ಕಾರ್ಮಿಕರ ಕೆಲಸ ಕಿತ್ತುಕೊಳ್ಳಲ್ಲ, ಕೇವಲ ಪತ್ತೆ ಹಚ್ಚುವ ಉಪಕರಣ ಮಾತ್ರ” ಎಂದು ಮಹಾಪೌರ ಮಂಗೇಶ ಪವಾರ ಸ್ಪಷ್ಟಪಡಿಸಿದರು.


ಈ ಯಂತ್ರದ ಬಳಕೆ ಯುಜಿಡಿ ನಿರ್ವಹಣೆಯಲ್ಲಿ ನಿಖರತೆ, ವೇಗ, ಸುರಕ್ಷತೆ ಮತ್ತು ಶುದ್ಧತೆಯ ಹೊಸ ಅಧ್ಯಾಯ ಆರಂಭಿಸಬಹುದು. ಮನುಷ್ಯರ ಸಾಂದರ್ಭಿಕ ಶ್ರಮದ ಬದಲಿಗೆ ತಂತ್ರಜ್ಞಾನದ ಸಮರ್ಥ ಬಳಕೆಯ ಜೊತೆಗೆ ದುರಂತಗಳು ಮತ್ತು ವಿಳಂಬಗಳನ್ನು ತಪ್ಪಿಸುವ ದಿಕ್ಕಿನಲ್ಲಿ ಇದು ಹೆಜ್ಜೆ ಇರಲಿದೆ.

ಉಪಮಹಾಪೌರ ವಾಣಿ ಜೋಷಿ ಅವರು ಮಾತನಾಡಿ, “ಅವಶ್ಯಕತೆ ಮತ್ತು ಫಲಿತಾಂಶಗಳ ಆಧಾರದ ಮೇಲೆ ಖರೀದಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು,” ಎಂದು ಹೇಳಿದರು.


ಬೆಳಗಾವಿಗೆ ಶುದ್ಧತೆಯ ಹೊಸ ಶಕ್ತಿ ಬಂದಿದೆಯೇ? ಈ ಯಂತ್ರ ಪ್ರಯೋಗ ಯಶಸ್ವಿಯಾದರೆ, ನಗರಗಳ ನಿರ್ವಹಣೆಯಲ್ಲಿ ಬದಲಾಗುವ ಕಥಾನಕಕ್ಕೆ ಬೆಳಗಾವಿಯೇ ಉದಾಹರಣೆ ಆಗಲಿದೆ!.

Leave a Reply

Your email address will not be published. Required fields are marked *

error: Content is protected !!